ಮುಂಬೈ: ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಲೆಜೆಂಡ್ ಸುನೀಲ್ ಗವಾಸ್ಕರ್, ಯುವ ಆಟಗಾರರನ್ನು ಪ್ರೇರೆಪಿಸುವ ಶಾಸ್ತ್ರಿಯವರ ಸಾಮರ್ಥ್ಯ ನಂಬಲಾಸಾಧ್ಯವಾದದ್ದು ಎಂದು ಗುಣಗಾನ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗರಾಗಿರುವ ಗವಾಸ್ಕರ್, ರವಿಶಾಸ್ತ್ರಿ ನಂತರ ಬೌಲಿಂಗ್ ಕೋಚ್ ಭರತ್ ಅರುಣ್ ಅವರನ್ನೂ ಶ್ಲಾಘಿಸಿದ್ದಾರೆ.
![ಭರತ್ ಅರುಣ ಮತ್ತು ರವಿಶಾಸ್ತ್ರಿ](https://etvbharatimages.akamaized.net/etvbharat/prod-images/arun-bharat_2801newsroom_1611802492_296.jpg)
"ಅಭ್ಯಾಸದ ಸೆಷನ್ ನಂತರ ಕೇವಲ 15 ನಿಮಿಷಗಳ ಕಾಲ ಶಾಸ್ತ್ರಿ ಜೊತೆ ಇದ್ದರೆ, ಅವರು ಯುವ ಆಟಗಾರರಲ್ಲಿ ಹೇಗೆ ಆತ್ಮವಿಶ್ವಾಸ ತುಂಬುತ್ತಾರೆ ಎನ್ನುವುದು ನಿಮಗೆ ತಿಳಿಯುತ್ತದೆ. ಇದು ನಂಬಲಾಸಾಧ್ಯವಾದ್ದು" ಎಂದು ಹಾರ್ಪರ್ ಕಾಲಿನ್ಸ್ ಪಬ್ಲಿಷ್ ಮಾಡಿರುವ "1971: ದ ಬಿಗಿನಿಂಗ್ ಆಫ್ ಇಂಡಿಯಾಸ್ ಕ್ರಿಕೆಟಿಂಗ್ ಗ್ರೇಟ್ನೆಸ್" ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಗವಾಸ್ಕರ್, ಶಾಸ್ತ್ರಿ ಮಾರ್ಗದರ್ಶನದ ಬಗ್ಗೆ ಹೇಳಿದ್ದಾರೆ.
ಒಂದು ಅವರು(ಶಾಸ್ತ್ರಿ) ಯುವ ಆಟಗಾರರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನಂಬಿದರೆ, ಆ ಯುವಕನಿಗೆ ರವಿ ಶಾಸ್ತ್ರಿಗಿಂತಲೂ ಪ್ರೇರೇಪಿಸುವ ಮತ್ತೊಬ್ಬ ವ್ಯಕ್ತಿ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಅವರು ಬೈಯ್ಯಬಹುದು ಅಥವಾ ಕೆಲವೊಮ್ಮೆ ಹಾಗೆ ಹೇಳಬಹುದು. ಆದರೆ ನೀವು ಅತ್ಯುತ್ತಮವಾದದನ್ನು ಪಡೆಯಬೇಕೆಂದರೆ ಏನು ಮಾಡಬೇಕು ಎಂಬುದನ್ನು ಅವರು ತಿಳಿಸಿಕೊಡುತ್ತಾರೆ" ಎಂದು ಗವಾಸ್ಕರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್ರನ್ನೂ ಶ್ಲಾಘಿಸಿದ್ದಾರೆ. ಭಾರತ ತಂಡದಲ್ಲಿ ವಿಶ್ವದರ್ಜೆಯ ಯುವ ವೇಗಿಗಳನ್ನು ಅವರು ಬೆಳೆಸುತ್ತಿದ್ದಾರೆ. ಸಾಕ್ಷಿಯೆಂದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯುವ ವೇಗಿಗಳು ತೋರಿದ ಪ್ರದರ್ಶನದ ಸಂಪೂರ್ಣ ಶ್ರೇಯ ಅರುಣ್ಗೆ ಸಲ್ಲಬೇಕು" ಎಂದಿದ್ದಾರೆ.
ಇದನ್ನು ಓದಿ: ಪಡಿಕ್ಕಲ್ ಮಲಿಯಾಳಿ ಎಂದಿದ್ದಕ್ಕೆ ಶಶಿ ತರೂರ್ಗೆ ತಿರುಗೇಟು ನೀಡಿದ ದೊಡ್ಡ ಗಣೇಶ್