ETV Bharat / sports

ರಣಜಿಯಲ್ಲಿ ಮಿಂಚಿದ್ದ ಸಮರ್ಥ್​ ವ್ಯಾಸ್​ ಹೈದರಾಬಾದ್​ ಪಾಲು.. ಇಷ್ಟು ಮೊತ್ತಕ್ಕೆ ಬಿಕರಿ

ರಣಜಿಯಲ್ಲಿ ಗುಜರಾತ್​ ಪರವಾಗಿ ಆಡುವ ಕ್ರಿಕೆಟಿಗ ಸಮರ್ಥ್​ ವ್ಯಾಸ್​ ಐಪಿಎಲ್​ ಹರಾಜಿನಲ್ಲಿ ಹೈದರಾಬಾದ್​ ತಂಡದ ಸೇರಿದ್ದಾರೆ. 20 ಲಕ್ಷ ರೂಪಾಯಿ ನೀಡಿ ಅವರನ್ನು ಖರೀದಿ ಮಾಡಲಾಗಿದೆ. ವೇಗಿ ಜಯದೇವ್​ ಉನದ್ಕಟ್​ ಕೂಡ ಸನ್​ರೈಸರ್ಸ್​ ಬುಟ್ಟಿಗೆ ಬಿದ್ದಿದ್ದಾರೆ.

rajkot-cricketer-samarth-vyas
ರಣಜಿಯಲ್ಲಿ ಮಿಂಚಿದ್ದ ಸಮರ್ಥ್​ ವ್ಯಾಸ್​ ಹೈದರಾಬಾದ್​ ಪಾಲು
author img

By

Published : Dec 24, 2022, 12:32 PM IST

ರಾಜ್​ಕೋಟ್: ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್​ನ ರಾಜ್​ಕೋಟ್​ ಕ್ರಿಕೆಟಿಗ ಸಮರ್ಥ್​ ವ್ಯಾಸ್​ ನಿನ್ನೆ ನಡೆದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗಿದ್ದಾರೆ. 20 ಲಕ್ಷ ರೂಪಾಯಿ ನೀಡಿ ವ್ಯಾಸ್​ರನ್ನು ಸನ್​ರೈಸರ್ಸ್​ ಹೈದರಾಬಾದ್​ ತಂಡ ಖರೀದಿ ಮಾಡಿದೆ. ಸಮರ್ಥ್​ ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿದ್ದರೂ ಲಕ್ಷಗಳಿಗೆ ಮಾರಾಟವಾಗಿದ್ದಾರೆ.

ಹರಾಜಿನಲ್ಲಿ ಬಿಕರಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಮರ್ಥ್​, ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕನಸು ನನಸಾಯಿತು. ಐಪಿಎಲ್​ನಂತಹ ದೊಡ್ಡ ವೇದಿಕೆಯಲ್ಲಿ ಆಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ನನ್ನ ಕನಸು ಕೂಡ ಆಗಿತ್ತು. ಉತ್ತಮ ಪ್ರದರ್ಶನ ನೀಡಿ ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್​ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದರು.

ಡ್ರೆಸ್ಸಿಂಗ್​ ರೂಮಲ್ಲಿ ಹರಾಜು ವೀಕ್ಷಣೆ: ರಣಜಿ ಪಂದ್ಯ ಮುಗಿದ ಬಳಿಕ ಆಟಗಾರರು ಎಲ್ಲರೂ ಮನೆಗೆ ಹೋದರು. ಆದರೆ, ನಾನು ಡ್ರೆಸ್ಸಿಂಗ್ ರೂಮಲ್ಲಿ ಒಬ್ಬನೇ ಕೂತು ಹರಾಜು ಪ್ರಕ್ರಿಯೆ ವೀಕ್ಷಿಸಿದೆ. 45 ನೇ ಸ್ಥಾನದಲ್ಲಿ ಇದ್ದ ನಾನು ಬಿಕರಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಕೊನೆಗೆ ಹೈದರಾಬಾದ್​ ತಂಡ ಖರೀದಿ ಮಾಡಿತು. ಇದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.

ಇನ್ನು 12 ವರ್ಷಗಳ ಬಳಿಕ ಭಾರತ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದು ಬಾಂಗ್ಲಾದೇಶ ವಿರುದ್ಧ ಕಣಕ್ಕಳಿದಿರುವ ಜಯದೇವ್​ ಉನದ್ಕಟ್​ರನ್ನೂ ಹೈದರಾಬಾದ್​ ತಂಡ 50 ಲಕ್ಷ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಓದಿ: IPL ಹರಾಜಿನಲ್ಲಿ ವಿದೇಶಿಗರಿಗೆ ರತ್ನಗಂಬಳಿ; ಕೋಟಿ ಬಾಚಿದ ಸ್ವದೇಶಿ ಆಟಗಾರರು ಇವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.