ಕಾಬೂಲ್: ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಅಫ್ಘಾನಿಸ್ತಾನ ತಂಡ ಪ್ರಕಟಗೊಂಡ ಬೆನ್ನಲ್ಲೇ, ಲೆಗ್ ಸ್ಪಿನ್ನರ್ ರಶೀದ್ ಖಾನ್ ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದೀಗ ನೂತನ ನಾಯಕನಾಗಿ ಆಲ್ರೌಂಡರ್ ಮೊಹಮ್ಮದ್ ನಬಿ ಆಯ್ಕೆಯಾಗಿದ್ದಾರೆ.
ಟೂರ್ನಿಗೆ ಜಗತ್ತಿನ ಎಲ್ಲ ಕ್ರಿಕೆಟ್ ದೇಶಗಳು ತಮ್ಮ ತಮ್ಮ ತಂಡದ ಆಟಗಾರರ ಪಟ್ಟಿ ಪ್ರಕಟಿಸುತ್ತಿವೆ. ಅದರಂತೆ ನಿನ್ನೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೂ ತಂಡ ಘೋಷಿಸಿತ್ತು. ಆದರೆ ಟೀಂ ಪ್ರಕಟಗೊಂಡ ಕೆಲ ಗಂಟೆಗಳಲ್ಲೇ ರಶೀದ್ ಖಾನ್, ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಟ್ವೀಟ್ ಮೂಲಕ ತಂಡದ ಆಯ್ಕೆ ವಿಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಮುಂದಾಳತ್ವ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು.
-
🙏🇦🇫 pic.twitter.com/zd9qz8Jiu0
— Rashid Khan (@rashidkhan_19) September 9, 2021 " class="align-text-top noRightClick twitterSection" data="
">🙏🇦🇫 pic.twitter.com/zd9qz8Jiu0
— Rashid Khan (@rashidkhan_19) September 9, 2021🙏🇦🇫 pic.twitter.com/zd9qz8Jiu0
— Rashid Khan (@rashidkhan_19) September 9, 2021
ಅಫ್ಘಾನಿಸ್ತಾನ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರಿಕೆಟ್ ಬೋರ್ಡ್, ನಾಯಕನಾದ ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ನನಗೆ ಯಾವುದೇ ಮಾಹಿತಿ ನೀಡದ ಬೋರ್ಡ್, ಆಟಗಾರರನ್ನು ಘೋಷಣೆ ಮಾಡಿರುವುದು ಬೇಸರ ತಂದಿದೆ. ಹೀಗಾಗಿ ಅಫ್ಘಾನಿಸ್ತಾನ ಟಿ -20 ತಂಡದ ನಾಯಕತ್ವದಿಂದ ತಕ್ಷಣವೇ ಕೆಳಗಿಳಿಯುತ್ತಿದ್ದೇನೆ ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದರು. ರಶೀದ್ ಖಾನ್ ಇದೇ ವರ್ಷ ಜುಲೈ ತಿಂಗಳಲ್ಲಿ ಅಫ್ಘಾನಿಸ್ತಾನ ಟಿ-ಟ್ವೆಂಟಿ ತಂಡದ ಸಾರಥ್ಯ ವಹಿಸಿಕೊಂಡಿದ್ದರು.
ಮೊಹಮ್ಮದ್ ನಬಿಗೆ ನಾಯಕತ್ವ:
ರಶೀದ್ ಖಾನ್ ರಾಜೀನಾಮೆ ನೀಡುತ್ತಿದ್ದಂತೆ ತಂಡದ ನಾಯಕತ್ವ ಹೊಣೆಯನ್ನು ಮೊಹಮ್ಮದ್ ನಬಿಗೆ ನೀಡಲಾಗಿದೆ. ಈ ಬಗ್ಗೆ ನಬಿ ಟ್ವೀಟ್ ಮಾಡಿದ್ದು, 'ಈ ನಿರ್ಣಾಯಕ ಹಂತದಲ್ಲಿ ರಾಷ್ಟ್ರೀಯ ಕ್ರಿಕೆಟ್ ಟಿ 20 ತಂಡದ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಒಪ್ಪಿಕೊಂಡಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಟೂರ್ನಿಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಓಮನ್ ಹಾಗೂ ಯುಎಇಯಲ್ಲಿ ನಡೆಯಲಿದೆ.
-
At this critical stage, I admire the decision of ACB for the announcement of leading the National Cricket Team in T20 Format. InshaAllah together we will present a great picture of the Nation in the upcoming T20 World Cup.
— Mohammad Nabi (@MohammadNabi007) September 9, 2021 " class="align-text-top noRightClick twitterSection" data="
">At this critical stage, I admire the decision of ACB for the announcement of leading the National Cricket Team in T20 Format. InshaAllah together we will present a great picture of the Nation in the upcoming T20 World Cup.
— Mohammad Nabi (@MohammadNabi007) September 9, 2021At this critical stage, I admire the decision of ACB for the announcement of leading the National Cricket Team in T20 Format. InshaAllah together we will present a great picture of the Nation in the upcoming T20 World Cup.
— Mohammad Nabi (@MohammadNabi007) September 9, 2021
ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘನ್ ತಂಡ:
ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಕರೀಂ ಜನತ್, ಹಜರತುಲ್ಲಾ ಜಾಜೈ, ಗುಲ್ಬದಿನ್ ನೈಬ್, ಉಸ್ಮಾನ್ ಘನಿ, ನವೀನ್ ಉಲ್ ಹಕ್, ಅಸ್ಘರ್ ಅಫ್ಘಾನ್, ಹಮೀದ್ ಹಸನ್, ಶರಫುದ್ದೀನ್ ಅಶ್ರಫ್, ನಜಿಬುಲ್ಲಾ ಜದ್ರಾನ್, ದವ್ಲಾತ್ ಜದ್ರಾನ್, ಹಶ್ಮತುಲ್ಲಾ ಶಾಹಿದಿ, ಶಪೂರ್ ಜದ್ರಾನ್, ಮೊಹಮ್ಮದ್ ಶಹ್ಜಾದ್, ಕ್ವಾಯಿಸ್ ಅಹ್ಮದ್
ರಿಸರ್ವ್ ಆಟಗಾರರು: ಅಫ್ಸರ್ ಜಾಜೈ, ಫರೀದ್ ಅಹ್ಮದ್
ಇದನ್ನೂ ಓದಿ: T-20 World Cup: ಕೆರಿಬಿಯನ್ ತಂಡ ಪ್ರಕಟ.. ನರೇನ್ ಔಟ್, ರಾಮ್ಪಾಲ್ ಕಮ್ಬ್ಯಾಕ್!