ETV Bharat / sports

ಸಚಿನ್​ ದಾಖಲೆ ಸರಿಗಟ್ಟುವ ಭಾರ ವಿರಾಟ್​ ಮೇಲಿತ್ತು, ಇನ್ನು ಒತ್ತಡ ರಹಿತರಾಗಿ ಆಡುತ್ತಾರೆ: ರಿಕಿ ಪಾಂಟಿಂಗ್​ - ETV Bharath Karnataka

ದಕ್ಷಿಣ ಆಫ್ರಿಕಾದ ವಿರುದ್ಧ ಭಾನುವಾರ ನಡೆದ ವಿಶ್ವಕಪ್​ ಪಂದ್ಯದಲ್ಲಿ ಶತಕ ಗಳಿಸಿದ ವಿರಾಟ್​ ಕೊಹ್ಲಿ ಸಿಚಿನ್​ ತೆಂಡೂಲ್ಕರ್​ ದಾಖಲೆ ಸರಿಗಟ್ಟಿದ್ದಾರೆ.

Ricky Ponting on Virat Kohli
Ricky Ponting on Virat Kohli
author img

By ETV Bharat Karnataka Team

Published : Nov 6, 2023, 3:43 PM IST

ದುಬೈ : ನಡೆಯುತ್ತಿರುವ ವಿಶ್ವಕಪ್​​ನಲ್ಲಿ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 4 ಅರ್ಧಶತಕ 2 ಶತಕದ ನೆರವಿನಿಂದ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್​ (543) ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಡಿ ಕಾಕ್​ ಅವರಿಂದ ಕೇವಲ 7 ರನ್​ ಕಡಿಮೆ ಹೊಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ನಂತರ ವಿರಾಟ್​ ಈ ಸ್ಥಾನಕ್ಕೆ ಏರಿದ್ದಾರೆ.

ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಭಾನುವಾರ ಸರಿಗಟ್ಟಿದ್ದಾರೆ. ಈ ದಾಖಲೆ ಬರೆದ ವಿರಾಟ್​ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್​ ಹೊಗಳಿದ್ದಾರೆ. ಅಲ್ಲದೇ ವಿರಾಟ್​ ಈ ವಿಶ್ವಕಪ್​ನಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ವಿರಾಟ್​ ತಮ್ಮ 35ನೇ ಹುಟ್ಟುಹಬ್ಬದಂದು ದಕ್ಷಿಣ ಆಫ್ರಿಕಾ ವಿರುದ್ಧದ ಅದ್ಭುತ ಶತಕದೊಂದಿಗೆ, ಕೊಹ್ಲಿ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2009ರಲ್ಲಿ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಏಕದಿನ ಕ್ರಿಕೆಟ್​ನ ಶತಕವನ್ನು ಕೋಲ್ಕತ್ತಾದ ಈಡನ್​​ ಗಾರ್ಡನ್ಸ್​ನಲ್ಲೇ ದಾಖಲಿಸಿದ್ದರು. ಈಗ ಸಚಿನ್​ ಅವರ ದಾಖಲೆಯನ್ನು ಅದೇ ಮೈದಾನದಲ್ಲಿ ಸಮಮಾಡಿಕೊಂಡು ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು.

  • " class="align-text-top noRightClick twitterSection" data="">

ಸಚಿನ್​ ದಾಖಲೆಯನ್ನು ಸರಿಗಟ್ಟಿದ ನಂತರ ವಿರಾಟ್​ ಒತ್ತಡ ರಹಿತವಾಗಿ ಆಡುತ್ತಾರೆ ಎಂದು ರಿಕಿ ಪಾಂಟಿಂಗ್ ಐಸಿಸಿ ಜೊತೆಗೆ ಮಾತನಾಡುವಾಗ​ ಹೇಳಿದ್ದಾರೆ. "ಸಚಿನ್​ ಶತಕ ಸರಿಟಗಟ್ಟಬೇಕೆಂಬ ಭಾರವನ್ನು ವಿರಾಟ್​ ಬೆನ್ನಮೇಲೆ ಹೇರಿದಂತಿತ್ತು. ಆ ದಾಖಲೆ ಮಾಡಿದ ನಂತರ ಚೇಸ್​ ಮಾಸ್ಟರ್​ ಒತ್ತಡ ರಹಿತವಾಗಿ ಬ್ಯಾಟ್​ ಮಾಡುತ್ತಾರೆ. ಸಚಿನ್​ ದಾಖಲೆಯನ್ನು ಸರಿಗಟ್ಟಲು ಹೆಚ್ಚಿನ ಶ್ರಮವಹಿಸಿ ವಿರಾಟ್​ ಆಡಿದ್ದಾರೆ. ಉತ್ತಮ ಸಮಯದಲ್ಲಿ ಅವರು ಒತ್ತಡವನ್ನು ಕಳೆದುಕೊಂಡಿದ್ದಾರೆ. ಲೀಗ್​ನಲ್ಲಿ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ. ಮುಂದಿನ ಮಹತ್ವದ ಪಂದ್ಯಗಳಲ್ಲಿ ಅವರು ಇನ್ನಷ್ಟು ಉತ್ತಮವಾಗಿ ಆಡುತ್ತಾರೆ" ಎಂದು ಪಾಂಟಿಂಗ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ವಿರಾಟ್ ಶ್ರೇಷ್ಠ ಕ್ರಿಕೆಟ್​ ಎಂಬುದರಲ್ಲಿ ಸಂದೇಹ ಇಲ್ಲ. ಅವರು ಸಚಿನ್​ ದಾಖಲೆ ಸರಿಗಟ್ಟುವುದು, ಮುರಿಯುವುದು ಅಗತ್ಯವಿಲ್ಲ. ಅವರ ಒಟ್ಟಾರೆ ಬ್ಯಾಟಿಂಗ್​ ಅಂಕಿ-ಅಂಶವನ್ನು ನೋಡಿದರೆ, ಅವರೊಬ್ಬ ಲೆಜೆಂಡ್​ ಕ್ರಿಕೆಟರ್​ ಎಂದು ಹೇಳಬಹುದು. 49ನೇ ಏಕದಿನ ಶತಕವನ್ನು ಸಚಿನ್​ ಅವರಿಗಿಂತ 175 ಇನ್ನಿಂಗ್ಸ್​ ಮೊದಲೇ ಸಾಧಿಸಿದ್ದಾರೆ" ಎಂದು ರಿಕಿ ಹೇಳಿದ್ದಾರೆ.

ಕೊಹ್ಲಿಯ ಅದ್ಭುತ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಅರ್ಧಶತಕ ಹಾಗೇ ರೋಹಿತ್ ಶರ್ಮಾ, ಶುಭಮನ್ ಗಿಲ್ ಆಕ್ರಮಣಕಾರಿ ಆರಂಭದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 326/5 ಕಲೆಹಾಕಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತೀಯ ಬೌಲರ್‌ಗಳು ಹರಿಣಗಳ ಮೇಲೆ ಪ್ರಬಲ ದಾಳಿ ನಡೆಸಿದ್ದರಿಂದ 83 ರನ್​ಗೆ ಸರ್ವಪತನ ಕಂಡರು. ರವೀಂದ್ರ ಜಡೇಜಾ 33 ರನ್​ ಕೊಟ್ಟು 5 ವಿಕೆಟ್​ ಕಬಳಿಸಿ ಬವುಮಾ ಪಡೆಯನ್ನು ಕಾಡಿದರು.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‌: 2 ಸ್ಥಾನಕ್ಕೆ 4 ತಂಡಗಳ ಹೋರಾಟ; ಭಾರತಕ್ಕೆ ಸೆಮಿಫೈನಲ್‌ನಲ್ಲಿ ಪೈಪೋಟಿ ನೀಡುವವರಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.