ETV Bharat / sports

ಪೃಥ್ವಿ ಶಾ ಅರ್ಧಶತಕ : ಹೈದರಾಬಾದ್​ಗೆ 160 ರನ್​ಗಳ ಗುರಿ ನೀಡಿದ ಕ್ಯಾಪಿಟಲ್ಸ್​ - ಇಂದಿನ ಎಸ್‌ಆರ್‌ಹೆಚ್ ತಂಡ

ಪಂತ್ 27 ಎಸೆತಗಳಲ್ಲಿ 37 ರನ್​ಗಳಿಸಿದರೆ, ಸ್ಟೀವನ್ ಸ್ಮಿತ್ 24 ಎಸೆತಗನ್ನು 3 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ ಅಜೇಯ 34 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು..

ಹೈದರಾಬಾದ್​ಗೆ 160 ರನ್​ಗಳ ಗುರಿ ನೀಡಿದ ಕ್ಯಾಪಿಟಲ್ಸ್​

author img

By

Published : Apr 25, 2021, 9:30 PM IST

ಚೆನ್ನೈ : ಪೃಥ್ವಿ ಶಾ ಸಿಡಿಸಿದ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್​ ಗಳಿಸಿದೆ.

ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್​ಗೆ 81 ರನ್​ಗಳ ಜೊತೆಯಾಟ ನೀಡಿದರು.

ಪವರ್​ ಪ್ಲೇನಲ್ಲೇ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಈ ಜೋಡಿ 51 ರನ್​ ಸೂರೆಗೈದಿತು. ಆದರೆ, 26 ಎಸೆತಗಳಲ್ಲಿ 28 ರನ್​ಗಳಿಸಿದ್ದ ಧವನ್​ರನ್ನು ರಶೀದ್ ಖಾನ್​ ಔಟ್​ ಮಾಡುವ ಮೂಲಕ ಹೈದರಾಬಾದ್​ಗೆ ಮೊದಲ ಬ್ರೇಕ್ ತಂದು ಕೊಟ್ಟರು.

39 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್​ನೊಂದಿಗೆ 53 ರನ್​ಗಳಿಸಿದ್ದ ಪೃಥ್ವಿ ಶಾ, ಇಲ್ಲದ ರನ್​ ಕದಿಯಲು ಹೋಗಿ ರನ್​ಔಟ್ ಆಗಿ ನಿರಾಶೆ ಅನುಭವಿಸಿದರು.

ನಂತರರ ಒಂದಾದ ನಾಯಕ ಪಂತ್ ಮತ್ತು ಅನುಭವಿ ಸ್ಮಿತ್​ 3ನೇ ವಿಕೆಟ್​ಗೆ 58 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಪಂತ್ 27 ಎಸೆತಗಳಲ್ಲಿ 37 ರನ್​ಗಳಿಸಿದರೆ, ಸ್ಟೀವನ್ ಸ್ಮಿತ್ 24 ಎಸೆತಗನ್ನು 3 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ ಅಜೇಯ 34 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಹೈದರಾಬಾದ್ ಪರ ಸಿದ್ಧಾರ್ಥ್ ಕೌಲ್ 31 ರನ್​ ನೀಡಿ 2 ವಿಕೆಟ್ ಪಡೆದರೆ, ರಶೀದ್​ ಖಾನ್ 31 ರನ್​ ನೀಡಿ ಒಂದು ವಿಕೆಟ್​ ಪಡೆದರು. ಕನ್ನಡಿಗ ಸುಚೀತ್ 4 ಓವರ್​ಗಳಲ್ಲಿ ಕೇವಲ 21 ರನ್​ ಬಿಟ್ಟುಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.