ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ಮಧ್ಯೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ 2 ದಿನದಾಟ ಮುಕ್ತಾಯವಾಗಿದೆ. ಮುಂಬೈ ನೀಡಿದ 374 ರನ್ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ 1 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಮೊದಲ ದಿನದಾಟದಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದ್ದ ಮುಂಬೈ 2ನೇ ದಿನದಾಟ ಆರಂಭಿಸಿ ಬೃಹತ್ ಮೊತ್ತ ಗಳಿಸುವ ಇರಾದೆಯಲ್ಲಿತ್ತು. ಆದರೆ, ಇದಕ್ಕೆ ಕಡಿವಾಣ ಹಾಕಿದ ಮಧ್ಯಪ್ರದೇಶ ಬೌಲರ್ಗಳು 374 ರನ್ಗಳಿಗೆ ಇನಿಂಗ್ಸ್ ಮುಗಿಸಿತು. ಮುಂಬೈ ತಂಡ ಮೊದಲ ಅವಧಿಯಲ್ಲಿಯೇ 128 ರನ್ ಗಳಿಸಿ ಆಲೌಟ್ ಆಯಿತು.
-
That's Stumps on Day 2 of the @Paytm #RanjiTrophy #Final in Bengaluru!
— BCCI Domestic (@BCCIdomestic) June 23, 2022 " class="align-text-top noRightClick twitterSection" data="
After Mumbai posted 374 on the board, Madhya Pradesh moved to 123/1. #MPvMUM
We will be back for the Day 3 action tomorrow.
Scorecard ▶️ https://t.co/xwAZ13D0nP pic.twitter.com/EcEVeA1W2U
">That's Stumps on Day 2 of the @Paytm #RanjiTrophy #Final in Bengaluru!
— BCCI Domestic (@BCCIdomestic) June 23, 2022
After Mumbai posted 374 on the board, Madhya Pradesh moved to 123/1. #MPvMUM
We will be back for the Day 3 action tomorrow.
Scorecard ▶️ https://t.co/xwAZ13D0nP pic.twitter.com/EcEVeA1W2UThat's Stumps on Day 2 of the @Paytm #RanjiTrophy #Final in Bengaluru!
— BCCI Domestic (@BCCIdomestic) June 23, 2022
After Mumbai posted 374 on the board, Madhya Pradesh moved to 123/1. #MPvMUM
We will be back for the Day 3 action tomorrow.
Scorecard ▶️ https://t.co/xwAZ13D0nP pic.twitter.com/EcEVeA1W2U
ಸರ್ಫರಾಜ್ ಖಾನ್ ಶತಕ: ಮೊದಲ ದಿನದಾಟದಲ್ಲಿ 48 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಖಾನ್ ಶತಕ ಸಾಧನೆ ಮಾಡಿದರು. 2 ಸಿಕ್ಸರ್, 13 ಬೌಂಡರಿ ಸಮೇತ 134 ರನ್ ಗಳಿಸಿ ರಣಜಿಯಲ್ಲಿ ಮತ್ತೊಂದು ಶತಕ ಬಾರಿಸಿದರು.
ಇನ್ನುಳಿದಂತೆ ಹಾರ್ದಿಕ್ ತಮೋರೆ 24, ಶಮ್ಸ್ ಮುಲಾನೆ 12, ತನುಷ್ ಕೊಟೇಯ್ನ್ 15 ರನ್ ಗಳಿಸಿ ಔಟಾಗುವ ಮೂಲಕ ಮಧ್ಯಪ್ರದೇಶಕ್ಕೆ ಬೃಹತ್ ಮೊತ್ತ ನೀಡುವ ಗುರಿ ಈಡೇರಲಿಲ್ಲ.
ಮಧ್ಯಪ್ರದೇಶದ ಪರ ಕರಾರುವಾಕ್ ದಾಳಿ ನಡೆಸಿದ ಗೌರವ್ ಯಾದವ್ 4 ವಿಕೆಟ್, ಅನುಭವ್ ಅಗರ್ವಾಲ್ 3 ಸರನ್ಶಾ ಜೈನ್ 2 ವಿಕೆಟ್ ಪಡೆದು ಮುಂಬೈಗೆ ಪೆಟ್ಟು ನೀಡಿದರು.
ಮಧ್ಯಪ್ರದೇಶ ಉತ್ತಮ ಆರಂಭ: ಮುಂಬೈ ನೀಡಿದ 374 ರನ್ಗಳಿಗೆ ಉತ್ತರವಾಗಿ ಬ್ಯಾಟ್ ಮಾಡಿದ ಮಧ್ಯಪ್ರದೇಶ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಹಿಮಾಂಶು ಮಂತ್ರಿ (31), ಯಶ್ ದುಬೆ (44) ಮೊದಲ ವಿಕೆಟ್ಗೆ 47 ರನ್ ಗಳಿಸಿದರು. ಹಿಮಾಂಶು ಔಟಾದ ಬಳಿಕ ಬಂದ ಶುಭಂ ಶರ್ಮಾ 41 ರನ್ ಗಳಿಸಿ ಯಶ್ ದುಬೆ ಜೊತೆ ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುಂಬೈನ ತುಷಾರ್ ದೇಶ್ಪಾಂಡೆ 1 ವಿಕೆಟ್ ಪಡೆದರು.
ಓದಿ; IND W vs SL W 1st T20: 34 ರನ್ಗಳ ಗೆಲುವು ಸಾಧಿಸಿದ ಭಾರತ ಮಹಿಳೆಯರು, ಸರಣಿ ಶುಭಾರಂಭ