ಬ್ರಿಸ್ಬೇನ್(ಆಸ್ಟ್ರೇಲಿಯಾ): ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಮೂರು ಅಭ್ಯಾಸ ಪಂದ್ಯಗಳ ಪೈಕಿ ಭಾರತ ಒಂದರಲ್ಲಿ ಸೋಲು ಮತ್ತು ಮತ್ತೊಂದರಲ್ಲಿ ಗೆಲುವು ಸಾಧಿಸಿದೆ.
ಸೋಮವಾರ ಇಲ್ಲಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಕೆ ಎಲ್ ರಾಹುಲ್ (57) ಮತ್ತು ಸೂರ್ಯಕುಮಾರ್ ಯಾದವ್ (50) ಅರ್ಧಶತಕಗಳ ನೆರವಿನಿಂದ ತಂಡ 7 ವಿಕೆಟ್‌ಗೆ 186 ರನ್ ಗುರಿ ನೀಡಿತ್ತು. ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ 54 ಎಸೆತಗಳಲ್ಲಿ 76 ರನ್‌ಗಳೊಂದಿಗೆ ಫಾರ್ಮ್‌ಗೆ ಮರಳಿದ್ದರು. ಆದರೂ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಗಾಯಾಳು ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡ ಸೇರಿಕೊಂಡಿರುವ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ಉತ್ತಮ ಸ್ಪೆಲ್ ಮಾಡಿದ್ದು ಭಾರತ ಗೆಲುವು ಸಾಧಿಸಲು ನೆರವಾಗಿತ್ತು. ಇದೀಗ ಅಕ್ಬೋಬರ್ 23 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ಜೊತೆ ಸೆಣಸಲಿದ್ದು ನಿರೀಕ್ಷೆ ಹೆಚ್ಚಿದೆ. ಏಷ್ಯಾ ಕಪ್ನ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯೂ ಭಾರತಕ್ಕಿದೆ.
ಇದನ್ನೂ ಓದಿ : ಪಾಕ್ನ ಶಾಹೀನ್ ಅಫ್ರಿದಿ ಡೆಡ್ಲಿ ಯಾರ್ಕರ್ಗೆ ಆಸ್ಪತ್ರೆ ಸೇರಿದ ಆಫ್ಘನ್ ಬ್ಯಾಟರ್: ವಿಡಿಯೋ ನೋಡಿ