ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಶತಕದ ನೆರವಿನಿಂದ ಕೊಹ್ಲಿಪಡೆ ಮೊದಲ ದಿನ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿದೆ.
ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಜೋಡಿ ಮಯಾಂಕ್ ಮತ್ತು ರಾಹುಲ್ ಮೊದಲ ವಿಕೆಟ್ಗೆ 117 ರನ್ಗಳ ಭರ್ಜರಿ ಆರಂಭ ಒದಗಿಸಿಕೊಟ್ಟರು.
ಮಯಾಂಕ್ ಅಗರ್ವಾಲ್ 123 ಎಸೆತಗಳಲ್ಲಿ 9 ಬೌಂಡರಿ ಸಹಿತ 60 ರನ್ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಚೇತೇಶ್ವರ್ ಪೂಜಾರ ಅದೇ ಓವರ್ನ ನಂತರದ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ನಿರಾಸೆ ಮೂಡಿಸಿದರು.
-
Stumps on day one in Centurion 🏏
— ICC (@ICC) December 26, 2021 " class="align-text-top noRightClick twitterSection" data="
A brilliant day for the visitors!
Watch #SAvIND live on https://t.co/CPDKNx77KV (in select regions) 📺#WTC23 pic.twitter.com/NCmalYfSGX
">Stumps on day one in Centurion 🏏
— ICC (@ICC) December 26, 2021
A brilliant day for the visitors!
Watch #SAvIND live on https://t.co/CPDKNx77KV (in select regions) 📺#WTC23 pic.twitter.com/NCmalYfSGXStumps on day one in Centurion 🏏
— ICC (@ICC) December 26, 2021
A brilliant day for the visitors!
Watch #SAvIND live on https://t.co/CPDKNx77KV (in select regions) 📺#WTC23 pic.twitter.com/NCmalYfSGX
ನಂತರ ರಾಹುಲ್ ಜೊತೆಯಾದ ನಾಯಕ ಕೊಹ್ಲಿ 3ನೇ ವಿಕೆಟ್ ಜೊತೆಯಾಟಕ್ಕೆ 82 ರನ್ಗಳನ್ನು ಸೇರಿಸಿದರು. 35 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ಎಂಗಿಡಿ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿದ್ದ ಮಲ್ಡರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ರಾಹುಲ್-ರಹಾನೆ ಅಜೇಯ ಜೊತೆಯಾಟ
ಕೊಹ್ಲಿ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಆಗಮಿಸಿದ ರಹಾನೆ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು. ಅವರು ರಾಹುಲ್ ಜೊತೆಗೂಡಿ 4ನೇ ವಿಕೆಟ್ಗೆ 73 ರನ್ ಸೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಕಳಪೆ ಫಾರ್ಮ್ನಿಂದ ಟೀಕೆಗೆ ಒಳಗಾಗಿರುವ ರಹಾನೆ ಇಂದು 81 ಎಸೆತಗಳಲ್ಲಿ 8 ಆಕರ್ಷಕ ಬೌಂಡರಿಗಳ ಮೂಲಕ ಅಜೇಯ 40 ರನ್ಗಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿದರು.
ರಾಹುಲ್ 7ನೇ ಶತಕ
ಇತ್ತ ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ ರಾಹುಲ್ ಕ್ರೀಸ್ನಲ್ಲಿ ಸೆಟ್ ಆದ ನಂತರ ಹರಿಣಗಳ ಬೌಲರ್ಗಳನ್ನು ಚೆಂಡಾಡಿದರು. 218ನೇ ಎಸೆತದಲ್ಲಿ ತಮ್ಮ 7ನೇ ಶತಕ ಬಾರಿಸಿದ ರಾಹುಲ್ ಒಟ್ಟಾರೆ 248 ಎಸೆತಗಳಲ್ಲಿ ಅಜೇಯ 122 ರನ್ಗಳಿಸಿ ರಹಾನೆ ಜೊತೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಯಾಂಕ್-ರಾಹುಲ್ ದಾಖಲೆ: 11 ವರ್ಷಗಳ ಬಳಿಕ ದ.ಆಫ್ರಿಕಾ ನೆಲದಲ್ಲಿ ದಾಖಲೆ ಶತಕದ ಆರಂಭ