ETV Bharat / sports

ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ಗೂ ಮುನ್ನ ಕೌಂಟಿಗಾಗಿ ಜೊತೆಯಾದ ಪೂಜಾರಾ, ಸ್ಮಿತ್‌

author img

By

Published : May 1, 2023, 5:12 PM IST

ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ ಸಸೆಕ್ಸ್‌ ತಂಡದಲ್ಲಿ ಚೇತೇಶ್ವರ ಪೂಜಾರ ಮತ್ತು ಸ್ಟೀವ್​ ಸ್ಮಿತ್​ ಕಾಣಿಸಿಕೊಳ್ಳಲಿದ್ದಾರೆ.

Sussex teammates Pujara to share dressing room with Steve Smith ahead of WTC final
ಒಂದೇ ತಂಡದಲ್ಲಿ ಆಡಲಿರುವ ಪೂಜಾರ, ಸ್ಮಿತ್​: ಸ್ಟೀವ್​ ಜೊತೆಗೆ ಡ್ರೆಸ್ಸಿಂಗ್​ ರೂಮ್​ ಹಂಚಿಕೊಳ್ಳಲಿರುವ ಚೇತೇಶ್ವರ್​

ಭಾರತದ ಸ್ಟಾರ್​ ಟೆಸ್ಟ್​ ಕ್ರಿಕೆಟರ್ ಚೇತೇಶ್ವರ ಪೂಜಾರ ಅವರು ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ 2023ರಲ್ಲಿ ಸಸೆಕ್ಸ್‌ ತಂಡದ ನಾಯಕರಾಗಿ ಮಂದಾಳತ್ವ ವಹಿಸಿಕೊಂಡಿದ್ದಾರೆ. ಉತ್ತಮ ಫಾರ್ಮ್​ನಲ್ಲಿ ಆಡುತ್ತಿರುವ ಪೂಜಾರ ಅಲ್ಲಿ ಎರಡು ಶತಕ ಗಳಿಸಿದ್ದಾರೆ. ಜೂನ್​ 7 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಇಂಗ್ಲೆಂಡ್​ನಲ್ಲಿದ್ದು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು ಆ್ಯಶಸ್​ ಸರಣಿಗೆ ಸಿದ್ಧತೆ ಮಾಡಿಕೊಳ್ಳಲು ಆಸಿಸ್​ನ ಮಾಜಿ ನಾಯಕ ಸ್ಟೀವ್ ಸ್ಮಿತ್ ಸಹ ಕೌಂಟಿ ಚಾಂಪಿಯನ್‌ಶಿಪ್ ಆಡಲು ತಂಡ ಸೇರಿದ್ದಾರೆ. ಚೇತೇಶ್ವರ ಪೂಜಾರ ಮತ್ತು ಸ್ಮಿತ್​ ಒಂದೇ ತಂಡದಲ್ಲಿ ಆಡಲಿದ್ದಾರೆ. ಪೂಜಾರ 3ನೇ ಮತ್ತು ಸ್ಮಿತ್​ ನಾಲ್ಕನೇ ಬ್ಯಾಟರ್​ ಆಗಿ ಸಸೆಕ್ಸ್​ ಪರ ಕಣಕ್ಕಳಿಯುತ್ತಿದ್ದಾರೆ.

ವೋರ್ಸೆಸ್ಟರ್‌ಶೈರ್(ಮೇ 4-7), ಲೀಸೆಸ್ಟರ್‌ಶೈರ್ (ಮೇ 11-14) ಮತ್ತು ಗ್ಲಾಮೊರ್ಗಾನ್ ವಿರುದ್ಧ (ಮೇ 18-21) ಸ್ಮಿತ್​ ಸಸೆಕ್ಸ್‌ಗಾಗಿ ಆಡುತ್ತಿದ್ದಾರೆ. ಅವರು ಇಂಗ್ಲೆಂಡ್​ ಪಿಚ್​ನಲ್ಲಿ ಜೂನ್​ ತಿಂಗಳಿನಲ್ಲಿ ಆಸ್ಟ್ರೇಲಿಯಾಕ್ಕಾಗಿ ಮಹತ್ವದ ಪಂದ್ಯಗಳನ್ನು ಆಡಲಿದ್ದಾರೆ. ಜೂನ್​ 7 ರಿಂದ 11 ವರೆಗೆ ವಿಶ್ವ ಟೆಸ್ಟ್​ ಚಾಂಪಿಯನ್ಸ್​ಶಿಪ್ ನಡೆದರೆ, ಜೂನ್​ 16 ರಿಂದ ಜುಲೈ 31 ವರೆಗೆ 5 ಆ್ಯಶಸ್​ ಟೆಸ್ಟ್​​ ಪಂದ್ಯಗಳು ನಡೆಯಲಿವೆ. ​

ಇದರಿಂದ ಇಬ್ಬರು ಆಟಗಾರರು ಒಂದೇ ಡ್ರೆಸ್ಸಿಂಗ್​ ರೂಮ್‌ ಹಂಚಿಕೊಳ್ಳಲಿದ್ದು, ಈ ಬಗ್ಗೆ ಚೇತೇಶ್ವರ ಪೂಜಾರ ಗ್ಲೌಸೆಸ್ಟರ್‌ಶೈರ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ್ದಾರೆ. "ಹೆಚ್ಚಿನ ಸಮಯ ನಾವು ಪರಸ್ಪರರ ವಿರುದ್ಧ ಆಡಿದ್ದೇವೆ. ಎಂದಿಗೂ ಒಂದೇ ತಂಡದಲ್ಲಿ ಆಡಿಲ್ಲ. ಆದ್ದರಿಂದ ಅವರನ್ನು ಒಂದೇ ತಂಡದಲ್ಲಿ ಹೊಂದಲು ಉತ್ಸುಕನಾಗಿದ್ದೇನೆ. ಅವರಿಂದ ಕಲಿಯಲು ಬಯಸುತ್ತೇನೆ ಮತ್ತು ಅವರನ್ನು ಸಾಧ್ಯವಾದಷ್ಟು ತಿಳಿದುಕೊಳ್ಳಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.

"ನಾವು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಆಡುತ್ತೇವೆ, ಆದ್ದರಿಂದ ಇದು ಮಿಶ್ರ ಭಾವನೆಗಳಾಗಿರುತ್ತದೆ. ಮೈದಾನದಲ್ಲಿ ನಾವು ಯಾವಾಗಲೂ ಉತ್ತಮ ಎದುರಾಳಿಗಳಾಗಿದ್ದೆವು. ಆದರೆ ಮೈದಾನದ ಹೊರಗೆ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ಸ್ಮಿತ್​ ಅವರನ್ನು ತಂಡದಲ್ಲಿ ನೋಡಲು ತುಂಬಾ ಸಂತೋಷವಾಗುತ್ತದೆ" ಎಂದು ಪೂಜಾರಾ ಹೇಳಿಕೊಂಡಿದ್ದಾರೆ.

"ಕ್ರಿಕೆಟ್​ನಲ್ಲಿ ಉತ್ತಮ ಅನುಭವವನ್ನು ಸ್ಮಿತ್ ಹೊಂದಿದ್ದಾರೆ. ಅವರಿಂದ ಕೆಲ ಅಂಶಗಳನ್ನು ತಂಡದಲ್ಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳಲು ಎದುರು ನೋಡುತ್ತಿರುತ್ತೇನೆ. ಆಸ್ಟ್ರೇಲಿಯಾಗಾಗಿ ಬಹಳಷ್ಟು ರನ್​ ಗಳಿಸಿ ಅನುಭವ ಇರುವ ಅವರು ಕ್ರೀಸ್​ನಲ್ಲಿ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ತಿಳಿಯಲು ಕಾತುರನಾಗಿದ್ದೇನೆ" ಎಂದಿದ್ದಾರೆ.

ಪ್ರಸ್ತುತ ಈ ಋತುವಿನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ ಪಂದ್ಯದಲ್ಲಿ ಪುಜಾರ ಬೆಸ್ಟ್​ ಫಾರ್ಮ್ ಪ್ರದರ್ಶಿಸಿದ್ದಾರೆ. ಅವರು ಎರಡು ಶತಕಗಳೊಂದಿಗೆ ಐದು ಇನ್ನಿಂಗ್ಸ್‌ಗಳಿಂದ 332 ರನ್‌ ದಾಖಲಿಸಿದ್ದು, ಎರಡನೇ ಡಿವಿಷನ್ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.