ETV Bharat / sports

ಇಬ್ಬರು ಭಾರತೀಯರು ಸೇರಿ ಟಾಪ್ 5 ಟಿ20 ಕ್ರಿಕೆಟಿಗರನ್ನು ಹೆಸರಿಸಿದ ರಶೀದ್ ಖಾನ್

ವಿರಾಟ್​ ಕೊಹ್ಲಿ ಮತ್ತು ಕೇನ್​ ವಿಲಿಯಮ್ಸನ್ ವಿಕೆಟ್ ಯಾವುದೇ ಇರಲಿ, ಮುಂದು ಬಂದು ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಎಬಿಡಿ ತಂಡಕ್ಕೆ ಯಾವುದೇ ಸಂದರ್ಭದಲ್ಲಾದರೂ, ಎಂತಹ ವಿಕೆಟ್​ನಲ್ಲಾದರೂ ರನ್​ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ..

Rashid Khan select top 5 best batter in the world, no place for Rohit, gayle
ರಶೀದ್ ಖಾನ್
author img

By

Published : Oct 12, 2021, 4:04 PM IST

ದುಬೈ : ವಿಶ್ವದ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ಅಫ್ಘಾನಿಸ್ತಾನದ ರಶೀದ್ ಖಾನ್ ತಮ್ಮ ನೆಚ್ಚಿನ 5 ಟಿ20 ಶ್ರೇಷ್ಠ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ. ರಶೀದ್​ ಘೋಷಿಸಿದ ಐವರಲ್ಲಿ ಭಾರತದ ಇಬ್ಬರು ಸೇರಿದ್ದಾರೆ.

ವಿಶ್ವದ ಕಠಿಣ ಬೌಲರ್​ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡು ಬರುವ ರಶೀದ್ ಖಾನ್​ ತಾವು ಕಂಡಂತೆ ಟಿ20 ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ 5 ಬ್ಯಾಟರ್​ಗಳನ್ನು ಐಸಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. ಅದರಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಸೇರಿದ್ದಾರೆ.

ಇವರ ಜೊತೆಗೆ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್, ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ ಅವರನ್ನು ಕೂಡ ರಶೀದ್​ ಖಾನ್​ ಆಯ್ಕೆ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಕೇನ್​ ವಿಲಿಯಮ್ಸನ್ ವಿಕೆಟ್ ಯಾವುದೇ ಇರಲಿ, ಮುಂದು ಬಂದು ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಎಬಿಡಿ ತಂಡಕ್ಕೆ ಯಾವುದೇ ಸಂದರ್ಭದಲ್ಲಾದರೂ, ಎಂತಹ ವಿಕೆಟ್​ನಲ್ಲಾದರೂ ರನ್​ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು, ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಕೊನೆಯ 5 ಓವರ್​​ಗಳಲ್ಲಿ 60 ರಿಂದ 80 ರನ್​ ಅಗತ್ಯವಿದ್ದರೂ ಸಿಡಿಸಬಲ್ಲರೂ ಎಂದು ರಶೀದ್ ಹೇಳಿದ್ದಾರೆ.

ಆದರೆ, ಟಿ20 ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ಗೆ ಹೆಸರಾಗಿರುವ ರೋಹಿತ್ ಶರ್ಮಾ, ರಾಹುಲ್, ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಸೇರಿ ಹಲವಾರು ಕ್ರಿಕೆಟಿಗರ ಹೆಸರನ್ನು ರಶೀದ್​ ಸೇರಿಸದಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಧೋನಿ ಗ್ರೇಟೆಸ್ಟ್​ ಫಿನಿಶರ್​ ಆಗಿ ದೀರ್ಘಕಾಲ ನೆನಪಿನಲ್ಲಿ ಉಳಿದುಕೊಳ್ಳಲಿದ್ದಾರೆ : ರಿಕಿ ಪಾಂಟಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.