ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ 2022ರ ಮಹಿಳಾ ಏಕದಿನ ವಿಶ್ವಕಪ್ ವಿಜೇತ ತಂಡದ ಬಹುಮಾನ ಮೊತ್ತವನ್ನು 1.32 ಮಿಲಿಯನ್ ಡಾಲರ್( ಸುಮಾರು 9.9 ಕೋಟಿ ರೂ) ಹಿಂದಿನ 2017ರ ಆವೃತ್ತಿಗಿಂತ ದ್ವಿಗುಣಗೊಳಿಸಿದೆ.
ಕಿವೀಸ್ನ 6 ಸ್ಥಳಗಳಲ್ಲಿ ನಡೆಯಲಿರುವ ಟೂರ್ನಮೆಂಟ್ನ ಒಟ್ಟಾರೆ ಬಹುಮಾನ ಮೊತ್ತವನ್ನು ಕೂಡ ಶೇ.75ರಷ್ಟನ್ನು ಹೆಚ್ಚಿಸಿದೆ. ಐಸಿಸಿ ಪ್ರಕಾರ 8 ತಂಡಗಳು ಒಟ್ಟು 3.5 (ಸುಮಾರು 24 ಕೋಟಿ) ಮಿಲಿಯನ್ ಡಾಲರ್ ಮೊತ್ತವನ್ನು ಹಂಚಿಕೊಳ್ಳಲಿದೆ. 2017ರ ರನ್ನರ್ ಅಪ್ ಭಾರತ ತಂಡ 2.7 ಮಿಲಿಯರ್ ಯುಎಸ್ ಡಾಲರ್(ಸುಮಾರು 2 ಕೋಟಿರೂ) ಪಡೆದುಕೊಂಡಿತ್ತು. ಆದರೆ, ಬಾರಿ ರನ್ನರ್ ಅಪ್ ತಂಡ 6 ಲಕ್ಷ ಡಾಲರ್(ಸುಮಾರು 4.5 ಕೋಟಿ ರೂ) ಪಡೆದುಕೊಳ್ಳಲಿದೆ.
ಸೆಮಿಫೈನಲ್ ಸೋಲು ಕಾಣುವ ಎರಡು ತಂಡಗಳು 3,00,000 USD(ಸುಮಾರು 2.25 ಕೋಟಿ ರೂ) ಪಡೆದುಕೊಂಡರೆ, ನಾಕೌಟ್ ಪ್ರವೇಶಿಸಲು ವಿಫಲವಾಗುವ 4 ತಂಡಗಳೂ ತಲಾ 70,000 USD(ಸುಮಾರು 52 ಲಕ್ಷ ರೂ) ಪಡೆದುಕೊಳ್ಳಲಿವೆ. ಕಳೆದ ಬಾರಿ ಗುಂಪು ಹಂತದ ತಂಡಗಳು ತಲಾ 30,000 USD ಪಡೆದುಕೊಂಡಿದ್ದವು.
ಗುಂಪು ಹಂತದಲ್ಲಿ ಪ್ರತಿಯೊಂದು ಗೆಲುವು ಪಡೆಯುವ ತಂಡ ತಲಾ 25,000 USD(18.8 ಲಕ್ಷ ರೂ) ಪಡೆಯಲಿವೆ. ಇದಕ್ಕಾಗಿ 70,000USD(52 ಲಕ್ಷ ರೂ)ಯನ್ನು ಮೀಸಲಿಡಲಾಗಿದೆ. ಮಹಿಳಾ ವಿಶ್ವಕಪ್ನಲ್ಲಿ ಸತತ 2ನೇ ಬಾರಿ ಬಹುಮಾನ ಮೊತ್ತವನ್ನು ಏರಿಕೆ ಮಾಡಲಾಗಿದೆ.
2013ರಲ್ಲಿ 2 ಲಕ್ಷ ಡಾಲರ್ ಇದ್ದ ಬಹುಮಾನ ಮೊತ್ತವನ್ನು 10 ಪಟ್ಟು ಅಂದರೆ, 20 ಲಕ್ಷ ಡಾಲರ್ಗೆ ಏರಿಕೆ ಮಾಡಲಾಗಿತ್ತು. 2017ರಲ್ಲಿ ಭಾರತ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ವನಿತಾ ತಂಡ 6,60,000 ಡಾಲರ್ ಮೊತ್ತವನ್ನು ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ:ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!