ದುಬೈ: "ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ವೈಫಲ್ಯ ಅನುಭವಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಹಳೆಯ ಪ್ರದರ್ಶನವನ್ನು ಸಂಪೂರ್ಣ ಕಡೆಗಣಿಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಭಾರತದ ವಿಶ್ವಕಪ್ ತಂಡದಲ್ಲಿ ಸೂರ್ಯ ಕುಮಾರ್ ಯಾದವ್ ಇರಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗೆ ರಿಕಿ ಪಾಂಟಿಂಗ್ ಹೇಳಿದರು.
ಐಸಿಸಿ ರಿವೀವ್ನ ಇತ್ತೀಚಿನ ಸಂಚಿಕೆಯಲ್ಲಿ ಏಕದಿನ ವಿಶ್ವಕಪ್ನ ಭಾರತ ತಂಡದ ಬಗ್ಗೆ ಚರ್ಚಿಸುವಾಗ, ಸೂರ್ಯ ಕುಮಾರ್ ಯಾದವ್ ತಂಡದಲ್ಲಿ ಮಧ್ಯಮ ಕ್ರಮಾಂಕಕ್ಕೆ ಅಗತ್ಯ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ವೈಟ್-ಬಾಲ್ ಸ್ಟಾರ್ ಸೂರ್ಯಕುಮಾರ್ ಯಾದವ್ ಮತ್ತು ಭಾರತದ ಇತರ ಬ್ಯಾಟಿಂಗ್ ಲೈನ್‌ಅಪ್ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ.
-
Ricky Ponting marked out Suryakumar Yadav’s propensity to win big games and likened him to Australia's former all-rounder 👀
— ICC (@ICC) April 7, 2023 " class="align-text-top noRightClick twitterSection" data="
More 👉 https://t.co/bgzlheVT6Q pic.twitter.com/FzrOVgAMPF
">Ricky Ponting marked out Suryakumar Yadav’s propensity to win big games and likened him to Australia's former all-rounder 👀
— ICC (@ICC) April 7, 2023
More 👉 https://t.co/bgzlheVT6Q pic.twitter.com/FzrOVgAMPFRicky Ponting marked out Suryakumar Yadav’s propensity to win big games and likened him to Australia's former all-rounder 👀
— ICC (@ICC) April 7, 2023
More 👉 https://t.co/bgzlheVT6Q pic.twitter.com/FzrOVgAMPF
ಏಕದಿನ ಕ್ರಿಕೆಟ್ನ ಭಾರತ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಉದಯೋನ್ಮುಖ ಓಪನರ್ ಶುಭಮನ್ ಗಿಲ್ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಇದ್ದಾರೆ. ಆದರೆ, ಈ ವರ್ಷಾಂತ್ಯದ ವೇಳೆಗೆ ನಡೆಯುವ ಏಕದಿನ ವಿಶ್ವಕಪ್ಗೆ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರರ ಅಗತ್ಯ ಹುಡುಕಾಟ ಇದೆ, ಇಲ್ಲಿನ ಖಾಲಿ ಜಾಗವನ್ನು ತುಂಬುವ ಬಗ್ಗೆ ಪಾಂಟಿಂಗ್ ಕೆಲ ಆಟಗಾರರನ್ನು ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅವರ ಇತ್ತೀಚಿನ ಏಕದಿನ ಸರಣಿಯ ಸೋಲಿನ ಸಂದರ್ಭದಲ್ಲಿ, ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆ ಕಂಡು ಬಂದಿತ್ತು. ಸೂರ್ಯಕುಮಾರ್ ವಿಶೇಷವಾಗಿ ಹೆಣಗಾಡಿದರು. ಮೂರು ಇನ್ನಿಂಗ್ಸ್‌ಗಳಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಟೀಕೆಗೆ ಒಳಗಾಗಿದ್ದರು. ಫೆಬ್ರವರಿ 2022 ರಲ್ಲಿ ಸೂರ್ಯ ಅವರು ಏಕದಿನ ಅರ್ಧಶತಕ ಗಳಿಸಿದ್ದರು. ಏಕದಿನದಲ್ಲಿ ಯಾದವ್ ಅವರು ಕೇವಲ 12.28 ಸರಾಸರಿಯಲ್ಲಿ 172 ರನ್ ಗಳಿಸಿದ್ದಾರೆ. ಆದರೆ ಕೊನೆಯ ಏಕದಿನ ಸರಣಿಯ ವಿಫಲತೆಯ ನಂತರವೂ ಪಾಂಟಿಂಗ್ ವಿಶ್ವಕಪ್ ತಂಡಕ್ಕೆ ಸೂರ್ಯ ಕುಮಾರ್ ಅವರನ್ನು ಸೂಚಿಸಿದ್ದಾರೆ.
-
On the latest ICC Review, Ricky Ponting threw his support behind out-of-form India star heading into the @cricketworldcup later this year 👏
— ICC (@ICC) April 7, 2023 " class="align-text-top noRightClick twitterSection" data="
">On the latest ICC Review, Ricky Ponting threw his support behind out-of-form India star heading into the @cricketworldcup later this year 👏
— ICC (@ICC) April 7, 2023On the latest ICC Review, Ricky Ponting threw his support behind out-of-form India star heading into the @cricketworldcup later this year 👏
— ICC (@ICC) April 7, 2023
"ಪ್ರತಿಯೊಬ್ಬರೂ ವೃತ್ತಿಜೀವನದಲ್ಲೂ ವೈಫಲ್ಯಗಳಿರುತ್ತವೆ. ಏಕದಿನ ಸರಣಿಯ ಮೂರು ಪಂದ್ಯದಲ್ಲಿ ಮೊದಲ ಬಾಲ್ಗೆ ಈವರೆಗೆ ಯಾರು ಔಟ್ ಆಗಿದ್ದಾರೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಒಂದಲ್ಲಾ ಒಂದು ಸಮಯದಲ್ಲಿ ಆಟಗಾರರು ಏರಿಳಿತವನ್ನು ಕಾಣುತ್ತಾರೆ. ನಾವೆಲ್ಲರೂ ಅನುಭವಿಸಿದ್ದೇವೆ" ಎಂದು ಪಾಂಟಿಂಗ್ ಹೇಳಿದ್ದಾರೆ.
"ಸೂರ್ಯ ಅವರ ಕಳೆದ 18 ತಿಂಗಳುಗಳ ವೈಟ್ ವಾಲ್ ಜರ್ನಿ ಅದ್ಭುತವಾಗಿದೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಹೇಗೆ ಬ್ಯಾಟ್ ಬೀಸಬಹುದು ಎಂಬುದು ಅವರಿಗೆ ತಿಳಿದಿದೆ. ವಿಶ್ವಕಪ್ ತಂಡಕ್ಕೆ ಅವರ ಅಗತ್ಯ ಇದೆ ಎಂದು ನಾನು ಹೇಳುತ್ತೇನೆ. ಏಕೆಂದರೆ ವಿಶ್ವಕಪ್ ಗೆಲ್ಲಿಸುವ ಆಟಗಾರ ಅವರು. ಅವರು ಲಯದಲ್ಲಿ ಕಾಣದಿರಬಹುದು, ಆದರೆ ತಂಡಕ್ಕೆ ಕೆಲ ಉತ್ತಮ ಕ್ಷಣಗಳನ್ನು ನೀಡಬಲ್ಲ ಆಟಗಾರ. ಆಸ್ಟ್ರೇಲಿಯಾಕ್ಕೆ ದಿವಂಗತ ಶ್ರೇಷ್ಠ ಆಂಡ್ರ್ಯೂ ಸೈಮಂಡ್ಸ್ ಮಾಡಿದಂತೆ" ಎಂದಿದ್ದಾರೆ.
"ಆದ್ದರಿಂದ ನಾನು ಖಂಡಿತವಾಗಿಯೂ ಭಾರತ ತಂಡದಲ್ಲಿ ಸೂರ್ಯ ಅವರನ್ನು ನೋಡಲಿಚ್ಚಿಸುತ್ತೇನೆ. ನಾವು ಸುರಕ್ಷಿತ ಆಟಗಾರನಗಿಂತ, ಪಂದ್ಯವಿಜೇತ ಆಟಗಾರನ ಜೊತೆ ಹೋಗಬೇಕು. ಹೀಗಾಗಿ ನಾನು ಅವರನ್ನು ಬೆಂಬಲಿಸುತ್ತೇನೆ. ಸೂರ್ಯ ಕುಮಾರ್ 5ನೇ ಸ್ಥಾನದಲ್ಲಿ ಬಂದರೆ ನಂತರ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ನಂತರ ಅಕ್ಷರ್ ಪಟೇಲ್ ಬಂದರೆ ಭಾರತಕ್ಕೆ ಬ್ಯಾಟಿಂಗ್ ಆಯ್ಕೆಗಳು ಹೆಚ್ಚಾಗುತ್ತವೆ. ನಾಲ್ಕನೇ ಸ್ಥಾನಕ್ಕೆ ಇಶಾನ್ ಕಿಶನ್ ಬಂದರೆ ಭಾರತ ಪಂತ್ ಸ್ಥಾನ ತುಂಬಿದಂತಾಗುತ್ತದೆ" ಎಂದರು.
ಇದನ್ನೂ ಓದಿ: ODI ವಿಶ್ವಕಪ್: ಭಾರತ ತಂಡಕ್ಕೆ ಕಿಶನ್ ಅಥವಾ ರಾಹುಲ್? ಪಾಂಟಿಂಗ್ ವಿಶ್ಲೇಷಣೆ ಹೀಗಿದೆ..