ETV Bharat / sports

'ವೈಯಕ್ತಿಕವಾಗಿ ನನಗೆ ದುಃಖದ ದಿನ': ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದಕ್ಕೆ ಶಾಸ್ತ್ರಿ ಭಾವುಕ! - ವಿರಾಟ್​ ನಿರ್ಧಾರಕ್ಕೆ ಶಾಸ್ತ್ರಿ ಶಾಕ್​

Ravi Shastri reacts to Virat Kohli: ಟೆಸ್ಟ್ ನಾಯಕತ್ವದಿಂದ ವಿರಾಟ್​ ಕೊಹ್ಲಿ ದಿಢೀರ್​ ಆಗಿ ಕೆಳಗಿಳಿಯುತ್ತಿದ್ದಂತೆ ಟೀಂ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು, ಈ ನಿರ್ಧಾರ ವೈಯಕ್ತಿಕವಾಗಿ ನನಗೆ ದುಃಖದ ದಿನ ಎಂದಿದ್ದಾರೆ.

Ravi Shastri reacts to Virat Kohli
Ravi Shastri reacts to Virat Kohli
author img

By

Published : Jan 15, 2022, 10:46 PM IST

ಹೈದರಾಬಾದ್​​: ದಿಢೀರ್​ ಬೆಳವಣಿಗೆವೊಂದರಲ್ಲಿ ಟೀಂ ಇಂಡಿಯಾ ಟೆಸ್ಟ್​ ನಾಯಕ ವಿರಾಟ್​ ಕೊಹ್ಲಿ ನಾಯತ್ವ ತೊರೆದಿದ್ದು, ಇದರಿಂದ ಇಡೀ ಕ್ರೀಡಾ ಜಗತ್ತು ಆಶ್ಚರ್ಯಕ್ಕೊಳಗಾಗಿದೆ. ರನ್ ಮಷಿನ್​​ ದಿಢೀರ್​ ನಿರ್ಧಾರದಿಂದ ಟೀಂ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಕೂಡ ಶಾಕ್​​ಗೊಳಗಾಗಿದ್ದಾರೆ.

2017 ರಿಂದ 2021ರವರೆಗೆ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸಿರುವ ರವಿಶಾಸ್ತ್ರಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯ ಏರಿಳಿತಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಇದೀಗ ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಟ್ವೀಟರ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  • Virat, you can go with your head held high. Few have achieved what you have as captain. Definitely India's most aggressive and successful. Sad day for me personally as this is the team 🇮🇳 we built together - @imVkohli pic.twitter.com/lQC3LvekOf

    — Ravi Shastri (@RaviShastriOfc) January 15, 2022 " class="align-text-top noRightClick twitterSection" data=" ">

'ವಿರಾಟ್​​, ನೀವೂ ತಲೆ ಎತ್ತಿ ನಡೆಯಬಹುದು. ನಾಯಕನಾಗಿ ನೀವೂ ಮಾಡಿರುವ ಸಾಧನೆಯನ್ನ ಕೆಲವರು ಮಾತ್ರ ಮಾಡಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಆಕ್ರಮಣಕಾರಿ ಮತ್ತು ಯಶಸ್ವಿ ನಾಯಕರಲ್ಲಿ ನೀವೂ ಒಬ್ಬರು. ವೈಯಕ್ತಿಕವಾಗಿ ನನಗೆ ಇದು ದುಃಖದ ದಿನ. ಏಕೆಂದರೆ, ಇದು ನಾವು ಒಟ್ಟಾಗಿ ಕಟ್ಟಿರುವ ತಂಡವಾಗಿದೆ ಎಂದಿದ್ದಾರೆ.

ವಿಶ್ವದ ಅತ್ಯಂತ ಯಶಸ್ವಿ ಟೆಸ್ಟ್​ ನಾಯಕರಲ್ಲಿ ಒಬ್ಬರಾಗಿರುವ ವಿರಾಟ್​​ ಕೊಹ್ಲಿ ಕಳೆದ 7 ವರ್ಷಗಳಿಂದ ತಂಡವನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದು, ನಂಬರ್​ 1 ತಂಡವನ್ನಾಗಿ ರೂಪಗೊಳಿಸಿದ್ದಾರೆ. ನಾಯಕ ಸ್ಥಾನ ಕೊನೆಗೊಳಿಸಿರುವುದಕ್ಕಾಗಿ ನನಗೆ ವೈಯಕ್ತಿಕವಾಗಿ ದುಃಖವಾಗಿದೆ ಎಂದು ಭಾವುಕರಾಗಿದ್ದಾರೆ.

2014-15ರಲ್ಲಿ ಧೋನಿ ಕೂಡ ಹಠಾತ್​ ಆಗಿ ಟೆಸ್ಟ್​ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ವೇಳೆ ವಿರಾಟ್​ ಕೊಹ್ಲಿ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ರವಿಶಾಸ್ತ್ರಿ ಭಾರತ ತಂಡದ ಮ್ಯಾನೇಜರ್​​ ಆಗಿದ್ದರು.

2015ರ ವಿಶ್ವಕಪ್ ನಂತರ ರವಿಶಾಸ್ತ್ರಿ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ 2017ರವರೆಗೆ ಅನಿಲ್ ಕುಂಬ್ಳೆ ತಂಡದ ಮುಖ್ಯ ಕೋಚ್​​ ಆಗಿ ಕಾರ್ಯ ನಿರ್ವಹಿಸಿದರು.

2017ರಲ್ಲಿ ಕೋಚ್​ ಆಗಿ ತಂಡ ಸೇರಿಕೊಂಡ ಶಾಸ್ತ್ರಿ

ಅನಿಲ್ ಕುಂಬ್ಳೆ ಕೋಚ್​ ಸ್ಥಾನಕ್ಕೆ ದಿಢೀರ್ ಆಗಿ ರಾಜೀನಾಮೆ ನೀಡುತ್ತಿದ್ದಂತೆ ಆ ಸ್ಥಾನಕ್ಕೆ ಶಾಸ್ತ್ರಿ ಆಯ್ಕೆಯಾಗುತ್ತಾರೆ. ಈ ವೇಳೆ ಕೊಹ್ಲಿ-ಶಾಸ್ತ್ರಿ ಜೋಡಿ ಅನೇಕ ದಾಖಲೆ ನಿರ್ಮಿಸಿದೆ. ಪ್ರಮುಖವಾಗಿ ಕಾಂಗರೂ ನಾಡಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು, ಆಂಗ್ಲರ ವಿರುದ್ಧ ಟೆಸ್ಟ್​​ನಲ್ಲಿ ಜಯಭೇರಿ ಜೊತೆಗೆ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​​ನಲ್ಲಿ ಭಾರತವನ್ನ ಫೈನಲ್​ಗೆ ತೆಗೆದುಕೊಂಡು ಹೋಗಿರುವುದು.​​

2014-15ರ ವೇಳೆ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಟೀಂ ಇಂಡಿಯಾ 7ನೇ ಸ್ಥಾನದಲ್ಲಿತ್ತು. ಆದರೆ ಅದನ್ನ ನಂಬರ್​ 1 ಸ್ಥಾನಕ್ಕೆ ತಂದಿಟ್ಟಿರುವ ಶ್ರೇಯ ಕೂಡ ಇವರಿಗೆ ಸಲ್ಲುತ್ತದೆ.

ಬಿಸಿಸಿಐ ಕಾರ್ಯದರ್ಶಿ ಪ್ರತಿಕ್ರಿಯೆ

  • Congratulations to @imVkohli on a tremendous tenure as #TeamIndia captain. Virat turned the team into a ruthless fit unit that performed admirably both in India and away. The Test wins in Australia & England have been special. https://t.co/9Usle3MbbQ

    — Jay Shah (@JayShah) January 15, 2022 " class="align-text-top noRightClick twitterSection" data=" ">

ಟೆಸ್ಟ್ ನಾಯಕತ್ವದಿಂದ ವಿರಾಟ್​ ಕೆಳಗಿಳಿಯುತ್ತಿದ್ದಂತೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಟೀಂ ಇಂಡಿಯಾ ಟೆಸ್ಟ್​ ನಾಯಕನಾಗಿ ಅದ್ಭುತ ಅವಧಿ ಪೂರ್ಣಗೊಳಿಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಭಾರತ ಮತ್ತು ವಿದೇಶದಲ್ಲಿ ನಿಮ್ಮ ನೇತೃತ್ವದಲ್ಲಿ ತಂಡದ ಅಮೋಘ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್​ ಟೆಸ್ಟ್ ಗೆಲುವು ನೆನಪಿನಲ್ಲಿ ಉಳಿಯಲಿವೆ ಎಂದಿದ್ದಾರೆ.

  • BCCI congratulates #TeamIndia captain @imVkohli for his admirable leadership qualities that took the Test team to unprecedented heights. He led India in 68 matches and has been the most successful captain with 40 wins. https://t.co/oRV3sgPQ2G

    — BCCI (@BCCI) January 15, 2022 " class="align-text-top noRightClick twitterSection" data=" ">

ಇವರ ದಿಢೀರ್ ನಿರ್ಧಾರಕ್ಕೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​ ವಾಸೀಂ ಜಾಫರ್, ಇರ್ಫಾನ್ ಪಠಾಣ್, ಸುನೀಲ್ ಗವಾಸ್ಕರ್, ಬಿಸಿಸಿಐ, ಐಸಿಸಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.