ETV Bharat / sports

ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ರಾವಿಡ್​; ದಿ ವಾಲ್​ಗೆ ಹರಿದುಬಂದ​ ಶುಭಾಶಯಗಳ ಮಹಾಪುರ

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂದು ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿದಂತೆ ಹಲವು ಕ್ರಿಕೆಟ್​ ಪಟುಗಳು ಶುಭಾಶಯ ತಿಳಿಸಿದ್ದಾರೆ.

Rahul Dravid Birthday: Wishes Pour In As Team India Head Coach Turns 49

author img

By

Published : Jan 11, 2022, 2:10 PM IST

Updated : Jan 11, 2022, 4:35 PM IST

ಹೈದರಾಬಾದ್​: ಟೀಂ ಇಂಡಿಯಾದ ಕೋಚ್​ ಆಗಿರುವ ದಿ ವಾಲ್​ ಖ್ಯಾತಿಯ ಕನ್ನಡಿಗ ರಾಹುಲ್‌ ದ್ರಾವಿಡ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತೀಯ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌, ತಂಡದ ನಾಯಕ ವಿಕೆಟ್ ಕೀಪರ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್​​ ಇಂದು 49ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದು, ಅವರ ಜನುಮ ದಿನಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸೇರಿದಂತೆ ಅಪಾರ ಅಭಿಮಾನಿಗಳು ಶುಭಕೋರಿದ್ದಾರೆ.

  • 509 international matches 👍
    24,208 international runs 💪
    48 international centuries 👌

    Here's wishing Rahul Dravid – former India captain & current #TeamIndia Head Coach – a very Happy Birthday. 🎂 👏 pic.twitter.com/qKEUd2WYpZ

    — BCCI (@BCCI) January 11, 2022 " class="align-text-top noRightClick twitterSection" data=" ">

ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್​ ಮಾಡಿದೆ. ಇನ್ನು ಕ್ರಿಕೆಟ್​ ದೇವರೆಂದು ಕರೆಸಿಕೊಳ್ಳುವ ಸಚಿನ್​ ತೆಂಡೂಲ್ಕರ್​ ಜಮ್ಮಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು 3ನೇ ಟೆಸ್ಟ್‌ಗೆ ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಐಸಿಸಿ, ಆರ್​ಸಿಬಿ, ಮುಂಬೈ, ಎಸ್​ಆರ್​ಹೆಚ್​, ಮಾಜಿ ಕ್ರಿಕೆಟ್​ ಪಟುಗಳಾದ ವಾಸಿಮ್​ ಜಾಫರ್​, ದೊಡ್ಡ ಗಣೇಶ್​ ಸೇರಿದಂತೆ ಹಲವರು ದಿ ವಾಲ್​ ಖ್ಯಾತಿಗೆ ಹುಟ್ಟುಹಬ್ಬದ ಶುಭಾಯ ಕೋರಿದ್ದಾರೆ.

ಜನನ: 1973 ಜನವರಿ 11ರಂದು ಮದ್ಯಪ್ರದೇಶ ಇಂದೋರ್​​ನಲ್ಲಿ ಜನಿಸಿದ ದ್ರಾವಿಡ್​ ಪೂರ್ಣ ಕನ್ನಡಿಗರು ಅನ್ನೋದು ನಮ್ಮ ಹೆಮ್ಮೆ. ಬಾಲಕರಾಗಿದ್ದಾಗಲೇ ಕುಟುಂಬದೊಂದಿಗೆ ಬೆಂಗಳೂರಿಗೆ ಆಗಮಿಸಿದ ರಾಹುಲ್, ​ತಮ್ಮ ವೃತ್ತಿಯನ್ನು ಕಂಡುಕೊಂಡಿದ್ದು ಸಹ ಇಲ್ಲಿಯೇ.

ಸಾಧನೆ: 12ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು​ 15 ವರ್ಷದೊಳಗಿನ, 17 ವರ್ಷದೊಳಗಿನ ಮತ್ತು 19 ವರ್ಷದೊಳಗಿನವರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದಾಗಿದೆ. ತಮ್ಮ ಬ್ಯಾಟಿಂಗ್‌ ಪ್ರತಿಭೆಯಿಂದ ಗಮನ ಸೆಳೆದಿದ್ದ ದ್ರಾವಿಡ್‌, ಶಾಲೆ ಮತ್ತು ಕ್ಲಬ್‌ ಹಂತದಲ್ಲಿಯೇ ಅತ್ಯುತ್ತಮ ಕ್ರಿಕೆಟ್​ ಪಟು ಆಗಿದ್ದರು.

ಪದಾರ್ಪಣೆ: 1996ರ ಏಪ್ರಿಲ್‌ 3 ರಂದು ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಪಂದ್ಯದೊಂದಿಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ ಸತತ ಒಂದೂವರೆ ದಶಕ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ ಶ್ರೇಯಸ್ಸು ಇವರದ್ದಾಗಿದೆ. 164 ಟೆಸ್ಟ್‌ ಪಂದ್ಯ, 344 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ ಅವರು ಟೆಸ್ಟ್​ನಲ್ಲಿ 36 ಶತಕ ಹಾಗೂ ಓಡಿಐಯಲ್ಲಿ 12 ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ.

ನಿವೃತ್ತಿ: 7 ಆಗಷ್ಟ್​ 2011ರಲ್ಲಿ ಏಕದಿನ ಕ್ರಿಕೆಟ್​ಗೆ ಮತ್ತು ಅದೇ ವರ್ಷದಲ್ಲೇ ಟಿ-20 ಕ್ರಿಕೆಟ್​​ನಿಂದ ನಿವೃತ್ತಿ ತೆಗೆದುಕೊಂಡ ಅವರು 2012ರಲ್ಲಿ ತಮ್ಮ ನೆಚ್ಚಿನ ಟೆಸ್ಟ್ ಕ್ರಿಕೆಟ್​ಗೂ ಬೈ ಹೇಳಿ ಹೊರ ಬಂದರು. ರವಿ ಶಾಸ್ತ್ರಿ ಅವರ ಅವಧಿ ಮುಗಿದ ಬಳಿಕ ಇದೀಗ ಟೀಂ ಇಂಡಿಯಾದ ಕೋಚ್ ಸ್ಥಾನ ಅಲಂಕರಿಸಿದ ದ್ರಾವಿಡ್, ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಲ್ಲಿದ್ದಾರೆ. ​​

  • Happy birthday, Jam. May you continue to serve Indian cricket with great distinction. I consider myself privileged to have shared the dressing room with you, for both Karnataka and India. Good luck #RahulDravid pic.twitter.com/7Siv8Jv0QA

    — ದೊಡ್ಡ ಗಣೇಶ್ | Dodda Ganesh (@doddaganesha) January 11, 2022 " class="align-text-top noRightClick twitterSection" data=" ">

Last Updated : Jan 11, 2022, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.