ETV Bharat / sports

Cricket World Cup 2023: ಈ ಅವಕಾಶದ ಬಗ್ಗೆ ಅಚ್ಚರಿ ತಂದಿದೆ.. ಇದು ನನಗೆ ಕೊನೆಯ ವಿಶ್ವಕಪ್ : ರವಿಚಂದ್ರನ್ ಅಶ್ವಿನ್ - ETV Bharath Kannada news

ಏಷ್ಯಾಕಪ್​ನಲ್ಲಿ ಅಕ್ಷರ್ ಪಟೇಲ್​ ಗಾಯಗೊಂಡ ಹಿನ್ನೆಲೆಯಲ್ಲಿ ಏಕದಿನ ವಿಶ್ವಕಪ್​ ತಂಡದಲ್ಲಿ ಅಶ್ವಿನ್​ ಸ್ಥಾನ ಪಡೆದುಕೊಂಡರು.

Etv Bharat
Etv Bharat
author img

By ETV Bharat Karnataka Team

Published : Sep 30, 2023, 9:49 PM IST

ಗುವಾಹಟಿ (ಅಸ್ಸೋಂ): ಭಾರತದಲ್ಲಿ ಕ್ರಿಕೆಟ್​ ಪ್ರಮುಖ್ಯತೆ ಹೆಚ್ಚಿದ್ದು, ಕೌಶಲ್ಯ ಉಳ್ಳ ಆಟಗಾರರು ಹೆಚ್ಚಾಗಿದ್ದಾರೆ. ಇದರಿಂದ ಕೊಂಚ ಫಾರ್ಮ್​ ಕಳೆದುಕೊಂಡರೂ ತಂಡದಲ್ಲಿ ಅವಕಾಶ ಕೈ ತಪ್ಪುತ್ತದೆ. 11 ಸ್ಥಾನಕ್ಕಾಗಿ ಅಷ್ಟು ಸ್ಪರ್ಧೆ ಕ್ರಿಕೆಟ್​ನಲ್ಲಿ ಬೆಳೆದಿದೆ. ಅನುಭವಿ, ಕ್ವಾಲಿಟಿ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಸಹ ಒಮ್ಮೆ ತಂಡದಲ್ಲಿ ಮೂಲೆ ಗುಂಪಾಗಿದ್ದರು. ಆದರೆ 2023ರ ವಿಶ್ವಕಪ್​ಗೆ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ.

ಅಕ್ಟೋಬರ್ 5 ರಿಂದ ವಿಶ್ವಕಪ್​ ಪಂದ್ಯಗಳು ಆರಂಭವಾಗಲಿದೆ. ಈ ವಿಶ್ವಕಪ್​ನ ಭಾರತದ ತಂಡದ 15 ಸದಸ್ಯರಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಷ್ಯಾಕಪ್​ನ ಸೂಪರ್​4 ಹಂತದ ಕೊನೆಯ ಪಂದ್ಯದಲ್ಲಿ ಫೀಲ್ಡಿಂಗ್​ ಮಾಡುವಾಗ ಅಕ್ಷರ್​ ಪಟೇಲ್​ ಗಾಯಕ್ಕೆ ತುತ್ತಾದರು. ಏಷ್ಯಾಕಪ್​ ಫೈನಲ್​ಗೆ ವಾಷಿಂಗ್ಟನ್​ ಸುಂದರ್​ಗೆ ಅವಕಾಶ ನೀಡಲಾಯಿತು.

ಆದರೆ, ಏಷ್ಯಾಕಪ್​ ನಂತರ ತವರು ಮೈದಾನಗಳಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಶ್ವಿನ್​ಗೆ ಕರೆ ಕೊಡಲಾಯಿತು. 2021 ರಲ್ಲಿ ಕೊನೆಯ ಬಾರಿಗೆ ಅಶ್ವಿನ್​ ಏಕದಿನ ಪಂದ್ಯವನ್ನು ಆಡಿದ್ದರು. 21 ತಿಂಗಳ ನಂತರ ಅಶ್ವಿನ್​ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳನ್ನು ಆಡಿದ ಅಶ್ವಿನ್​ 4 ವಿಕೆಟ್​ ಪಡೆದರು.

37 ರ ಹರೆಯದ ಅನುಭವಿ ಆಟಗಾರ 2023 ವಿಶ್ವಕಪ್​ನ್ನು ತನ್ನ ಕೊನೆಯ ಟ್ರೋಫಿ ಪಂದ್ಯಾವಳಿ ಎಂದು ಕರೆದಿದ್ದಾರೆ. ಶನಿವಾರ ಇಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತದ ಮೊದಲ ಅಭ್ಯಾಸ ಪಂದ್ಯಕ್ಕೆ ಮುನ್ನ ಮಾತನಾಡಿದ ಅಶ್ವಿನ್ದ್ "ಉತ್ತಮ ಸ್ಥಿತಿಯಲ್ಲಿದ್ದೇನೆ. ಈ ಪಂದ್ಯಾವಳಿಯನ್ನು ಆನಂದಿಸುತ್ತೇನೆ. ಇದು ಭಾರತಕ್ಕೆ ನನ್ನ ಕೊನೆಯ ವಿಶ್ವಕಪ್ ಆಗಿರಬಹುದು, ಆದ್ದರಿಂದ ಪಂದ್ಯಾವಳಿಯನ್ನು ಆನಂದಿಸುವುದು ಅತ್ಯಂತ ಮಹತ್ವದ್ದಾಗಿದೆ" ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ವಿಶ್ವಕಪ್​ ಆಯ್ಕೆ ಆಗಿರುವುದರ ಬಗ್ಗೆ ಮಾತನಾಡಿದ ಅವರು,"ನೀವು ತಮಾಷೆ ಮಾಡುತ್ತಿದ್ದೀರಿ ಎಂದು ನಾನು ಹೇಳುತ್ತಿದ್ದೆ. ಜೀವನವು ಆಶ್ಚರ್ಯಗಳಿಂದ ತುಂಬಿದೆ. ನಾನೂ ಇಲ್ಲಿದ್ದೇನೆ ಎಂದು ಭಾವಿಸಿರಲಿಲ್ಲ. ನಾನು ಇಂದು ಇಲ್ಲಿದ್ದೇನೆ ಎಂದು ಸಂದರ್ಭಗಳು ಖಚಿತಪಡಿಸಿವೆ. ತಂಡದ ಆಡಳಿತವು ವಿಶ್ವಾಸವನ್ನು ತೋರಿಸಿದೆ" ಎಂದಿದ್ದಾರೆ. ಅಶ್ವಿನ್ ತಮ್ಮ ಮೂರನೇ ವಿಶ್ವಕಪ್ ಆಡುತ್ತಿದ್ದು, ಭಾರತಕ್ಕಾಗಿ 10 ಏಕದಿನ ವಿಶ್ವಕಪ್​ ಪಂದ್ಯಗಳನ್ನು ಆಡಿದ್ದಾರೆ. 2019 ವಿಶ್ವಕಪ್​ನಲ್ಲಿ ಅಶ್ವಿನ್​ ಅವರನ್ನು ಕೈಬಿಡಲಾಗಿತ್ತು.

ಅಶ್ವಿನ್​ 10 ಪಂದ್ಯಗಳಲ್ಲಿ 24.88 ಸರಾಸರಿಯಲ್ಲಿ 4.36 ರ ಎಕಾನಮಿಯಿಂದ 17 ವಿಕೆಟ್‌ಗಳನ್ನು ಪಡೆದಿದ್ದಾರೆ. 25 ರನ್ ಕೊಟ್ಟು 4 ವಿಕೆಟ್​ ಪಡೆದದ್ದು ಅವರ ಉತ್ತಮ ಬೌಲಿಂಗ್​ ಆಗಿದೆ. ವಿರಾಟ್ ಕೊಹ್ಲಿ ಹೊರತಾಗಿ, 2011ರ ವಿಶ್ವಕಪ್ ವಿಜೇತ ತಂಡ ಆಟಗಾರನಾಗಿ ಈ ಬಾರಿಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒತ್ತಡವನ್ನು ನಿಭಾಯಿಸುವುದು ನಿರ್ಣಾಯಕ ಎಂದು ಅಶ್ವಿನ್ ಹೇಳಿದರು. (ಪಿಟಿಐ)

ಇದನ್ನೂ ಓದಿ: Asian Games 2023: 10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ.. ಕಾರ್ತಿಕ್​ಗೆ ಬೆಳ್ಳಿ, ಗುಲ್ವೀರ್​​ಗೆ ಕಂಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.