ಬೆಂಗಳೂರು : ಅಂಡರ್-19 ವಿಶ್ವಕಪ್ನಲ್ಲಿ ತಮ್ಮ ಆಲ್ರೌಂಡರ್ ಆಟದ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದ ರಾಜವರ್ಧನ್ ಹಂಗರ್ಗೆಕರ್ ಮತ್ತು ರಾಜ್ ಅಂಗದ್ ಭಾವಾ ಐಪಿಎಲ್ ಮೆಗಾ ಹರಾಜಿನಲ್ಲಿ ಅಚ್ಚರಿಯ ಮೊತ್ತಕ್ಕೆ ಶ್ರೀಮಂತ ಕ್ರಿಕೆಟ್ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ.
ಕ್ರೀಡಾ ಕುಟಂಬದಿಂದಲೇ ಬಂದಿರುವ ರಾಜ್ ಬಾವಾ ಕಿರಿಯ ವಿಶ್ವಕಪ್ನಲ್ಲಿ ಬಲಗೈ ಬೌಲರ್ ಮತ್ತು ಎಡಗೈ ಬ್ಯಾಟರ್. ಈತನನ್ನು ಪಜಾಂಬ್ ಕಿಂಗ್ಸ್ ಬರೋಬ್ಬರಿ ₹2 ಕೋಟಿ ನೀಡಿ ಖರಿದಿಸಿದೆ.
ಈತ 2022ರ ಕಿರಿಯರ ವಿಶ್ವಕಪ್ನಲ್ಲಿ 9 ವಿಕೆಟ್ ಮತ್ತು 252 ರನ್ಗಳಿಸಿದ್ದಾರೆ. ತಂಡದ ನಾಯಕ ಧುಲ್ ಮತ್ತು ಉಪನಾಯಕ ರಶೀದ್ ಕೊರೊನಾದಿಂದ ಲೀಗ್ ಪಂದ್ಯಗಳನ್ನು ತಪ್ಪಿಸಿಕೊಂಡಾಗ ತಂಡದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು.
ಮತ್ತೊಬ್ಬ ಯುವ ಆಟಗಾರ ರಾಜವರ್ಧನ್ ಹಂಗಗರ್ಕೆಕರ್ 140 ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಬೌಲರ್. ಈತನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 1.5 ಕೋಟಿ ನೀಡಿ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.
ರಾಜವರ್ಧನ್ ಈಗಾಗಲೇ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ಆಡಿದ್ದಾರೆ. ಕಿರಿಯರ್ ವಿಶ್ವಕಪ್ ಜಯಿಸಿದ ನಾಯಕ ಯಶ್ ಧುಲ್ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 50 ಲಕ್ಷ ರೂಪಾಯಿಗಳಿಗೆ ಖರೀದಿಸಿದೆ.