ಮೊಹಾಲಿ(ಪಂಜಾಬ್): ಆಲ್‌ರೌಂಡರ್ ರವೀಂದ್ರ ಜಡೇಜಾ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ತಲುಪಿದರು.
ಮೊದಲ ಟೆಸ್ಟ್‌ನಲ್ಲಿ ಅಜೇಯ 175 ರನ್‌ಗಳ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ, ಇದೀಗ ಅದೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ 150 ರನ್‌ಗಳಿಗೂ ಅಧಿಕ ರನ್ ಗಳಿಸಿದ ಮತ್ತು 5 ವಿಕೆಟ್ ಪಡೆದ 6ನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಈ ಹಿಂದೆ ವಿನೂ ಮಂಕಡ್, ಡೇನಿಸ್ ಅಟ್ಕಿನ್‌ಸನ್, ಪಾಲಿ ಉಮ್ರಿಗರ್, ಗ್ಯಾರಿ ಸೋಬರ್ಸ್ ಹಾಗು ಮುಸ್ತಾಕ್ ಮೊಹಮ್ಮದ್ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ :ಹಿಟ್ ಆ್ಯಂಡ್ ರನ್ ಕೇಸ್: ಮಹಿಳೆ ಸಾವಿಗೆ ಕಾರಣನಾದ ಡಿಎಸ್ಪಿ ಮಗನ ಬಂಧನ