ನವದೆಹಲಿ: ಐಸಿಸಿ ಶ್ರೇಯಾಂಕ ಪಟ್ಟಿಯನ್ನು ನವೀಕರಿಸಿದ್ದು, ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಆರ್ ಅಶ್ವಿನ್ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಭಾರತ ಬಾರ್ಡರ್ - ಗವಾಸ್ಕರ್ ಟ್ರೋಫಿ ಆಡುತ್ತಿದ್ದು, ಅಶ್ವಿನ್ ಸ್ಪಿನ್ ಟ್ರ್ಯಾಕ್ನಲ್ಲಿ ಅದ್ಭುತ ಕೈಚಳಕ ಪ್ರದರ್ಶಿಸಿದ್ದಾರೆ. ಮೊದಲೆರಡು ಟೆಸ್ಟ್ನಲ್ಲಿ ಐದು ವಿಕೆಟ್ಗಳ ಗುಚ್ಛವನ್ನು ಪಡೆದ ಅಶ್ವಿನ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ನವೀಕೃತ ಪಟ್ಟಿಯಲ್ಲಿ ಅಶ್ವಿನ್ 5 ಅಂಕ ಕಳೆದುಕೊಂಡಿದ್ದು, ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
-
Nothing to separate between two quality bowlers 👊
— ICC (@ICC) March 8, 2023 " class="align-text-top noRightClick twitterSection" data="
The race for the top spot in the @MRFWorldwide ICC Men's Test Bowling rankings is heating up 🔥
Details 👇https://t.co/yC3mutQeVs
">Nothing to separate between two quality bowlers 👊
— ICC (@ICC) March 8, 2023
The race for the top spot in the @MRFWorldwide ICC Men's Test Bowling rankings is heating up 🔥
Details 👇https://t.co/yC3mutQeVsNothing to separate between two quality bowlers 👊
— ICC (@ICC) March 8, 2023
The race for the top spot in the @MRFWorldwide ICC Men's Test Bowling rankings is heating up 🔥
Details 👇https://t.co/yC3mutQeVs
ಮಾರ್ಚ್ 1 ರಂದು ನವೀಕರಿಸಲಾಗಿದ್ದ ಪಟ್ಟಿಯಲ್ಲಿ 864 ಅಂಕದಿಂದ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದರು. ಈಗ 5 ಅಂಕ ನಷ್ಟವಾಗಿದ್ದು, 859 ರೇಟಿಂಗ್ ಹೊಂದಿದ್ದಾರೆ. ಆಂಡರ್ಸನ್ ಕೂಡ 859 ಅಂಕ ಹೊಂದಿದ್ದಾರೆ. ಆದರೂ ಜೇಮ್ಸ್ ಆಂಡರ್ಸನ್ ಎರಡನೇ ಸ್ಥಾನದಲ್ಲೇ ಇದ್ದಾರೆ. ಅಶ್ವಿನ್ ನಾಳೆಯಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಆಡಲಿದ್ದಾರೆ. ಇಲ್ಲಿನ ಬೌಲಿಂಗ್ ಅವರ ರ್ಯಾಂಕ್ನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಜೇಮ್ಸ್ ಆಂಡರ್ಸನ್ ಕೂಡ ನಾಳೆಯಿಂದ ಬಾಂಗ್ಲಾದ ಎದುರು ಟೆಸ್ಟ್ ಆಡುತ್ತಿದ್ದು, ಇಬ್ಬರಿಗೂ ಸಮಾನ ಅಂಕ ಇರುವುದರಿಂದ ಪಂದ್ಯದ ನಂತರ ಯಾರು ಅಗ್ರಸ್ಥಾನ ಅಂಕರಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.
ಸ್ಪರ್ಧೆಯಿಂದ ಹೊರಗುಳಿದ ಕಮಿನ್ಸ್: ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕನೇ ಟೆಸ್ಟ್ ಅನ್ನು ಸಹ ಆಡುತ್ತಿಲ್ಲ. ಇದರಿಂದ ಅಗ್ರಸ್ಥಾನದ ಪೈಪೋಟಿಯಿಂದ ಹೊರಗುಳಿದಿದ್ದಾರೆ. ಮಾರ್ಚ್ 1 ರಂದು ನವೀಕರಿಸಲಾಗಿದ್ದ ಪಟ್ಟಿಯಲ್ಲಿ 858 ಅಂಕದಿಂದ ಮೂರನೇ ಸ್ಥಾನದಲ್ಲಿದ್ದರು. ಮೂರನೇ ಟೆಸ್ಟ್ನಲ್ಲಿ ಆಡದಿರುವ ಹಿನ್ನೆಲೆ 9 ಅಂಕಗಳ ಕುಸಿತ ಕಂಡಿದ್ದಾರೆ. ಆದರೆ, ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ನಾಲ್ಕನೇ ಸ್ಥಾನದಲ್ಲಿದ್ದ ಜಸ್ಪಿತ್ ಬೂಮ್ರಾ (787) ಎರಡು ಸ್ಥಾನಗಳ ಕುಸಿತ ಕಂಡು 6ಕ್ಕೆ ಇಳಿದಿದ್ದಾರೆ. 807 ಅಂಕದಿಂದ ಕಗಿಸೊ ರಬಾಡಾ ನಾಲ್ಕನೇ ಸ್ಥಾನಕ್ಕೆ ಬಂದರೆ, ಶಾಹೀನ್ ಅಫ್ರಿದಿ 787 ರೇಟಿಂಗ್‌ಗಳೊಂದಿಗೆ ಐದನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಓಲಿ ರಾಬಿನ್ಸನ್ 785 ರೇಟಿಂಗ್‌ನೊಂದಿಗೆ ಏಳು, ರವೀಂದ್ರ ಜಡೇಜಾ 772 ರೇಟಿಂಗ್‌ನೊಂದಿಗೆ ಎಂಟು, ನಾಥನ್ ಲಿಯಾನ್ 769 ರೇಟಿಂಗ್‌ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಕೈಲ್ ಜೇಮಿಸನ್ 757 ರೇಟಿಂಗ್‌ನೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ: ಟೆಸ್ಟ್ ಬ್ಯಾಟರ್‌ಗಳ ಟಾಪ್ 10 ರೊಳಗಿನ ಏಕೈಕ ಬದಲಾವಣೆಯಾಗಿದೆ. ಮೂರನೇ ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಎರಡು ಸ್ಥಾನ ಮೇಲಕ್ಕೆರಿ ಒಂಬತ್ತನೇ ಸ್ಥಾನದಲ್ಲಿದ್ದರೆ. ಅವರನ್ನು ಬಿಟ್ಟರೆ ಬೃಹತ್ ಅಂತರದ ಏರಿಕೆ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟರ್ ಮಾರ್ಕ್ರಾಮ್ ಮತ್ತು ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕದ ಜೆರ್ಮೈನ್ ಬ್ಲಾಕ್‌ವುಡ್ ಕಂಡಿದ್ದಾರೆ. ಕ್ರಮವಾಗಿ ಇಬ್ಬರು 33 ಮತ್ತು 35ನೇ ಸ್ಥಾನದಲ್ಲಿದ್ದಾರೆ.
ಏಕದಿನ ಬ್ಯಾಟಿಂಗ್ ಶ್ರೇಯಾಂಕ: ಇಂಗ್ಲೆಂಡ್ ತಂಡ ಬಾಂಗ್ಲಾದೇಶ ಪ್ರವಾಸ ಮುಗಿಸಿದ ನಂತರ ಏಕದಿನ ಶ್ರೇಯಾಂಕದಲ್ಲಿ ಕೆಲ ಬದಲಾವಣೆಗಳಾಗಿದೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ ಬ್ಯಾಟರ್‌ಗಳ ಪಟ್ಟಿಯಲ್ಲಿ 5 ಸ್ಥಾನಗಳ ಏರಿಕೆ ಕಂಡು 12 ಸ್ಥಾನಕ್ಕೆ ಬಂದಿದ್ದಾರೆ. ನಾಯಕ ಜೋಸ್ ಬಟ್ಲರ್ ನಾಲ್ಕು ಸ್ಥಾನಗಳ ಏರಿಕೆ ಇಂದ 16ನೇ ಸ್ಥಾನ ಮತ್ತು ಅನುಭವಿ ಡೇವಿಡ್ ಮಲಾನ್ 35ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಅಹಮದಾಬಾದ್ನಲ್ಲಿ ಅಂತಿಮ ಟೆಸ್ಟ್: WTC ಫೈನಲ್ ಪ್ರವೇಶಿಸಲು ಭಾರತಕ್ಕೆ ಗೆಲುವು ಅನಿವಾರ್ಯ