ETV Bharat / sports

ಪುದುಚೆರಿ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್​ ಮತ್ತು 20 ರನ್​ ಜಯ: ಕ್ವಾರ್ಟರ್​ ಫೈನಲ್ ಪ್ರವೇಶ

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಯುವ ಬ್ಯಾಟರ್​ ದೇವದತ್​ ಪಡಿಕ್ಕಲ್​(178) ಮತ್ತು ನಾಯಕ ಮನೀಶ್ ಪಾಂಡೆ(107) ಅವರ ಶತಕಗಳ ನೆರವಿನಿಂದ 453 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು.

Karnataka beat Puducherry and enter quarter finals
ಮನೀಶ್ ಪಾಂಡೆ
author img

By

Published : Mar 6, 2022, 4:30 PM IST

ಚೆನ್ನೈ: ದೇವದತ್​ ಪಡಿಕ್ಕಲ್ ಶತಕ ಮತ್ತು ಬೌಲರ್​ಗಳ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕರ್ನಾಟಕ ತಂಡ ಪುದುಚೇರಿ ವಿರುದ್ಧ ಇನ್ನಿಂಗ್ಸ್​ ಹಾಗೂ 20 ರನ್​ಗಳ ಜಯ ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ.

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಯುವ ಬ್ಯಾಟರ್​ ದೇವದತ್​ ಪಡಿಕ್ಕಲ್​(178) ಮತ್ತು ನಾಯಕ ಮನೀಶ್ ಪಾಂಡೆ(107) ಅವರ ಶತಕಗಳ ನೆರವಿನಿಂದ 453 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು.

3ನೇ ದಿನ ಗೌತಮ್​(86ಕ್ಕೆ 5), ವಿದ್ಯಾಧರ್(41ಕ್ಕೆ2) ಮತ್ತು ಪ್ರಸಿಧ್​(42ಕ್ಕೆ2) ದಾಳಿಗೆ ಸಿಲುಕಿದ ಪುದುಚೇರಿ 241 ರನ್​ಗಳಿಗೆ ಆಲೌಟ್ ಆಗಿ 212 ರನ್​ಗಳ ಹಿನ್ನಡೆ ಅನುಭವಿಸಿ, ಫಾಲೋ ಆನ್​ಗೆ ತುತ್ತಾಗಿತ್ತು. ಅಲ್ಲದೆ ಎರಡನೇ ಇನ್ನಿಂಗ್ಸ್​ನಲ್ಲೂ 3ನೇ ದಿನದಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 62 ರನ್​ಗಳಿಸಿತ್ತು.

ಅಂತಿಮ ದಿನವಾದ ಇಂದು 62 ರನ್​ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಪುದುಚೇರಿ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 192 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಸೋಲು ಕಂಡಿತು.

ಪುದುಚೇರಿ ಪರವಾಗಿ ಆಡುತ್ತಿರುವ ಪವನ್​ ದೇಶಪಾಂಡೆ ಅಜೇಯ 54 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರೆ ಹೊರೆತು ಇನ್ನಿಂಗ್ಸ್​ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಸುಬೋತ್ ಭಾಟಿ 37,ಜಿ. ಚಿರಂಜೀವ್ 28 ರನ್​ಗಳಿಸಿದರು.

ಕರ್ನಾಟಕ ಪರ ಶ್ರೇಯಸ್​ ಗೋಪಾಲ್​ 82ಕ್ಕೆ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರಸಿಧ್ ಕೃಷ್ಣ 38ಕ್ಕೆ 3, ವಿದ್ಯಾಧರ್ ಪಾಟೀಲ್ 9ಕ್ಕೆ 1 ಮತ್ತು ಕೆ. ಗೌತಮ್​ 31ಕ್ಕೆ1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಟೆಸ್ಟ್​​ನಲ್ಲಿ ಗರಿಷ್ಠ ವಿಕೆಟ್: ಕಪಿಲ್ ದೇವ್​ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್​ ಕುಂಬ್ಳೆ ರೆಕಾರ್ಡ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.