ETV Bharat / sports

ರಣಜಿ ಟ್ರೋಫಿ: ಮಗಳ ಅಂತ್ಯಕ್ರಿಯೆ ಮುಗಿಸಿ ಬಂದು ಶತಕ ಬಾರಿಸಿದ ಬರೋಡಾ ಕ್ರಿಕೆಟಿಗ - ವಿಷ್ಣು ಸೋಲಂಕಿ ಶತಕ

ಸೋಲಂಕಿ ತಮ್ಮ ಬರೋಡ ತಂಡದ ಜೊತೆಗೆ ರಣಜಿ ಟೂರ್ನಿಗಾಗಿ ಭುವನೇಶ್ವರದಲ್ಲಿದ್ದರು. ಆದರೆ, ಮೊದಲ ಪಂದ್ಯಕ್ಕೂ ಮುನ್ನ ಅವರಿಗೆ ಕೆಟ್ಟ ಸುದ್ದಿ ಕೇಳಿಬಂದಿತ್ತು. ಅದೇನೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಜನಸಿದ್ದ ಅವರ ಹೆಣ್ಣು ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಸುದ್ದಿ ತಿಳಿದ ತಕ್ಷಣ ವಡೋದರಕ್ಕೆ ಮರಳಿದ ಸೋಲಂಕಿ ತಮ್ಮ ಮಗಳ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ 3 ದಿನಗಳ ನಂತರ ಮತ್ತೆ ಭುವನೇಶ್ವರಕ್ಕೆ ಬಂದಿದ್ದರು.

Vishnu Solanki century
ವಿಷ್ಣು ಸೋಲಂಕಿ ಶತಕ
author img

By

Published : Feb 26, 2022, 3:33 PM IST

Updated : Feb 26, 2022, 3:59 PM IST

ಭುವನೇಶ್ವರ್: ಬರೋಡ ತಂಡದ ಬ್ಯಾಟರ್​ ವಿಷ್ಣು ಸೋಲಂಕಿ ಕೆಲವು ದಿನಗಳ ಹಿಂದೆಯಷ್ಟೇ ಜನಿಸಿದ್ದ ತಮ್ಮ ಹೆಣ್ಣುಮಗುವಿನ ಸಾವಿನ ದುಃಖದಲ್ಲಿದ್ದರೂ, ಮತ್ತೆ ಮೈದಾನಕ್ಕೆ ಮರಳಿ ಚಂಡೀಗಡ ವಿರುದ್ಧ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.

ಸೋಲಂಕಿ ಬರೋಡ ತಂಡದ ಜೊತೆಗೆ ರಣಜಿ ಟೂರ್ನಿಗಾಗಿ ಭುವನೇಶ್ವರದಲ್ಲಿದ್ದರು. ಆದರೆ, ಮೊದಲ ಪಂದ್ಯಕ್ಕೂ ಮುನ್ನ ಅವರಿಗೆ ಕೆಟ್ಟ ಸುದ್ದಿ ಕೇಳಿಬಂದಿತ್ತು. ಅದೇನೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಜನಸಿದ್ದ ಅವರ ಹೆಣ್ಣು ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ಸುದ್ದಿ ತಿಳಿದ ತಕ್ಷಣ ವಡೋದರಕ್ಕೆ ಮರಳಿದ ಸೋಲಂಕಿ ತಮ್ಮ ಮಗಳ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ 3 ದಿನಗಳ ನಂತರ ಮತ್ತೆ ಭುವನೇಶ್ವರಕ್ಕೆ ಬಂದಿದ್ದರು.

ಆದರೆ ಈ ದುಃಖದ ಸಂದರ್ಭದಲ್ಲೂ ವಿಶ್ರಾಂತಿ ಬಯಸದೇ ತಂಡಕ್ಕಾಗಿ ಆಡುವುದಕ್ಕೆ ಒಪ್ಪಿಗೆ ಸೂಚಿಸಿ, ಚಂಡೀಗಡ ವಿರುದ್ಧ 165 ಎಸೆತಗಳಲ್ಲಿ 12 ಬೌಂಡರಿ ಸಹಿತ 104 ರನ್​ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • What a player . Has to be the toughest player i have known. A big salute to vishnu and his family by no means this is easy🙏 wish you many more hundreds and alot of success 🙏🙏 pic.twitter.com/i6u7PXfY4g

    — Sheldon Jackson (@ShelJackson27) February 25, 2022 " class="align-text-top noRightClick twitterSection" data=" ">

ಈ ವಿಚಾರವನ್ನು ಸೌರಾಷ್ಟ್ರ ವಿಕೆಟ್​ ಕೀಪರ್​ ಶೆಲ್ಡಾನ್ ಜಾಕ್ಸನ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಸೋಲಂಕಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ." ನಾನು ಕಂಡಂತಹ ಅತ್ಯಂತ ಕಠಿಣ ಆಟಗಾರ ಇವರೇ. ವಿಷ್ಣು ಮತ್ತು ಅವರ ಕುಟುಂಬಕ್ಕೆ ಒಂದು ದೊಡ್ಡ ಸೆಲ್ಯೂಟ್. ಇಂತಹ ದುರಂತದ ಸಂದರ್ಭದಲ್ಲಿ ಆಡುವುದು ಸುಲಭವಲ್ಲ. ನಿಮಗೆ ಮತ್ತಷ್ಟು ಶತಕ ಮತ್ತು ಬಹಳಷ್ಟು ಯಶಸ್ಸು ಸಿಗಲಿ" ಎಂದು ಪ್ರಾರ್ಥಿಸುವುದಾಗಿ ಜಾಕ್ಸನ್​ ಟ್ವೀಟ್ ಮಾಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚಂಡೀಗಡ 168ಕ್ಕೆ ಆಲೌಟ್ ಆದರೆ ಬರೋಡಾ 517 ರನ್​ಗಳಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಚಂಡೀಗಡ ವಿಕೆಟ್ ನಷ್ಟವಿಲ್ಲದೆ 145 ರನ್​ಗಳಿಸಿದೆ.

ಇದನ್ನೂ ಓದಿ: T-20ಯಲ್ಲಿ 100ನೇ ಜಯದತ್ತ ಭಾರತದ ಚಿತ್ತ.. ಲಂಕಾ ದಹನ ಮಾಡಿ ಹೊಸ ದಾಖಲೆ ಬರೆಯುತ್ತಾ ರೋಹಿತ್ ಪಡೆ?

Last Updated : Feb 26, 2022, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.