ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 32 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
7ನೇ ಸ್ಥಾನದಲ್ಲಿರುವ ಪಂಜಾಬ್ 6ನೇ ಸ್ಥಾನದಲ್ಲಿರುವ ರಾಯಲ್ಸ್ ಎರಡೂ ತಂಡಗಳಿಗೂ ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಪ್ರಮುಖವಾಗಿದೆ. ಕೆಲವು ಪ್ರಮುಖ ಆಟಗಾರರು ಐಪಿಎಲ್ನಿಂದ ಹೊರ ಹೋಗಿರುವುದರಿಂದ ಎರಡೂ ತಂಡಗಳು ಬದಲೀ ಆಟಗಾರರನ್ನು ತಂಡಕ್ಕೆ ಬರಮಾಡಿಕೊಂಡಿದ್ದು, ಇಂದು ಕಣಕ್ಕಿಳಿಯಲಿದ್ದಾರೆ.
-
Ishan Porel, Adil Rashid and Aiden Markram are all set to make their debut for @PunjabKingsIPL 🙌🙌🙌#PBKSvRR #VIVOIPL pic.twitter.com/FugKDrQpub
— IndianPremierLeague (@IPL) September 21, 2021 " class="align-text-top noRightClick twitterSection" data="
">Ishan Porel, Adil Rashid and Aiden Markram are all set to make their debut for @PunjabKingsIPL 🙌🙌🙌#PBKSvRR #VIVOIPL pic.twitter.com/FugKDrQpub
— IndianPremierLeague (@IPL) September 21, 2021Ishan Porel, Adil Rashid and Aiden Markram are all set to make their debut for @PunjabKingsIPL 🙌🙌🙌#PBKSvRR #VIVOIPL pic.twitter.com/FugKDrQpub
— IndianPremierLeague (@IPL) September 21, 2021
ಪಂಜಾಬ್ ತಂಡದ ಪರ ಯುವ ಬೌಲರ್ ಇಶಾನ್ ಪೊರೆಲ್, ಐಡೆನ್ ಮಾರ್ಕ್ರಮ್, ಆದಿಲ್ ರಶೀದ್ ಐಪಿಎಲ್ಗೆ ಪದಾರ್ಪಣೆ ಮಾಡಲಿದ್ದಾರೆ. ಪೂರನ್ ಮತ್ತು ಅಲೆನ್ ಈ ಪಂದ್ಯವನ್ನಾಡುತ್ತಿರುವ ಮತ್ತಿಬ್ಬರು ವಿದೇಶಿ ಆಟಗಾರರಾಗಿದ್ದಾರೆ. ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ.
-
Evin Lewis is all set to make his debut for the @rajasthanroyals today.#PBKSvRR #VIVOIPL pic.twitter.com/GgaIodKtZz
— IndianPremierLeague (@IPL) September 21, 2021 " class="align-text-top noRightClick twitterSection" data="
">Evin Lewis is all set to make his debut for the @rajasthanroyals today.#PBKSvRR #VIVOIPL pic.twitter.com/GgaIodKtZz
— IndianPremierLeague (@IPL) September 21, 2021Evin Lewis is all set to make his debut for the @rajasthanroyals today.#PBKSvRR #VIVOIPL pic.twitter.com/GgaIodKtZz
— IndianPremierLeague (@IPL) September 21, 2021
ಇನ್ನು ರಾಯಲ್ಸ್ ಪರ ವಿಂಡೀಸ್ ಸ್ಪೋಟಕ ಬ್ಯಾಟ್ಸ್ಮನ್ ಎವಿನ್ ಲೂಯಿಸ್ ಪದಾರ್ಪಣೆ ಮಾಡಲಿದ್ದಾರೆ.
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮ್ರರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಆದಿಲ್ ರಶೀದ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಇಶಾನ್ ಪೊರೆಲ್