ಮುಂಬೈ: 14ನೇ ಆವೃತ್ತಿಯ ಐಪಿಎಲ್ ಕೋವಿಡ್ 19ನಿಂದ ಅನಿರ್ಧಾಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರಿಂದ ಅದ್ಭುತ ಪ್ರದರ್ಶನ ತೋರುತ್ತ ಉತ್ತಮ ಆರಂಭ ಪಡೆದಿದ್ದ ಆರ್ಸಿಬಿ ಮತ್ತು ಡೆಲ್ಲಿ ತಂಡಗಳಿಗೆ ನಿರಾಸೆಯಾಗಿದೆ. ಆದರೂ ಸಾಮಾಜಿಕ ಜಾಲಾತಾಣದಲ್ಲಿ ಆರ್ಸಿಬಿ ದರ್ಬಾರ್ ಮಾಡಿದೆ.
ಏಪ್ರಿಲ್ 9ರಿಂದ ಮೇ 3ರವರೆಗಿನ ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಎಂಗೇಜ್ ಆಗಿದ್ದ ಸ್ಫೋರ್ಟ್ಸ್ ಕ್ಲಬ್ಗಳಲ್ಲಿ ಚೆನ್ನೈ ಮತ್ತು ಮುಂಬೈ ಅಲ್ಲದೇ ಬಾರ್ಸಿಲೋನಾದಂತಹ ದೈತ್ಯ ಫುಟ್ಬಾಲ್ ತಂಡವನ್ನೇ ಹಿಂದಿಕ್ಕಿದೆ.
ಆರ್ಸಿಬಿ ಡಿಜಿಟಲ್ ಹೆಡ್ ಅಜಿತ್ ರಾಮಮೂರ್ತಿಯವರು ಕಳೆದ ಒಂದು ತಿಂಗಳ ಸಾಮಾಜಿಕ ಜಾಲತಾಣದಲ್ಲಿನ ಎಂಗೇಜ್ಮೆಂಟ್ಗಳ ಅಂಕಿ ಅಂಶವನ್ನು ಬಹಿರಂಗ ಪಡಿಸಿದ್ದಾರೆ. ಇದರಲ್ಲಿ ಆರ್ಸಿಬಿ ಸಾಮಾಜಿ ಜಾಲಾತಾಣದಲ್ಲಿ ನಂಬರ್ 1, ಇನ್ಸ್ಸ್ಟಾಗ್ರಾಂ ಮತ್ತು ಯೂಟ್ಯೂಬ್ನ ಒಟ್ಟು ಎಂಗೇಜ್ಮೆಂಟ್ನಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.
-
Source: Crowdtangle, Social Insider, Sprout Social!
— Ajith Ramamurthy (@Ajith_tweets) May 7, 2021 " class="align-text-top noRightClick twitterSection" data="
Well done, team! @kalveerbb and team, Chethan and team, @DanishSait, @navkrish55 @abhi1592, Mohit and the Outfit Team.
">Source: Crowdtangle, Social Insider, Sprout Social!
— Ajith Ramamurthy (@Ajith_tweets) May 7, 2021
Well done, team! @kalveerbb and team, Chethan and team, @DanishSait, @navkrish55 @abhi1592, Mohit and the Outfit Team.Source: Crowdtangle, Social Insider, Sprout Social!
— Ajith Ramamurthy (@Ajith_tweets) May 7, 2021
Well done, team! @kalveerbb and team, Chethan and team, @DanishSait, @navkrish55 @abhi1592, Mohit and the Outfit Team.
ಕ್ರೌಡ್ಟ್ಯಾಂಗಲ್, ಸೋಯಿಯಸ್ ಇನ್ಸೈಡರ್ ಮತ್ತು ಸ್ಪ್ರೌಟ್ ಸೋಯಿಯಲ್ ಎಂಬ ಸಾಮಾಜಿಕ ಜಾಲಾತಾಣವನ್ನು ಮಾನಿಟರ್ ಮಾಡುವ ವೆಬ್ಸೈಟ್ಗಳ ಪ್ರಕಾರ ಐಪಿಎಲ್ ಆರಂಭವಾದ ದಿನದಿಂದ ಅದು ರದ್ದಾಗುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಹೆಚ್ಚು ಚರ್ಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.
ಆರ್ಸಿಬಿ ಇನ್ಸ್ಟಾಗ್ರಾಂನಲ್ಲಿ 150.40 ಮಿಲಿಯನ್ ಎಂಗೇಜ್ಮೆಂಟ್ ಪಡೆದಿದೆ. ಇನ್ನು 149.94 ಮಿಲಿಯನ್ ಲೈಕ್ಸ್ ಮತ್ತು 452.2 ಸಾವಿರ ಕಮೆಂಟ್ಸ್ ಬಂದಿವೆ.
2ನೇ ಸ್ಥಾನದಲ್ಲಿರುವ ಸಿಎಸ್ಕೆ 126.09 ಮಿಲಿಯನ್ ಎಂಗೇಜ್ಮೆಂಟ್ಸ್, 125.82 ಮಿಲಿಯನ್ಸ್ ಲೈಕ್ಸ್ ಮತ್ತು 267.1 ಸಾವಿರ ಕಮೆಂಟ್ಸ್ ಪಡೆದಿದೆ. ಮುಂಬೈ ಇಂಡಿಯನ್ಸ್ 102 ಮಿಲಿಯನ್ಸ್ ಎಂಗೇಜ್ಮೆಂಟ್ಸ್, 101.8 ಮಿಲಿಯನ್ ಲೈಕ್ಸ್ ಮತ್ತು 292.3 ಸಾವಿರ ಕಮೆಂಟ್ಸ್ ಪಡೆದು 4ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ಬಾರ್ಸಿಲೋನಾ ಇದೆ.
ಇದನ್ನು ಓದಿ:’ತೂಕ ಕಡಿಮೆ ಮಾಡ್ಕೊಂಡು ಪಂತ್ ರೀತಿ ಟೀಮ್ ಇಂಡಿಯಾಗೆ ಹಿಂತಿರುಗಿ’ : ಪೃಥ್ವಿ ಶಾಗೆ ಬಿಸಿಸಿಐ ಸಲಹೆ!