ETV Bharat / sports

ಹಾರ್ದಿಕ್ ಪಾಂಡ್ಯ ಸಿಡಿಲಬ್ಬರ: ರಾಯಲ್ಸ್​ಗೆ 193 ರನ್​ಗಳ ಕಠಿಣ ಗುರಿ ನೀಡಿದ ಟೈಟನ್ಸ್

author img

By

Published : Apr 14, 2022, 7:18 PM IST

Updated : Apr 14, 2022, 9:31 PM IST

ರಾಜಸ್ಥಾನ್ ಬಲಿಷ್ಠ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳ ಸಹಿತ ಅಜೇಯ 87 ರನ್​ ಸಿಡಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.

Rajasthan Royals vs Gujarat Titans IPL live
ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಲಯನ್ಸ್​

ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕ ಮತ್ತು ಕನ್ನಡಿಗ ಅಭಿನವ್ ಮನೋಹರ್(43) ಮತ್ತು ಮಿಲ್ಲರ್(31)​ ಅವರ ಉಪಯುಕ್ತ ರನ್​ಗಳ ನೆರವಿನಿಂದ ಗುಜರಾತ್ ಟೈಟನ್ಸ್​ನ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್​ಗಳಿಸಿದೆ.

ಆರಂಭಿಕರಾದ ಮ್ಯಾಥ್ಯೂ ವೇಡ್​ (12) ಮತ್ತು ಶುಬ್ಮನ್ ಗಿಲ್(13) ಹಾಗೂ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ವಿಜಯ್ ಶಂಕರ್(2) ತಂಡದ ಮೊತ್ತ 53 ರನ್​ಗಳಾಗುವಷ್ಟರಲ್ಲಿ ಪೆವಿಲಿಯನ್​ ಸೇರಿಕೊಂಡರು. 7 ಓವರ್​ಗೂ ಮುನ್ನವೇ ಅಗ್ರಕ್ರಮಾಂಕದ ಮೂವರನ್ನು ಕಳೆದುಕೊಂಡ ಟೈಟನ್ಸ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು.

ಆದರೆ 4ನೇ ವಿಕೆಟ್​ಗೆ ಒಂದಾದ ನಾಯಕ ಹಾರ್ದಿಕ್ ಮತ್ತು ಅಭಿನವ್ ಮನೋಹರ್​ 4ನೇ ವಿಕೆಟ್​ಗೆ 86 ರನ್​ಗಳ ಕೊಡುಗೆ ನೀಡಿತು. ಮೊದಲು ನಿಧಾನಗತಿ ಬ್ಯಾಟಿಂಗ್ ಮಾಡಿದರೂ ನಂತರ ಅಬ್ಬರದ ಬ್ಯಾಟಿಂಗ್ ಮಾಡಿದ ಮನೋಹರ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 43 ರನ್​ಗಳಿಸಿದರು.

ಮನೋಹರ್ ವಿಕೆಟ್​ ನಂತರವೂ ಅಬ್ಬರಿಸಿದ ನಾಯಕ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳ ಸಹಿತ ಅಜೇಯ 87 ರನ್​ ಸಿಡಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ 5 ಬೌಂಡರಿ ಮತ್ತು 1ಸಿಕ್ಸರ್​ ಸಹಿತ ಅಜೇಯ 31 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಜೋಡಿ ಕೊನೆಯ 25 ಎಸೆತಗಳಲ್ಲಿ 53 ರನ್​ಗಳಿಸಿತು.

ರಾಯಲ್ಸ್ ಪರ ಚಹಲ್ 32ಕ್ಕೆ1, ಕುಲ್ದೀಪ್ ಸೇನ್ 51ಕ್ಕೆ1 ರಿಯಾನ್ ಪರಾಗ್ 12ಕ್ಕೆ 1 ವಿಕೆಟ್ ಪಡೆದರು.

ಇನ್ನು ಟಾಸ್​ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಸಣ್ಣ ಗಾಯಕ್ಕೆ ಒಳಗಾಗಿರುವ ಪ್ರೀಮಿಯರ್ ಬೌಲರ್​ ಟ್ರೆಂಟ್ ಬೌಲ್ಟ್​ ಈ ಪಂದ್ಯದಿಂದ ಹೊರಗುಳಿದಿದ್ದು, ಜಿಮ್ಮಿ ನೀಶಮ್ ಅವರ ಬದಲಿಗೆ ಕಣಕ್ಕಿಳಿದಿದ್ದರು. 3 ಗೆಲುವುಗಳ ನಂತರ ಒಂದು ಸೋಲು ಕಂಡಿದ್ದ ಗುಜರಾತ್ ಟೈಟನ್ಸ್​ ತಂಡದಲ್ಲೂ 2 ಬದಲಾವಣೆಕೊಂಡಿತ್ತು. ಸಾಯಿ ಸುದರ್ಶನ್ ಬದಲಿಗೆ ವಿಜಯ್ ಶಂಕರ್ ಮತ್ತು ದರ್ಶನ್ ನಲ್ಕಂಡೆ ಬದಲಿಗೆ ಯಶ್ ದಯಾಳ್ ತಂಡದಲ್ಲಿ ಅವಕಾಶ ಪಡೆದಿದ್ದರು.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಶುಭಮನ್ ಗಿಲ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಯಶ್ ದಯಾಳ್

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೀ/ನಾಯಕ), ರಾಸಿ ವ್ಯಾನ್ ಡೆರ್ ಡಸ್ಸೆನ್, ಶಿಮ್ರಾನ್ ಹೆಟ್ಮಾಯರ್, ಜೇಮ್ಸ್ ನೀಶಮ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್

Last Updated : Apr 14, 2022, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.