ETV Bharat / sports

ಆಕ್ಸಿಜನ್, ವೆಂಟಿಲೇಟರ್​ ಸೌಲಭ್ಯಕ್ಕಾಗಿ ₹70 ಲಕ್ಷದೇಣಿಗೆ ನೀಡಿದ ಪಂಜಾಬ್​ ಕಿಂಗ್ಸ್​ - ಇಂಡಿಯನ್ ಪ್ರೀಮಿಯರ್ ಲೀಗ್

ಈ ಹಣದಲ್ಲಿ ಒಂದು ಪೈಸಾ ಕೂಡ ವ್ಯರ್ಥವಾಗದಂತೆ ಬಳಸಿಕೊಳ್ಳುತ್ತೇವೆ ಎಂದು ರೌಂಡ್​ ಟೇಬಲ್ ಇಂಡಿಯಾ ಖಚಿತಪಡಿಸಿದೆ. ನಿಮ್ಮೆಲ್ಲರ ದೇಣಿಗೆ ಕಷ್ಟದಲ್ಲಿರುವ , ಅಗತ್ಯವಿರುವವರಿಗೆ ನೆರವಾಗಲಿದೆ ಎಂದು ದೇಣಿಗೆ ನೀಡಲು ಮನವಿ ಮಾಡಿಕೊಂಡಿದೆ..

ಪಂಜಾಬ್ ಕಿಂಗ್ಸ್ 70 ಲಕ್ಷ ದೇಣಿಗೆ
ಪಂಜಾಬ್ ಕಿಂಗ್ಸ್ 70 ಲಕ್ಷ ದೇಣಿಗೆ
author img

By

Published : May 12, 2021, 8:12 PM IST

ಮುಂಬೈ : ಇಂಡಿಯನ್ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ಬುಧವಾರ ಕೋವಿಡ್​-19 ಹೋರಾಟಕ್ಕೆ ಕೈ ಜೋಡಿಸಿದೆ.

ಕೋವಿಡ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲವನ್ನು ಒದಗಿಸುವ ಸಲುವಾಗಿ ರೌಂಡ್​ ಟೇಬಲ್ ಇಂಡಿಯಾ ಜೊತೆ ಕೈ ಜೋಡಿಸಿ ದೇಣಿಗೆ ಸಂಗ್ರಹ ನಿಧಿ ಅಭಿಯಾನ ಆರಂಭಿಸಿದೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಕೋವಿಡ್ ಹೋರಾಟಕ್ಕೆ ವಿವಿಧ ರೀತಿಯಲ್ಲಿ ಕೈಜೋಡಿಸಿವೆ.

ಇದೀಗ ಪಂಜಾಬ್ ಕಿಂಗ್ಸ್ ಕೂಡ ಮುಂದಕ್ಕೆ ಬಂದಿದ್ದು, ಆರ್​ಟಿಐ ಜೊತೆಗೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ 70 ಲಕ್ಷ ರೂ. ದೇಣಿಗೆ ನೀಡಿದೆ. ಈ ಸಂಗ್ರಹ ನಿಧಿಯನ್ನು ಕೊರೊನಾ ವೈರಸ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸುವ ಆಶಯವನ್ನು ಹೊಂದಿದೆ.

ಅಂದರೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್, ಬೈಪಾಪ್ ಯಂತ್ರಗಳು ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಿಕೊಡುವುದಕ್ಕೆ ಉಪಯೋಗಿಸಿಕೊಳ್ಳಲಾಗುತ್ತದೆ.

ಈ ವೈದ್ಯಕೀಯ ಸಂಪನ್ಮೂಲಗಳನ್ನು ಪ್ರತ್ಯೇಕ ಮನೆಗಳು, ದತ್ತಿ ವೈದ್ಯಕೀಯ ಸಂಸ್ಥೆಗಳು ಮತ್ತು ಇಲ್ಕ್‌ನಂತಹ ಹೆಚ್ಚು ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಬಳಸಲಾಗುತ್ತದೆ.

ಈ ಹಣದಲ್ಲಿ ಒಂದು ಪೈಸಾ ಕೂಡ ವ್ಯರ್ಥವಾಗದಂತೆ ಬಳಸಿಕೊಳ್ಳುತ್ತೇವೆ ಎಂದು ರೌಂಡ್​ ಟೇಬಲ್ ಇಂಡಿಯಾ ಖಚಿತಪಡಿಸಿದೆ. ನಿಮ್ಮೆಲ್ಲರ ದೇಣಿಗೆ ಕಷ್ಟದಲ್ಲಿರುವ , ಅಗತ್ಯವಿರುವವರಿಗೆ ನೆರವಾಗಲಿದೆ ಎಂದು ದೇಣಿಗೆ ನೀಡಲು ಮನವಿ ಮಾಡಿಕೊಂಡಿದೆ.

ಎಸ್​ಆರ್​ಹೆಚ್​ ಮಾಲೀಕ ಸಂಸ್ಥೆಯಾಗಿರುವ ಸನ್​ನೆಟ್​ವರ್ಕ್ 30 ಕೋಟಿ ರೂ ನೀಡಿದರೆ, ರಾಜಸ್ಥಾನ್ ರಾಯಲ್ಸ್ 7.5 ಕೋಟಿ ನೀಡಿತ್ತು. ಸಿಎಸ್​ಕೆ 450 ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ದೇಣಿಗೆಯಾಗಿ ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆಗಾಗಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು.

ಇದನ್ನು ಓದಿ:ಕೋವಿಡ್​ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಸನ್​ರೈಸರ್ಸ್ ಹೈದರಾಬಾದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.