ETV Bharat / sports

ಕೊಹ್ಲಿಯಂತಹ ನಾಯಕ ಮತ್ತು ಬ್ಯಾಟರ್ ತಂಡಕ್ಕೆ ಅವಶ್ಯಕತೆಯಿದೆ: ರೋಹಿತ್ ಶರ್ಮಾ - Virat kohli batting and captaincy

ಟಿ-20 ವಿಶ್ವಕಪ್​ ಮುಗಿಯುತ್ತಿದ್ದಂತೆ ಭಾರತ ಟಿ-20 ತಂಡದ ನೇತೃತ್ವಹಿಸಿಕೊಂಡಿರುವ ರೋಹಿತ್ ಶರ್ಮಾರನ್ನು ಬುಧವಾರ ಬಿಸಿಸಿಐ ಆಯ್ಕೆ ಸಮಿತಿ ನಾಯಕನಾಗಿ ಆಯ್ಕೆ ಮಾಡಿದೆ, ವಿರಾಟ್​ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನೂತನ ಕ್ಯಾಪ್ಟನ್​ ಆಗಿ ನೇಮಿಸಿತ್ತು.

Rohit Sharma on Kohli
ವಿರಾಟ್ ಕೊಹ್ಲಿ ರೋಹಿತ್ ಶರ್ಮಾ
author img

By

Published : Dec 9, 2021, 9:07 PM IST

ನವದೆಹಲಿ: ವಿರಾಟ್​ ಕೊಹ್ಲಿಯ ಅತ್ಯುತ್ತಮ ಗುಣಮಟ್ಟದ ಬ್ಯಾಟಿಂಗ್ ಮತ್ತು ಅತ್ಯುತ್ತಮ ಕೌಶಲ್ಯಗಳೊಂದಿಗೆ ಮುನ್ನಡೆಸುವ ಅವರ ನಾಯಕತ್ವ ಭಾರತ ತಂಡಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ನೂತನ ಸೀಮಿತ ಓವರ್​ಗಳ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಟಿ-20 ವಿಶ್ವಕಪ್​ ಮುಗಿಯುತ್ತಿದ್ದಂತೆ ಭಾರತ ಟಿ-20 ತಂಡದ ನೇತೃತ್ವಹಿಸಿಕೊಂಡಿರುವ ರೋಹಿತ್ ಶರ್ಮಾರನ್ನು ಬುಧವಾರ ಬಿಸಿಸಿಐ ಆಯ್ಕೆ ಸಮಿತಿ ವಿರಾಟ್​ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿತ್ತು.

"ಒಬ್ಬ ಬ್ಯಾಟರ್​ ಆಗಿ ಆತನ (ಕೊಹ್ಲಿ) ಅವಶ್ಯಕತೆ ತಂಡಕ್ಕೆ ಅವಶ್ಯಕವಾಗಿದೆ. ಟಿ-20 ಕ್ರಿಕೆಟ್​ನಲ್ಲಿ 50ರ ಸರಾಸರಿ ಹೊಂದುವುದು ತಮಾಷೆಯಲ್ಲ. ನಂಬಲಾಸಾಧ್ಯವಾದದ್ದು. ಅವರು ತಮ್ಮ ಅನುಭವದಿಂದ ಭಾರತ ತಂಡವನ್ನು ಹಲವಾರು ಕಷ್ಟದ ಸಂದರ್ಭದಲ್ಲಿ ಹೊರ ತಂದಿದ್ದಾರೆ" ಎಂದು ಬ್ಯಾಕ್​ಸ್ಟೇಜ್ ವಿತ್ ಬೋರಿಯಾ ಯುಟ್ಯೂಬ್​ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಕೊಹ್ಲಿಯನ್ನು ಕೊಂಡಾಡಿದ್ದಾರೆ.

ನಾಯಕತ್ವದ ಬಗ್ಗೆ ಮಾತನಾಡಿ, ​ನಾಯಕನಾದವನು ತನ್ನ ತಂಡದಷ್ಟೇ ಉತ್ತಮನಾಗಿರಬೇಕು, ಆಗ ಮಾತ್ರ ನಾಯಕನ ಜವಾಬ್ದಾರಿ ಏನೆಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ತಂಡದಲ್ಲಿ ಸರಿಯಾದ ಆಟಗಾರರು ಆಡುತ್ತಿದ್ದಾರೆಯೇ, ತಂಡದ ಉತ್ತಮ ಸಂಯೋಜನೆಯೊಂದಿಗೆ ಆಡುತ್ತಿದೆಯೇ ಎನ್ನುವುದನ್ನು ಅರಿತುಕೊಂಡಿರುವುದರ ಜೊತೆಗೆ, ಖಂಡಿತ ಕೆಲವು ತಂತ್ರಗಾರಿಕೆಯನ್ನು ನಾಯಕನಾದವನು ಹೊಂದಿರಬೇಕಾಗಿರುತ್ತದೆ ಎಂದು ರೋಹಿತ್​ ನಾಯಕತ್ವದ ಬಗ್ಗೆ ವಿವರಿಸಿದ್ದಾರೆ.

ಇದನ್ನು ಓದಿ: ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದೇಕೆ: ಕೊನೆಗೂ ಬಾಯ್ಬಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.