ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 2ನೇ ದಿನ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಚೆನ್ನಾಗಿ ಸ್ಟ್ರೈಕ್ ರೊಟೇಟ್ ಮಾಡಬಹುದಿತ್ತು ಎಂದು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅಭಿಪ್ರಾಯ ಪಟ್ಟಿದ್ದಾರೆ.
ಪೂಜಾರ ಅವರ ಸ್ಟ್ರೈಕ್ ರೇಟ್ ಕುರಿತು ಕೆಲವು ಸಮಯದಿಂದ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಇದೀಗ WTC ಫೈನಲ್ನಲ್ಲೂ ತಮ್ಮ ಅಂಕಿಅಂಶಗಳನ್ನು ಉತ್ತಮಗೊಳಿಸುವ ಪ್ರಯತ್ನ ಮಾಡುವಲ್ಲಿ ವಿಫಲರಾದರು. ಅವರು 2ನೇ ದಿನ 54 ಎಸೆತಗಳಲ್ಲಿ ಕೇವಲ 8 ರನ್ಗಳಿಸಿದ್ದರು. ಅಲ್ಲದೆ ಖಾತೆ ತೆರೆಯಲು ಕೂಡ 36ಕ್ಕೂ ಎಸೆತಗಳನ್ನ ಎದುರಿಸಿದ್ದರು.
ನನಗೆ ಪೂಜಾರ ತಮ್ಮ ಇನ್ನಿಂಗ್ಸ್ನ ಕಡೆ ಖಂಡಿತ ತಿರುಗಿ ನೋಡಲಿದ್ದಾರೆ ಎಂಬ ಭರವಸೆಯಿದೆ ಮತ್ತು ವಿಶ್ಲೇಷಣೆಯ ಮಾದರಿಯ ವಿಡಿಯೋವನ್ನು ನೋಡಿದಾಗ, ತಾವೆದುರಿಸಿದ ಅಷ್ಟು ಎಸೆತಗಳಲ್ಲಿ ಕೆಲವೊಂದು ಎಸೆತಗಳಲ್ಲಿ ಉತ್ತಮವಾಗಿ ಸ್ಟ್ರೈಕ್ ರೊಟೇಟ್ ಮಾಡಬಹುದಿತ್ತು ಎಂಬುದನ್ನು ಅವರು ಕಂಡುಕೊಳ್ಳಲಿದ್ದಾರೆ ಎಂದು ಇಎಸ್ಪಿನ್ಗೆ ಹೇಳಿದ್ದಾರೆ.
ನಾನು ಅವರ ಇನ್ನಿಂಗ್ಸ್ ನೋಡಿದಾದ, ಅವರು 0,0,0,0, 4,4,0,0,0,0 ಮತ್ತು ವಿಕೆಟ್ ಇತ್ತು. ಖಂಡಿತ ಆ 50 ಎಸೆತಗಳಲ್ಲಿ ಅವರು ಸ್ಟ್ರೈಕ್ ಬದಲಾಯಿಸಬಹುದಿತ್ತು, ಜೊತೆಗೆ ತಂಡಕ್ಕೆ ಮತ್ತು ತಮಗೆ ಒಂದಷ್ಟು ರನ್ಗಳನ್ನು ಸೇರಿಸಿಕೊಳ್ಳಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ 3ನೇ ದಿನವಾದ ಭಾನುವಾರ 217 ರನ್ಗಳಿಗೆ ಸರ್ವಪತನಗೊಂಡಿತು. ಶನಿವಾರ 146ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಕೇವಲ 71 ರನ್ಗಳಿಸಿ ಆಲೌಟ್ ಆಯಿತು.
ಇದನ್ನು ಓದಿ: ಸಚಿನ್ ತೆಂಡೂಲ್ಕರ್ಗೆ 21ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಗೌರವ