ETV Bharat / sports

ಮಿಂಚಿದ ಗೌತಮ್​: ರೈಲ್ವೇಸ್​ ವಿರುದ್ಧ ಕರ್ನಾಟಕಕ್ಕೆ 118 ರನ್​ಗಳ ಇನ್ನಿಂಗ್ಸ್​ ಮುನ್ನಡೆ

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜ್ಯ ತಂಡ ನಾಯಕ ಮನೀಶ್ ಪಾಂಡೆ(156) ಮತ್ತು ಕೆವಿ ಸಿದ್ಧಾರ್ಥ್​(146) ಅವರ ಶತಕಗಳ ಸಹಿತ 481 ರನ್​ಗಳಿಸಿತ್ತು.

Karnataka secure 118 runs first innings lead against Railways
ಕೆ ಗೌತಮ್​ ರಣಜಿ
author img

By

Published : Feb 19, 2022, 7:33 PM IST

ಚೆನ್ನೈ: ಕೃಷ್ಣಪ್ಪ ಗೌತಮ್​ ಮತ್ತು ರೋನಿತ್ ಮೋರೆ ಅವರ ಅದ್ಭುತ ಬೌಲಿಂಗ್ ನೆರವಿನಿಂದ ರೈಲ್ವೇಸ್​ ತಂಡವನ್ನು 426 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 55 ರನ್​ಗಳ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜ್ಯ ತಂಡ ನಾಯಕ ಮನೀಶ್ ಪಾಂಡೆ(156) ಮತ್ತು ಕೆವಿ ಸಿದ್ಧಾರ್ಥ್​(146) ಅವರ ಶತಕಗಳ ಸಹಿತ 481 ರನ್​ಗಳಿಸಿತ್ತು.

ಈ ಮೊತ್ತವನ್ನು ಹಿಂಬಾಲಿಸಿ ರೈಲ್ವೇಸ್​ ಕೂಡ ಬ್ಯಾಟಿಂಗ್​​ನಲ್ಲಿ ತಕ್ಕ ಉತ್ತರ ನೀಡಿ 426 ರನ್​ಗಳಿಸಿತ್ತಾದರೂ, ಇನ್ನಿಂಗ್ಸ್​ ಮುನ್ನಡೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ವಿವೇಕ್​ ಸಿಂಗ್​ 59, ಅರಿಂದಮ್ ಘೋಷ್​ 105, ಮೊಹಮ್ಮದ್ ಸೈಫ್​ 84, ಯುವರಾಜ್​ ಸಿಂಗ್ 48 ರನ್​ಗಳಿಸಿದರು.

ಕರ್ನಾಟಕ ಪರ ಕೃಷ್ಣಪ್ಪ ಗೌತಮ್​ 127ಕ್ಕೆ 4, ವಿದ್ಯಾದರ್ ಪಾಟೀಲ್ 77ಕ್ಕೆ 2, ರೋನಿತ್ ಮೋರೆ 67ಕ್ಕೆ 3 ಹಾಗೂ ಶ್ರೇಯಸ್ ಗೋಪಾಲ್​ 68ಕ್ಕೆ 1 ವಿಕೆಟ್​ ಪಡೆದು 55 ರನ್​ಗಳ ಇನ್ನಿಂಗ್ಸ್ ಮುನ್ನಡೆ ಪಡೆದು 3 ಅಂಕ ಗಿಟ್ಟಿಸಿಕೊಳ್ಳವುದಕ್ಕೆ ನೆರವಾದರು.

55 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿರುವ ಕರ್ನಾಟಕ ತಂಡ 3ನೇ ದಿನದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 63 ರನ್​ಗಳಿಸಿದೆ. ಮಯಾಂಕ್ ಅಗರ್ವಾಲ್​ 39 ಮತ್ತು ಆರ್​ ಸಮರ್ಥ್​ 20 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ವೈಫಲ್ಯ ಅನುಭವಿಸಿದ್ದ ಪಡಿಕ್ಕಲ್ 2ನೇ ಇನ್ನಿಂಗ್ಸ್​ನಲ್ಲೂ ಕೇವಲ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: ರಣಜಿಯಲ್ಲಿ ಟಿ20 ಆಟ : 148 ಎಸೆತಗಳಲ್ಲಿ 194 ರನ್ ಚಚ್ಚಿದ ಶಾರುಖ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.