ETV Bharat / sports

ಬಲಿಷ್ಠ ಬ್ಯಾಟಿಂಗ್​ ದಕ್ಷಿಣ ಆಫ್ರಿಕಾದ ಗೆಲುವಿನ ಸೂತ್ರ ಆಗಲಿದೆ: ರಾಹುಲ್​ ದ್ರಾವಿಡ್​​ - ದಕ್ಷಿಣ ಆಫ್ರಿಕಾ ಪ್ರವಾಸ

ಸ್ಟಾರ್​ ಸ್ಪೋರ್ಟ್ಸ್​ ಜೊತೆಗೆ ಮಾತನಾಡಿರುವ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​​ ದಕ್ಷಿಣ ಆಫ್ರಿಕಾ ಪ್ರವಾಸ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Rahul Dravid
ರಾಹುಲ್​ ದ್ರಾವಿಡ್​​
author img

By ETV Bharat Karnataka Team

Published : Dec 6, 2023, 7:45 PM IST

ಹೈದರಾಬಾದ್​: ವಿಶ್ವಕಪ್​ ಮುಗಿದ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ಧ ಟಿ20 ನಡೆದ ಸರಣಿಯನ್ನು ಭಾರತ 4-1 ರಿಂದ ಗೆದ್ದುಕೊಂಡಿದೆ. ಈಗ ತವರಿನ ಆಟಗಳನ್ನು ಮುಗಿಸಿರುವ ಮೆನ್​ ಇನ್​ ಬ್ಲೂ ವಿದೇಶ ಪ್ರವಾಸಕ್ಕೆ ಸಿದ್ಧವಾಗಿದೆ. ಡಿಸೆಂಬರ್​ ಮತ್ತು ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೀಮ್​ ಇಂಡಿಯಾ ಮೂರು ಮಾದರಿಯ ಕ್ರಿಕೆಟ್​ ಆಡಲಿದೆ. ಹೀಗಿರುವಾಗ ಮತ್ತೆ ತಂಡದ ಕೋಚ್​ ಆಗಿ ನೇಮಕ ಆಗಿರುವ ರಾಹುಲ್​ ದ್ರಾವಿಡ್​ 'ಹರಿಣಗಳ ನಾಡಿನಲ್ಲಿ ಆಟಗಾರರು ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ನೀಡುವ ಅಗತ್ಯ ಇದೆ' ಎಂದಿದ್ದಾರೆ.

ಡಿಸೆಂಬರ್​ 10 ಅಂದರೆ ಇದೇ ಭಾನುವಾರದಿಂದ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಆರಂಭವಾಗಲಿದೆ. ಹರಿಣಗಳ ನಾಡಿನಲ್ಲಿ ಮೆನ್​ ಇನ್​ ಬ್ಲೂ ಮೂರು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಡರ್ಬನ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಸ್ಟಾರ್​​​ ಸ್ಪೋರ್ಟ್ಸ್​​ ಜೊತೆಗೆ ಮಾತನಾಡಿದ ಕೋಚ್​​ ದ್ರಾವಿಡ್​​, ದ್ರಾವಿಡ್ ದಕ್ಷಿಣ ಆಫ್ರಿಕಾದ ಪಿಚ್‌ಗಳು ಬ್ಯಾಟಿಂಗ್ ಮಾಡಲು ಕಷ್ಟಕರ ಎಂದು ಹೇಳುತ್ತಾರೆ ಮತ್ತು ಬ್ಯಾಟರ್‌ಗಳು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಲು ಆಟದ ಯೋಜನೆಯನ್ನು ರೂಪಿಸುವುದಾಗಿ ಹೇಳಿದ್ದಾರೆ.

ಜವಾಬ್ದಾರಿ ಅರಿತು ಆಡಬೇಕು: "ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡಲು ಸವಾಲಿನ ಸ್ಥಳವಾಗಿದೆ. ಈ ಬಗ್ಗೆ ನಮಗೆ ಅಂಕಿಅಂಶಗಳು ಹೇಳುತ್ತವೆ. ವಿಶೇಷವಾಗಿ ಸೆಂಚುರಿಯನ್ ಮತ್ತು ಜೋಹಾನ್ಸ್‌ಬರ್ಗ್‌ ಬ್ಯಾಟಿಂಗ್ ಮಾಡಲು ಹೆಚ್ಚು ಕಷ್ಟಕರವಾದ ಸ್ಥಳವಾಗಿದೆ. ಅಲ್ಲಿನ ಪಿಚ್​ಗಳು ಕೆಲವೊಮ್ಮೆ ಬ್ಯಾಟರ್​ಗಳಿಗೆ ಸಹಕಾರ ನೀಡುತ್ತವೆ. ಆದರೆ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತವೆ. ಹೀಗಾಗಿ ಪ್ರತಿಯೊಬ್ಬ ಬ್ಯಾಟರ್​ ಪಿಚ್​ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಸರಿಯಾಗಿ ತಿಳಿದು ಅದರ ಬಗ್ಗೆ ಹೆಚ್ಚು ಕೇಂದ್ರೀಕರಿಸಿ ಅಭ್ಯಾಸ ಮಾಡಿಸಲಾಗುತ್ತದೆ. ಹಾಗೇ ತಮ್ಮ ಯೋಜನೆಗಳಿಗೆ ಬದ್ಧರಾಗಿ ಆಡುವಂತೆ ಆಟಗಾರರಿಗೆ ಹೇಳಲಾಗುತ್ತದೆ" ಎಂದು ದ್ರಾವಿಡ್​ ತಿಳಿಸಿದ್ದಾರೆ.

ಮಾನಸಿಕ ದೃಢತೆ ಮುಖ್ಯ: ಆಫ್ರಿಕಾ ಖಂಡದಲ್ಲಿ ದೈಹಿಕ ಗಟ್ಟಿತನಕ್ಕಿಂತ ಹೆಚ್ಚಾಗಿ ಆಡಲು ಅಗತ್ಯವಿರುವ ಮಾನಸಿಕ ದೃಢತೆ ಎಂದು ದ್ರಾವಿಡ್ ವ್ಯಕ್ತಪಡಿಸಿದ್ದಾರೆ. "ಎಲ್ಲರೂ ಒಂದೇ ರೀತಿಯಲ್ಲಿ ಆಡಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಪತ್ರಯೊಬ್ಬರಿಗೂ ತಂಡದಲ್ಲಿ ತಮ್ಮ ಜವಾಬ್ದಾರಿ ಏನು ಎಂದು ತಿಳಿದಿರಬೇಕು, ಮತ್ತು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು. ಅದಕ್ಕೆ ಮೊದಲು ಎಲ್ಲಾ ಆಟಗಾರರು ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಒಮ್ಮೆ ಹೊಂದಿಕೊಂಡರೆ ತಂಡದ ಗೆಲುವು ಸುಲಭವಾಗಿರುತ್ತದೆ" ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಹೆಚ್ಚಿನ ಮಹತ್ವ ಏಕೆ?: ಏಷ್ಯಾಕಪ್​ ನಂತರ ಭಾರತ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಿದೆ. 2024ರ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಚುಟುಕು ಪಂದ್ಯಗಳು ಪ್ರಮುಖವಾಗಿವೆ. ಟೆಸ್ಟ್​ ತಂಡಕ್ಕೆ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಲಿರುವ ಕಾರಣ ಹಿರಿಯರ ಹೊರತಾಗಿ ಏಕದಿನ ತಂಡದ ಪ್ರದರ್ಶನ ವಿದೇಶದಲ್ಲಿ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಇದೆ. ಟೆಸ್ಟ್​​ ಚಾಂಪಿಯನ್​ಶಿಪ್​ನ ಉದ್ದೇಶದಿಂದ ಎರಡು ಪಂದ್ಯ​ಗಳು ಪ್ರಮುಖವಾಗಲಿವೆ. ಹೀಗಾಗಿ ಮೂರು ಮಾದರಿಯ ಪಂದ್ಯಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ರವಿ ಬಿಷ್ಣೋಯ್ ವಿಶ್ವದ ನಂ.1 ಟಿ20 ಬೌಲರ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.