ETV Bharat / sports

ಬದಲೀ ಆಟಗಾರರಾಗಿ ಇಂಗ್ಲೆಂಡ್​ಗೆ ಪ್ರವಾಸ ಬೆಳೆಸಲಿದ್ದಾರೆ ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​ - ಸೂರ್ಯಕುಮಾರ್ ಯಾದವ್

ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಆವೇಶ್ ಖಾನ್ ಈಗಾಗಲೇ ಗಾಯಕ್ಕೊಳಗಾಗಿದ್ದು, ಇಂಗ್ಲೆಂಡ್ ವಿರುದ್ದದ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಖಚಿತವಾಗಿದೆ. ಗಿಲ್​ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.

Prithvi Shaw, Suryakumar
ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​
author img

By

Published : Jul 24, 2021, 5:56 PM IST

ಮುಂಬೈ: ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಮೂವರು ಯುವ ಆಟಗಾರರು ಗಾಯದ ಕಾರಣ ತಂಡದಿಂದ ಹೊರಬಿದ್ದ ಬೆನ್ನಲ್ಲೇ ದಿಢೀರ್ ಬೆಳವಣಿಗೆಯ ಪ್ರಕಾರ ಬಿಸಿಸಿಐ ಶ್ರೀಲಂಕಾದಲ್ಲಿರುವ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್​ ಜೊತೆಗೆ ಹರಿಯಾಣ ಆಲ್​ರೌಂಡರ್​ ಜಯಂತ್ ಯಾದವ್​ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಆವೇಶ್ ಖಾನ್ ಈಗಾಗಲೇ ಗಾಯಕ್ಕೊಳಗಾಗಿದ್ದು, ಇಂಗ್ಲೆಂಡ್ ವಿರುದ್ದದ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಖಚಿತವಾಗಿದೆ. ಗಿಲ್​ ಈಗಾಲೇ ಭಾರತಕ್ಕೆ ಮರಳಿದ್ದಾರೆ.

ಶುಬ್ಮನ್ ಗಿಲ್​ ಬದಲಿ ಆಟಗಾರನಾಗಿ ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತು ಸುಂದರ್​ ಜಾಗಕ್ಕೆ ಆಫ್‌ ಸ್ಪಿನ್ನರ್ ಆಲ್‌ರೌಂಡರ್ ಜಯಂತ್ ಯಾದವ್ ಆಯ್ಕೆಯಾಗಿದ್ದಾರೆ. ಇನ್ನು ಉಪನಾಯಕ ಅಜಿಂಕ್ಯ ರಹಾನೆ ಕೂಡ ಸಣ್ಣ ಪ್ರಮಾಣದ ಗಾಯಕ್ಕೆ ತುತ್ತಾಗಿರುವುದರಿಂದ ಅವರಿಗೆ ಬ್ಯಾಕ್​ ಅಪ್ ಆಗಿ ಸೂರ್ಯಕುಮಾರ್ ಯಾದವ್​ರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಶ್ರೀಲಂಕಾದಲ್ಲಿರುವ ಈ ಆಟಗಾರರು ಯಾವಾಗ ಇಂಗ್ಲೆಂಡ್‌ಗೆ ತೆರಳಲಿದ್ದಾರೆಯೇ ಇನ್ನು ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾ ಮತ್ತು ಜಯಂತ್ ಯಾದವ್​ ಈಗಾಗಲೆ ಟೆಸ್ಟ್​ ಕ್ರಿಕೆಟ್ ಆಡಿದ ಅನುಭವವಿದೆ. ಸೂರ್ಯಕುಮಾರ್ ಯಾದವ್​ಗೆ​ ಇದೇ ಮೊದಲ ಟೆಸ್ಟ್​ ಕರೆಯಾಗಿದೆ.

ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಜುಲೈ 25ರಿಂದ ಆರಂಭವಾಗಲಿದೆ, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆಗಸ್ಟ್​ 4 ರಿಂದ ಪ್ರಾರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.