ETV Bharat / sports

ಭಾರತ ತಂಡದ ಕೋಚ್, 1983ರ ವಿಶ್ವಕಪ್ ವಿನ್ನರ್ ರವಿಶಾಸ್ತ್ರಿಗೆ ಜನ್ಮದಿನದ ಸಂಭ್ರಮ - ರವಿಶಾಸ್ತ್ರಿ ಜನ್ಮದಿನ

ಸ್ಪಿನ್​ ಬೌಲರ್​ ಆಗಿ 1981ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ನಂತರ ಬ್ಯಾಟಿಂಗ್ ಕೌಶಲ್ಯದಿಂದ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಮೆರೆದಾಡಿದ್ದರು. ಶಾಸ್ತ್ರಿ 80 ಟೆಸ್ಟ್​ ಮತ್ತು 150 ಏಕದಿನ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 3,108 ರನ್​ ಮತ್ತು 129 ವಿಕೆಟ್​ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 3,830 ರನ್ 151ವಿಕೆಟ್​ ಪಡೆದಿದ್ದಾರೆ.

ಭಾರತ ತಂಡದ ಕೋಚ್
ರವಿಶಾಸ್ತ್ರಿ ಜನ್ಮದಿನ
author img

By

Published : May 27, 2021, 3:18 PM IST

ಮುಂಬೈ: ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್​ ಮತ್ತು 1983ರ ಏಕದಿನ ತಂಡದಲ್ಲಿದ್ದ ಮಾಜಿ ಕ್ರಿಕೆಟರ್ ರವಿ ಶಾಸ್ತ್ರಿ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ ಭಾರತ ತಂಡದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಸ್ಪಿನ್​ ಬೌಲರ್​ ಆಗಿ 1981ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ನಂತರ ಬ್ಯಾಟಿಂಗ್ ಕೌಶಲ್ಯದಿಂದ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಮೆರೆದಾಡಿದ್ದರು. ಶಾಸ್ತ್ರಿ 80 ಟೆಸ್ಟ್​ ಮತ್ತು 150 ಏಕದಿನ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 3,108 ರನ್​ ಮತ್ತು 129 ವಿಕೆಟ್​ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 3,830 ರನ್ 151ವಿಕೆಟ್​ ಪಡೆದಿದ್ದಾರೆ.

  • Happy Birthday, Ravi Bhai. May you keep uplifting our spirits both on and off the field. Wish you the best of years ahead. pic.twitter.com/9IfUUuWL3s

    — Ajinkya Rahane (@ajinkyarahane88) May 27, 2021 " class="align-text-top noRightClick twitterSection" data=" ">

ರವಿ ಶಾಸ್ತ್ರಿಯವರು 2014ರಿಂದ 2016ರವರೆಗೆ ಭಾರತ ತಂಡದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮತ್ತೆ 2017ರಿಂದ ಇಲ್ಲಿಯವರೆಗೆ ಭಾರತ ತಂಡ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಸ್ತ್ರಿ ಕೋಚಿಂಗ್​ನಲ್ಲಿ ಭಾರತ ತಂಡದ 2017ರಲ್ಲಿ ಚಾಂಪಿಯನ್ ​ಟ್ರೋಫಿ ಫೈನಲ್​ ಪ್ರವೇಶಿಸಿತ್ತು. ಅಲ್ಲದೇ 2 ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್​ ಗವಾಸ್ಕರ್​ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇದೀಗ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕೂಡ ಪ್ರವೇಶಿಸಿದೆ.

ಭಾರತ ತಂಡದ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ದಿನೇಶ್ ಕಾರ್ತಿಕ್, ಮಾಜಿ ಕ್ರಿಕೆಟಿಗ ಯುವರಾಜ್​ ಸೇರಿದಂತೆ ಹಲವಾರು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಇದನ್ನು ಓದಿ:ಈ ಕಾರಣದಿಂದ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕಿಂತ ನ್ಯೂಜಿಲ್ಯಾಂಡ್​ಗೆ ಫೇವರಿಟ್: ಪ್ಯಾಟ್ ಕಮಿನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.