ETV Bharat / sports

ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿ: ಪೂಜಾರ, ರಹಾನೆ ಸಹಿತ ನಾಲ್ವರನ್ನು ತಂಡದಿಂದ ಕೈಬಿಟ್ಟ ಆಯ್ಕೆ ಸಮಿತಿ - Pujara dropped

ಕಳಪೆ ಫಾರ್ಮ್​ನಲ್ಲಿರುವ ಈ ಇಬ್ಬರು ಬ್ಯಾಟರ್​ ಜೊತೆಗೆ ಹಿರಿಯ ವಿಕೆಟ್​ ಕೀಪರ್​ ವೃದ್ಧಿಮಾನ್ ಸಹಾ, 100 ಟೆಸ್ಟ್​ ಆಡಿರುವ ವೇಗಿ ಇಶಾಂತ್ ಶರ್ಮಾ ಅವರನ್ನೂ ಕೂಡ ಟೆಸ್ಟ್​ ತಂಡದಿಂದ ಡ್ರಾಪ್ ಮಾಡಲಾಗಿದೆ. ಜೊತೆಗೆ ಈ ಆಟಗಾರರಿಗೆ ರಣಜಿ ಟ್ರೋಫಿಯಲ್ಲಿ ಆಡಿ ರನ್​ ಮತ್ತು ವಿಕೆಟ್​ ಪಡೆದು ಫಾರ್ಮ್​ಗೆ ಮರಳುವಂತೆ ಮನವಿ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.

Rahane, Pujara dropped from Test series against SL
ಅಜಿಂಕ್ಯ ರಹಾನೆ , ಚೇತೇಶ್ವರ್ ಪೂಜಾರ
author img

By

Published : Feb 19, 2022, 5:53 PM IST

ನವದೆಹಲಿ: ಹಿರಿಯ ಬ್ಯಾಟರ್​ಗಳಾದ ಚೇತೇಶ್ವರ್​ ಪೂಜಾರ, ಅಜಿಂಕ್ಯ ರಹಾನೆ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ಘೋಷಿಸಿದ 18 ಸದಸ್ಯರ ಟೆಸ್ಟ್​ ತಂಡದಿಂದ ಕೈಬಿಡಲಾಗಿದೆ.

ಕಳಪೆ ಫಾರ್ಮ್​ನಲ್ಲಿರುವ ಈ ಇಬ್ಬರು ಬ್ಯಾಟರ್​ ಜೊತೆಗೆ ಹಿರಿಯ ವಿಕೆಟ್​ ಕೀಪರ್​ ವೃದ್ಧಿಮಾನ್ ಸಹಾ, 100 ಟೆಸ್ಟ್​ ಆಡಿರುವ ವೇಗಿ ಇಶಾಂತ್ ಶರ್ಮಾ ಅವರನ್ನೂ ಕೂಡ ಟೆಸ್ಟ್​ ತಂಡದಿಂದ ಡ್ರಾಪ್ ಮಾಡಲಾಗಿದೆ. ಜೊತೆಗೆ ಈ ಆಟಗಾರರಿಗೆ ರಣಜಿ ಟ್ರೋಫಿಯಲ್ಲಿ ಆಡಿ ರನ್​ ಮತ್ತು ವಿಕೆಟ್​ ಪಡೆದು ಫಾರ್ಮ್​ಗೆ ಮರಳುವಂತೆ ಮನವಿ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಟಿ20 ಸರಣಿ ಫೆಬ್ರವರಿ 24 ರಿಂದ ನಡೆಯಲಿದೆ, ಟೆಸ್ಟ್​ ಸರಣಿ ಮಾರ್ಚ್​ 1ರಿಂದ ಆರಂಭವಾಗಲಿದೆ.

ರೋಹಿತ್ ಶರ್ಮಾ ನಾಯಕ.. ವಿರಾಟ್​ ಕೊಹ್ಲಿಯಿಂದ ತೆರವಾಗಿರುವ ಟೆಸ್ಟ್​ ತಂಡದ ನಾಯಕತ್ವಕ್ಕೆ ಸೀಮಿತ ಓವರ್​ಗಳ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾರನ್ನು ಟೆಸ್ಟ್​ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ. ವೇಗಿ ಜಸ್ಪ್ರೀತ್​ ಬುಮ್ರಾ ಅವರನ್ನು ಟೆಸ್ಟ್​ ಮತ್ತು ಟಿ20 ಎರಡೂ ತಂಡಕ್ಕೂ ಉಪನಾಯಕನಾಗಿ ನೇಮಿಸಲಾಗಿದೆ.

  • Test squad - Rohit Sharma (C), Priyank Panchal, Mayank Agarwal, Virat Kohli, Shreyas Iyer, Hanuma Vihari, Shubhman Gill, Rishabh Pant (wk), KS Bharath, R Jadeja, Jayant Yadav, R Ashwin, Kuldeep Yadav, Sourabh Kumar, Mohd. Siraj, Umesh Yadav, Mohd. Shami, Jasprit Bumrah (VC).

    — BCCI (@BCCI) February 19, 2022 " class="align-text-top noRightClick twitterSection" data=" ">

ರವೀಂದ್ರ ಜಡೇಜಾ ಕಮ್​ಬ್ಯಾಕ್.. ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​, ಸಂಪೂರ್ಣ ದಕ್ಷಿಣ ಅಫ್ರಿಕಾ ಪ್ರವಾಸ ಮತ್ತು ವೆಸ್ಟ್​ ಇಂಡೀಸ್ ವಿರುದ್ಧ ಸೀಮಿತ್ ಓವರ್​ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದ ಅನುಭವಿ ಆಲ್​ರೌಂಡರ್​ ರವೀಂದ್ರ ಜಡೇಜಾ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಟೆಸ್ಟ್​ ಮತ್ತು ಟಿ20 ಎರಡೂ ತಂಡಗಳಲ್ಲೂ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ ಬ್ಯಾಟರ್ ಶುಬ್ಮನ್​ ಗಿಲ್​ ಮತ್ತು ಹನುಮ ವಿಹಾರಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

ಗಾಯಗೊಂಡಿರುವ ಕೆ ಎಲ್ ರಾಹುಲ್​, ವಾಷಿಂಗ್ಟನ್​ ಸುಂದರ್​ ಎರಡೂ ತಂಡಗಳಿಂದ ಹೊರಗುಳಿದಿದ್ದಾರೆ. ರವಿಚಂದ್ರನ್​ ಅಶ್ವಿನ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದು, 2ನೇ ಟೆಸ್ಟ್​ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.

  • T20I squad - Rohit Sharma (C),Ruturaj Gaikwad, Shreyas Iyer, Surya Kumar Yadav, Sanju Samson, Ishan Kishan (wk), Venkatesh Iyer, Deepak Chahar, Deepak Hooda, R Jadeja, Y Chahal, R Bishnoi,Kuldeep Yadav, Mohd. Siraj, Bhuvneshwar Kumar, Harshal Patel, Jasprit Bumrah(VC),Avesh Khan

ಅಶ್ವಿನ್ ಅನುಪಸ್ಥಿತಿಯಲ್ಲಿ ಸ್ಪಿನ್​ ವಿಭಾಗಕ್ಕೆ ಜಡೇಜಾ ಜೊತೆಗೆ ಕುಲ್ದೀಪ್​ ಯಾದವ್​, ಜಯಂತ್​ ಯಾದವ್​ ಮತ್ತು ಉತ್ತರ ಪ್ರದೇಶದ ಸೌರಭ್ ಕುಮಾರ್​ರನ್ನು 18 ಸದಸ್ಯರ ಬಳಗದಲ್ಲಿ ಆಯ್ಕೆ ಮಾಡಲಾಗಿದೆ. ಬುಮ್ರಾ, ಶಮಿ, ಸಿರಾಜ್​, ಉಮೇಶ್ ಯಾದವ್​ ವೇಗದ ಬೌಲರ್​ಗಳಾಗಿ ಆಯ್ಕೆಯಾಗಿದ್ದಾರೆ.

3 ಪಂದ್ಯಗಳ ಟಿ20 ತಂಡಕ್ಕೆ ರಿಷಭ್ ಪಂತ್ ಮತ್ತು ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಿರುವುದರಿಂದ ವಿಕೆಟ್​ ಕೀಪರ್ ಸಂಜು ಸಾಮ್ಸನ್​ಗೆ ಕರೆ ನೀಡಲಾಗಿದೆ.

18 ಸದಸ್ಯರ ಭಾರತ ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭ್ಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್​), ಕೆಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ)

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅವೇಶ್ ಖಾನ್.

ಇದನ್ನೂ ಓದಿ:ಭಾರತ ಟೆಸ್ಟ್​ ತಂಡದ ಖಾಯಂ ನಾಯಕನಾಗಿ ರೋಹಿತ್ ಶರ್ಮಾ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.