ETV Bharat / sports

ಮುಂದಿನ 2 ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸುವ ಸಾಮರ್ಥ್ಯ ನಮಗಿದೆ : ವಿರಾಟ್​ ಕೊಹ್ಲಿ - Kolkata night riders

ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಪ್ರವೇಶ ಪಡೆಯಲಾಗದಿದ್ದರೂ ನಮ್ಮಲ್ಲಿ ಸಾಕಷ್ಟು ಆತ್ಮವಿಶ್ವಾಸವಿದೆ. ಅಲ್ಲದೆ ನಾವು ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಮತ್ತು ಅದಕ್ಕಾಗಿ ಸಿದ್ಧರಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ..

Royal Challengers Bangalore vs Kolkata night riders
ವಿರಾಟ್ ಕೊಹ್ಲಿ
author img

By

Published : Oct 11, 2021, 5:43 PM IST

ಶಾರ್ಜಾ : ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಎಂಬ ಪದಗಳು​ ಸಾಮಾನ್ಯವಾಗಿ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತವೆ. ಆದರೆ, ನಾವು ಫೈನಲ್​ ಪ್ರವೇಶಿಸಲು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವನ್ನು ತಮ್ಮ ತಂಡ ಹೊಂದಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಆರ್​ಸಿಬಿ 14ನೇ ಆವೃತ್ತಿಯ ಐಪಿಎಲ್​ನಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಸೋಮವಾರ ನಡೆಯಲಿರುವ ಎಲಿಮಿನೇಟರ್​ ಪಂದ್ಯದಲ್ಲಿ 4ನೇ ಸ್ಥಾನ ಪಡೆದಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿರುವ ಆರ್​ಸಿಬಿ ನಾಯಕ ಕೊಹ್ಲಿ, ತಮ್ಮ ತಂಡ ಫೈನಲ್​ ಪ್ರವೇಶಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.

ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಪ್ರವೇಶ ಪಡೆಯಲಾಗದಿದ್ದರೂ ನಮ್ಮಲ್ಲಿ ಸಾಕಷ್ಟು ಆತ್ಮವಿಶ್ವಾಸವಿದೆ. ಅಲ್ಲದೆ ನಾವು ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಮತ್ತು ಅದಕ್ಕಾಗಿ ಸಿದ್ಧರಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.

"ನೀವು ಎಲ್ಲಾ ರೀತಿಯ ಸಾಧ್ಯತೆಗಳಿಗಾಗಿ ಸಿದ್ಧರಾಗಿರಬೇಕು. ನಾನು ಆಲೋಚಿಸುವ ರೀತಿ ಹೇಳುವುದಾದರೆ ಈ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್‌ಗಳು ಈ ಪಂದ್ಯಗಳಿಗೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸಲು ಇರುವ ಪದಗಳಾಗಿವೆ. ನೀವು ಕ್ರಿಕೆಟ್ ಆಡಿದರೆ ಗೆಲ್ಲಬೇಕು, ಇಲ್ಲವೇ ಸೋಲಬೇಕು. ಇಲ್ಲಿ ನಿಮಗೆ ಇವರೆಡೇ ಆಯ್ಕೆಯಾಗಿರುತ್ತವೆ ಎಂದು ನೀವು ಭಾವಿಸಬೇಕು, ಆಗ ನಿಮ್ಮಲ್ಲಿರುವ ನೆಗೆಟಿವ್ ಆಯ್ಕೆಯನ್ನು ಹೊರ ದೂಡಬಹುದು" ಎಂದು ತಿಳಿಸಿದ್ದಾರೆ.

"ನಮ್ಮ ಗಮನ ಏನಿದ್ದರು ಮೈದಾನಕ್ಕೆ ಹೋಗುವುದು, ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ಆಟಗಳನ್ನು ಗೆಲ್ಲುವುದು. ಗೆಲುವು ಏಕೈಕ ಆಯ್ಕೆಯಾದಾಗಿದ್ದಾಗ ಮತ್ತು ಸೋಲು ನಿಮ್ಮ ಒಂದು ಆಯ್ಕೆಯಾಗಲ್ಲ. ಆಗ ನಿಮ್ಮ ಕಾರ್ಯಕ್ಷಮತೆ ಉನ್ನತ ಮಟ್ಟವನ್ನು ತಲುಪುತ್ತದೆ " ಎಂದಿದ್ದಾರೆ.

ಇಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿದರೆ, ನಂತರ ಬುಧವಾರ 2ನೇ ಕ್ವಾಲಿಫೈಯರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ ಪಂದ್ಯಕ್ಕಾಗಿ ಸ್ಪರ್ಧಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಗೆದ್ದ ತಂಡ ಶುಕ್ರವಾರ ಸಿಎಸ್​ಕೆ ವಿರುದ್ಧ ಟ್ರೋಫಿಗಾಗಿ ಕಾದಾಡುತ್ತದೆ.

ಇದನ್ನು ಓದಿ: ಪ್ಲೇ ಆಫ್​ಗೂ ಮುನ್ನ RCBಯಿಂದ ಹೊರಹೋದ ಹಸರಂಗ, ಚಮೀರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.