ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ನಿಗದಿತ ಓವರ್ಗಳ ಕ್ರಿಕೆಟ್ ಸರಣಿಗಾಗಿ ಈಗಾಗಲೇ ಲಂಕಾದಲ್ಲಿರುವ ಟೀಂ ಇಂಡಿಯಾಗೆ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದಿರುವ ಅನೇಕ ಯಂಗ್ ಪ್ಲೇಯರ್ಸ್ ಇದೀಗ ಲಂಕಾ ಪ್ರವಾಸದಲ್ಲಿದ್ದು, ಸದ್ಯ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅದ್ಭುತವಾಗಿರುತ್ತದೆ. ಅವರಿಗೆ ಕ್ರಿಕೆಟ್ ಬಗ್ಗೆ ಅಪಾರ ಜ್ಞಾನವಿದ್ದು, ಅದನ್ನ ಹಂಚಿಕೊಳ್ಳುವ ರೀತಿ ಕೂಡ ಅತ್ಯುತ್ತಮವಾಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ. ರಾಹುಲ್ ಸರ್ ಅಡಿಯಲ್ಲಿ ಕ್ರಿಕೆಟ್ ಆಡುವುದು ನಿಜಕ್ಕೂ ವಿಭಿನ್ನವಾದ ಖುಷಿ ನೀಡುತ್ತದೆ. ಈ ಹಿಂದೆ ಅಂಡರ್-19 ತಂಡದ ಕೋಚ್ ಆಗಿ ಅವರು ನಮಗೆ ಸಲಹೆ ನೀಡಿದ್ದಾರೆ. ಈ ವೇಳೆ ಅನೇಕ ರೀತಿಯ ಅನುಭವ ಹಂಚಿಕೊಂಡಿದ್ದು, ಮೈದಾನದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಲು ಸಹಕಾರಿಯಾಗಲಿದೆ ಎಂದು ಶಾ ಹೇಳಿದ್ದಾರೆ.
ರಾಹುಲ್ ಸರ್ ಡ್ರೆಸ್ಸಿಂಗ್ ರೂಂನಲ್ಲಿದ್ದಾಗ ಎಲ್ಲರೂ ಶಿಸ್ತಿನಿಂದ ಇರುತ್ತಾರೆ. ಅವರೊಂದಿಗಿನ ಪ್ರಾಕ್ಟಿಸ್ ಸೆಷನ್ಗೋಸ್ಕರ ನಾನು ನಿರೀಕ್ಷೆ ಮಾಡ್ತಿದ್ದು, ಅನೇಕ ವಿಷಯಗಳ ಕುರಿತು ಮಾತನಾಡಬೇಕಾಗಿದೆ. ಈ ಪ್ರವಾಸದಲ್ಲಿನ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕಾಗಿದ್ದು, ತಂಡಕ್ಕೆ ಕಮ್ಬ್ಯಾಕ್ ಮಾಡುವ ಇರಾದೆ ಇಟ್ಟುಕೊಂಡಿದ್ದೇನೆ. ಭಾರತ ತಂಡವಾಗಲಿ, ರಣಜಿ ತಂಡವಾಗಲಿ, ಕ್ಲಬ್ ಅಥವಾ ನನ್ನ ಶಾಲಾ ತಂಡವಾಗಲಿ, ಅದು ಯಾವಾಗಲೂ ಅಗ್ರ ಸ್ಥಾನದಲ್ಲಿರಬೇಕು ಎಂಬುದು ನನ್ನ ಹಂಬಲ ಎಂದು ಪೃಥ್ವಿ ಶಾ ಹೇಳಿದ್ದಾರೆ.
-
Out of quarantine 👍
— BCCI (@BCCI) July 3, 2021 " class="align-text-top noRightClick twitterSection" data="
Fun activities 😎#TeamIndia made the most out of their day off post quarantine before they headed to the nets in Colombo 👌 👌 - by @28anand & @ameyatilak
Watch the full video to witness how the fun unfolded 🎥 👇 #SLvIND https://t.co/k3BiqHW1VM pic.twitter.com/d7XySHAI2O
">Out of quarantine 👍
— BCCI (@BCCI) July 3, 2021
Fun activities 😎#TeamIndia made the most out of their day off post quarantine before they headed to the nets in Colombo 👌 👌 - by @28anand & @ameyatilak
Watch the full video to witness how the fun unfolded 🎥 👇 #SLvIND https://t.co/k3BiqHW1VM pic.twitter.com/d7XySHAI2OOut of quarantine 👍
— BCCI (@BCCI) July 3, 2021
Fun activities 😎#TeamIndia made the most out of their day off post quarantine before they headed to the nets in Colombo 👌 👌 - by @28anand & @ameyatilak
Watch the full video to witness how the fun unfolded 🎥 👇 #SLvIND https://t.co/k3BiqHW1VM pic.twitter.com/d7XySHAI2O
ಇದನ್ನೂ ಓದಿರಿ: ಇವರ ಗೋಳು ಕೇಳೋರು ಯಾರು? Online Classಗೋಸ್ಕರ ಮರವೇರುವ ವಿದ್ಯಾರ್ಥಿಗಳು!
ಈ ಹಿಂದೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಪೃಥ್ವಿ ಶಾಗೆ ಅವಕಾಶ ನೀಡಲಾಗಿತ್ತು. ಆದರೆ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರನ್ನ ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ನಡೆದ 2021ರ ಐಪಿಎಲ್ನಲ್ಲಿ ಉತ್ತವಾಗಿ ಆಡಿರುವ ಕಾರಣ ಮತ್ತೊಮ್ಮೆ ತಂಡದಲ್ಲಿ ಅವಕಾಶ ನೀಡಲಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಮತ್ತೊಂದು ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಶುಬ್ಮನ್ ಗಿಲ್ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಪೃಥ್ವಿ ಶಾ ಆಯ್ಕೆಯಾಗಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿವೆ.
ಭಾರತ-ಶ್ರೀಲಂಕಾ ನಡುವೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿದ್ದು, ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ನಾಯಕನಾಗಿ ಶಿಖರ್ ಧವನ್ ಆಯ್ಕೆಯಾಗಿದ್ದಾರೆ.