ETV Bharat / sports

ಪದಾರ್ಪಣೆ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ ಸುವೇದ್.. ಈ ದಾಖಲೆ ಬರೆದ 14ನೇ ಭಾರತೀಯ ಬ್ಯಾಟರ್​​! - ಮುಂಬೈ ತಂಡದ ಸುವೇದ್​ ಪಾರ್ಕರ್

ರಣಜಿ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಸುವೇದ್​, ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಸಾಧನೆ ಮಾಡಿದ್ದಾರೆ.

Mumbai suved parkar score double hundred

author img

By

Published : Jun 7, 2022, 5:11 PM IST

Updated : Jun 7, 2022, 5:29 PM IST

ಬೆಂಗಳೂರು: ಉತ್ತರಾಖಂಡ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ವಾರ್ಟರ್​ ಫೈನಲ್ ರಣಜಿ ಪಂದ್ಯದಲ್ಲಿ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಸುವೇದ್ ಪಾರ್ಕರ್ ದ್ವಿಶತಕ ಸಾಧನೆ ಮಾಡಿದ್ದು, ಪದಾರ್ಪಣೆ ಪಂದ್ಯದಲ್ಲೇ ಈ ಸಾಧನೆ ಮಾಡಿರುವ ಭಾರತದ 14ನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನ ಆಲೂರು ಕ್ರಿಕೆಟ್​ ಮೈದಾನದಲ್ಲಿ ಉತ್ತರಾಖಂಡ - ಮುಂಬೈ ತಂಡದ ನಡುವೆ ಪಂದ್ಯ ನಡೆಯುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಕಣಕ್ಕಿಳಿದ ಸುವೇದ್​ ಪಾರ್ಕರ್​​ ತಾವು ಎದುರಿಸಿದ 447 ಎಸೆತಗಳಲ್ಲಿ 21 ಬೌಂಡರಿ, 4 ಸಿಕ್ಸರ್​ ಸೇರಿದಂತೆ 252ರನ್​​ಗಳಿಕೆ ಮಾಡಿದರು. ಈ ಮೂಲಕ ತಂಡ 8 ವಿಕೆಟ್​​ನಷ್ಟಕ್ಕೆ 647ರನ್​​ಗಳಿಕೆ ಮಾಡಿ, ಡಿಕ್ಲೇರ್ ಮಾಡಿಕೊಂಡಿದೆ.

ಇದನ್ನೂ ಓದಿ: IND vs SA T20: ಐಪಿಎಲ್​​ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಚಹಲ್ ಹೊಸ ದಾಖಲೆಗೆ ಸಜ್ಜು

ಸುವೇದ್ ಪಾರ್ಕರ್​​ಗೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾ ಅವರ ಬಾಲ್ಯದ ಕೋಚ್​ ದಿನೇಶ್ ಲಾಡ್ ಅವರೇ​ ತರಬೇತಿ ನೀಡಿದ್ದು, ತಾವು ಬ್ಯಾಟ್​ ಬೀಸಲು ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ ಸುವೇದ್​ ಪಾರ್ಕರ್​, ಸರ್ಫರಾಜ್​ ಖಾನ್​ ಅವರೊಂದಿಗೆ ಸೇರಿ 277ರನ್​ಗಳ ಜೊತೆಯಾಟವಾಡಿದರು. ಪ್ರಥಮ ದರ್ಜೆ ಕ್ರಿಕೆಟ್​​ನ ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಎರಡನೇ ಮುಂಬೈ ಬ್ಯಾಟರ್ ಆಗಿದ್ದಾರೆ. ಈ ಹಿಂದೆ 1993 - 94ರ ಋತುವಿನಲ್ಲಿ ಹರಿಯಾಣ ವಿರುದ್ಧ ಮುಂಬೈ ತಂಡದ ಅಮೋಲ್​ ಮಜುಂದಾರ್​ 260 ರನ್ ಗಳಿಸಿದ್ದರು.

  • Double hundred on Debut. Special knock Suved parkar. Very happy to see Sarfaraz khan continuing his Dream run. @MumbaiCricAssoc 💪 #RanjiTrophy

    — Surya Kumar Yadav (@surya_14kumar) June 7, 2022 " class="align-text-top noRightClick twitterSection" data=" ">

ಸುವೇದ್​ ಪಾರ್ಕರ್​​ ಅದ್ಭುತ ಪ್ರದರ್ಶನಕ್ಕೆ ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್​ ಮೆಚ್ಚುಗೆ ವ್ಯಕ್ತಪಡಿಸಿದ್ದು,ಟ್ವೀಟ್ ಮಾಡಿದ್ದಾರೆ.

Last Updated : Jun 7, 2022, 5:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.