ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕ್ರಿಕೆಟ್ ತಾಪಮಾನ ಏರಿಕೆ ಆಗುತ್ತಿದೆ. ಇಂದಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರಿನ ಪಂದ್ಯಗಳಿಗೆ ಟಿಕೆಟ್ ಖರೀದಿಸಲು ಬಾಕ್ಸ್ ಆಫೀಸ್ ಸೇಲ್ ಶುರುವಾಗಿದ್ದು ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಎಂ. ಚಿನ್ನಸ್ವಾಮಿ ಮೈದಾನದ ಬಳಿ ಜಮಾಯಿಸಿದ್ದಾರೆ.
ಈ ಆವೃತ್ತಿಯ ತವರಿನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಲೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಮೊದಲ ಪಂದ್ಯಕ್ಕೆ ಟಿಕೆಟನ್ನು ಖರೀದಿಸಲು ಇಂದು ಮತ್ತು ಮಾರ್ಚ್ 31ರ ಬೆಳಗ್ಗೆ 10:30ರಿಂದ ರಾತ್ರಿ 8:30ರವರೆಗೂ ಅಭಿಮಾನಿಗಳಿಗೆ ಅವಕಾಶವಿದೆ. ಲಕ್ನೋ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಇಂದು ಮತ್ತು ಏಪ್ರಿಲ್ 8ರಂದು, ಡೆಲ್ಲಿ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 3 ಮತ್ತು ಏಪ್ರಿಲ್ 13ರಂದು, ಚೆನ್ನೈ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 14 ಮತ್ತು ಏಪ್ರಿಲ್ 16ರಂದು ಅವಕಾಶವಿದೆ.
-
RCB TICKET SALES AT CHINNASWAMY STADIUM 🎟️
— Royal Challengers Bangalore (@RCBTweets) March 18, 2023 " class="align-text-top noRightClick twitterSection" data="
Important information about dates and timings of ticket sales for the RCB Home matches. Tickets are only sold in gates 18 and 19 from 10:30 AM to 8:30 PM as per the release schedule. 📝#PlayBold #ನಮ್ಮRCB #IPL2023 pic.twitter.com/D134fIPcnE
">RCB TICKET SALES AT CHINNASWAMY STADIUM 🎟️
— Royal Challengers Bangalore (@RCBTweets) March 18, 2023
Important information about dates and timings of ticket sales for the RCB Home matches. Tickets are only sold in gates 18 and 19 from 10:30 AM to 8:30 PM as per the release schedule. 📝#PlayBold #ನಮ್ಮRCB #IPL2023 pic.twitter.com/D134fIPcnERCB TICKET SALES AT CHINNASWAMY STADIUM 🎟️
— Royal Challengers Bangalore (@RCBTweets) March 18, 2023
Important information about dates and timings of ticket sales for the RCB Home matches. Tickets are only sold in gates 18 and 19 from 10:30 AM to 8:30 PM as per the release schedule. 📝#PlayBold #ನಮ್ಮRCB #IPL2023 pic.twitter.com/D134fIPcnE
ರಾಜಸ್ಥಾನ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 16 ಮತ್ತು ಏಪ್ರಿಲ್ 21ರಂದು, ಕೋಲ್ಕತ್ತಾ ವಿರುದ್ಧದ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 18 ಮತ್ತು ಏಪ್ರಿಲ್ 24ರಂದು ಮತ್ತು ಗುಜರಾತ್ ವಿರುದ್ಧದ ಲೀಗ್‌ನ ಕೊನೆಯ ಪಂದ್ಯದ ಟಿಕೆಟ್ ಖರೀದಿಸಲು ಏಪ್ರಿಲ್ 24 ಮತ್ತು ಮೇ 19ರಂದು ಅವಕಾಶವಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಂ 18 ಮತ್ತು 19ರಂದು ಅಭಿಮಾನಿಗಳು ನೇರವಾಗಿ ಟಿಕೆಟ್ ಖರೀದಿಸಲು ಅವಕಾಶವಿದೆ.
ಮಾರ್ಚ್ 26ಕ್ಕೆ ಹಾಲ್ ಆಫ್ ಫೇಮ್ ಗೌರವ: ಕ್ರಿಕೆಟ್ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿರುವ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ಗೆ ಆರ್ಸಿಬಿಯಿಂದ ಹಾಲ್ ಆಫ್ ಫೇಮ್ ಗೌರವ ನೀಡಲಾಗುತ್ತಿದೆ. ಮಾರ್ಚ್ 26 ರಂದು ಸಂಜೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಆರ್ಸಿಬಿ ತಂಡ ಅಭ್ಯಾಸ ನಡೆಸಲಿದೆ. ನಂತರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಗೌರವ ಸಮರ್ಪಣೆ ನಂತರ ಸೋನು ನಿಗಮ್ ಮತ್ತು ಜೇಸನ್ ದೇರುಲೋ ಅವರಿಂದ ಲೈವ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿದೆ. "ಜರ್ಸಿ ಸಂಖ್ಯೆ 17 ಮತ್ತು 333 ಅನ್ನು ಗೌರವಾರ್ಥ ಹಾಲ್ ಆಫ್ ಫೇಮ್ ನೀಡಲಾಗುತ್ತಿದೆ" ಎಂದು ಬರೆದುಕೊಂಡಿದೆ.
-
𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023 " class="align-text-top noRightClick twitterSection" data="
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK
">𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK𝐑𝐂𝐁’𝐬 𝐈𝐏𝐋 𝟐𝟎𝟐𝟑 𝐅𝐢𝐱𝐭𝐮𝐫𝐞𝐬:
— Royal Challengers Bangalore (@RCBTweets) February 17, 2023
The moment we've all been waiting for. The summer of '23 is officially a go! 🙌 🔥#PlayBold #WeAreChallengers #IPL2023 pic.twitter.com/QOGEusHIYK
ಆರ್ಸಿಬಿ ವೇಳಾ ಪಟ್ಟಿ : ಆರ್ಸಿಬಿ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ್ನು ಎದುರಿಸಲಿದೆ. ಎಪ್ರಿಲ್ 2 ಬೆಂಗಳೂರಿನಲ್ಲಿ ಮುಂಬೈ ಜೊತೆಗೆ, ಏ.6ಕ್ಕೆ ಕೊಲ್ಕತ್ತಾದಲ್ಲಿ ನೈಟ್ ರೈಡರ್ಸ್ ವಿರುದ್ಧ, ಏ. 10ಕ್ಕೆ ಬೆಂಗಳೂರಿನಲ್ಲಿ ಲಕ್ನೋ, ಏ.15ಕ್ಕೆ ಬೆಂಗಲೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಏ.17ಕ್ಕೆ ಬೆಂಗಳೂರಿನಲ್ಲಿ ಚೆನ್ನೈ, ಏ 20ಕ್ಕೆ ಮೊಹಾಲಿ ಪಂಜಾಬ್, ಏ. 23ಕ್ಕೆ ಬೆಂಗಳೂರಿನಲ್ಲಿ ರಾಜಸ್ಥಾನ ವಿರುದ್ಧ ಪಂದ್ಯ ನಡೆಯಲಿದೆ.
ಏ. 26ಕ್ಕೆ ಬೆಂಗಳೂರಿನಲ್ಲಿ ಕೋಲ್ಕತ್ತಾ ವಿರುದ್ಧ, ಮೇ 1ಕ್ಕೆ ಲಕ್ನೋದಲ್ಲಿ ಸೂಪರ್ ಜೈಂಟ್ಸ್, ಮೇ 6ಕ್ಕೆ ಡೆಲ್ಲಿಯಲ್ಲಿ ಕ್ಯಾಪಿಟಲ್ಸ್, ಮೇ 9ಕ್ಕೆ ಮುಂಬೈನಲ್ಲಿ ಇಂಡಿಯನ್ಸ್ ವಿರುದ್ಧ, ಮೇ 14ಕ್ಕೆ ಜೈಪುರದಲ್ಲಿ ರಾಜಸ್ಥಾನ, ಮೇ 18ಕ್ಕೆ ಹೈದರಾಬಾದ್ನಲ್ಲಿ ಸನ್ರೈಸರ್ಸ್ ಮತ್ತು ಮೇ 21 ಕ್ಕೆ ಬೆಂಗಳೂರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಐಪಿಎಲ್ ಕ್ರಿಕೆಟ್: ಆರ್ಸಿಬಿ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ..!