ನವದೆಹಲಿ: ಭಾರತ ತಂಡದ ಉಪನಾಯಕ ಕೆ.ಎಲ್. ರಾಹುಲ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಗಾಯಗೊಂಡಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ಫೆಬ್ರವರಿ 16ರಿಂದ ಮೂರು ಪಂದ್ಯಗಳಟಿ-20 ಸರಣಿ ಸರಣಿ ಆರಂಭವಾಗಲಿದೆ. ಇವರಿಬ್ಬರ ಬದಲಿಗೆ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಮತ್ತು ಆಲ್ರೌಂಡರ್ ದೀಪಕ್ ಹೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಫೆಬ್ರವರಿ 9ರಂದು ಎರಡನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ರಾಹುಲ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರೆ, ಅಕ್ಸರ್ ಕೂಡ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಕ್ಷರ್ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸವನ್ನೂ ತಪ್ಪಿಸಿಕೊಂಡಿದ್ದರಲ್ಲದೇ, ಇತ್ತೀಚೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.
ಗಾಯಕ್ವಾಡ್ ಮತ್ತು ಹೂಡಾ ಇಬ್ಬರೂ ಕೂಡ ಈಗಾಗಲೇ ಕೆರಿಬಿಯನ್ನರ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಗೆ ಆಯ್ಕೆಯಾದ ತಂಡದಲ್ಲಿದ್ದಾರೆ. ಸದ್ಯ ಗಾಯಗೊಂಡಿರುವ ರಾಹುಲ್ ಮತ್ತು ಅಕ್ಷರ್ ಅವರು ಫೆಬ್ರವರಿ 25ರಿಂದ ಶ್ರೀಲಂಕಾ ವಿರುದ್ಧ ಪ್ರಾರಂಭವಾಗುವ ಸರಣಿಗೆ ಲಭ್ಯರಾಗುತ್ತಾರೆಯೇ ಎಂಬ ಅನುಮಾನ ಮೂಡಿದೆ. ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ತಪ್ಪಿಸಿಕೊಂಡಿದ್ದ ರಾಹುಲ್ ಎರಡನೇ ಪಂದ್ಯದಿಂದ ತಂಡಕ್ಕೆ ಮರಳಿದ್ದರು.
ಭಾರತದ ಟಿ-20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ.
ಇದನ್ನೂ ಓದಿ: Ipl: ನಾಳೆಯಿಂದ ಎರಡು ದಿನ ಬೆಂಗಳೂರಿನಲ್ಲಿ ಮೆಗಾ ಹರಾಜು.. ಆಟಗಾರರ ಖರೀದಿಗೆ 10 ತಂಡಗಳ ಫೈಟ್