ETV Bharat / sports

ಯೋ ಯೋ ಟೆಸ್ಟ್​​ನಲ್ಲಿ ಫೇಲ್​ ಆದ್ರೂ ಐಪಿಎಲ್‌ನಲ್ಲಿ ಆಡಲು ಅನುಮತಿ ಪಡೆದ ಪೃಥ್ವಿ ಶಾ - ಪೃಥ್ವಿ ಶಾ ಯೋ ಯೋ ಟೆಸ್ಟ್​ ಫೇಲ್​

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಭಾಗಿಯಾಗುವ ಕೆಲವು ಭಾರತೀಯ ಕ್ರಿಕೆಟಿಗರಿಗೆ ಯೋ ಯೋ ಟೆಸ್ಟ್​ ನೀಡುವಂತೆ ಬಿಸಿಸಿಐ ಸೂಚನೆ ನೀಡಿದೆ. ಇದರಲ್ಲಿ ಭಾಗಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಫೇಲ್ ಆಗಿದ್ದಾರೆ.

Prithvi Shaw Failed Yo-Yo Test
Prithvi Shaw Failed Yo-Yo Test
author img

By

Published : Mar 18, 2022, 2:57 PM IST

ಬೆಂಗಳೂರು: ಟೀಂ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ ಯೋ ಟೆಸ್ಟ್​​ನಲ್ಲಿ ಅನುತ್ತೀರ್ಣರಾಗಿದ್ದಾರೆ. ಇದರ ಹೊರತಾಗಿಯೂ ಕೂಡ 2022ನೇ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಭಾಗಿಯಾಗಲು ಅವರಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಕಣಕ್ಕಿಳಿಯಲಿದ್ದು, ಬೆಂಗಳೂರಿನಲ್ಲಿ ಯೋ ಯೋ ಪರೀಕ್ಷೆಗೆ ಹಾಜರಾಗಿದ್ದರು. ಈ ವೇಳೆ ಕ್ರಿಕೆಟಿಗ 15 ಪಾಯಿಂಟ್​​ಗಳಿಗಿಂತಲೂ ಕಡಿಮೆ ಅಂಕ ಗಳಿಕೆ ಮಾಡಿದ್ದಾರೆ. ಯೋ ಯೋ ಟೆಸ್ಟ್​​ ಪಾಸ್ ಮಾಡಲು 16.5ಕ್ಕಿಂತಲೂ ಅಧಿಕ ಅಂಕ ಪಡೆದುಕೊಳ್ಳುವುದು ಅವಶ್ಯವಾಗಿದೆ.

ತಾವು ಯೋ ಯೋ ಟೆಸ್ಟ್​ನಲ್ಲಿ ಫೇಲ್​ ಆಗಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹರಿಬಿಟ್ಟಿದ್ದಾರೆ. 'ನನ್ನ ಪರಿಸ್ಥಿತಿ ಬಗ್ಗೆ ನಿಮಗೆ ತಿಳಿದಿಲ್ಲದಿದ್ದಾಗ ದಯವಿಟ್ಟು ನನ್ನನ್ನು ನಿರ್ಣಯಿಸಬೇಡಿ. ಹಾಗೆ ಮಾಡಿದಲ್ಲಿ ಅದು ನಿಮ್ಮ ಕರ್ಮ' ಎಂದು ಗರಂ ಆಗಿದ್ದಾರೆ.

Prithvi Shaw Failed Yo-Yo Test
ಇನ್​​ಸ್ಟಾಗ್ರಾಂನಲ್ಲಿ ಈ ರೀತಿಯಾಗಿ ಬರೆದುಕೊಂಡ ಪೃಥ್ವಿ ಶಾ

ದೇಶಿ ಕ್ರಿಕೆಟ್​ನಲ್ಲಿ ಭಾಗಿಯಾಗುತ್ತಿರುವ ಪೃಥ್ವಿ ಶಾ ಉತ್ತಮ ರನ್​ಗಳಿಕೆ ಮಾಡುತ್ತಿದ್ದಾರೆ. ಆದರೆ, ಫಿಟ್ನೆಸ್​​ ಕಾರಣದಿಂದಾಗಿ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಈ ಹಿಂದೆ 2021ರ ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಪೃಥ್ವಿ ಶಾ ಕೊನೆಯದಾಗಿ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಐಪಿಎಲ್‌ ಮೆಗಾ ಹರಾಜಿಗೂ ಮೊದಲು ಪೃಥ್ವಿ ಶಾ ಅವರನ್ನು ಡೆಲ್ಲಿ ಫ್ರಾಂಚೈಸಿ 8 ಕೋಟಿ ರೂ.ಗಳ ಮೊತ್ತ ನೀಡಿ ತನ್ನಲ್ಲಿ ಉಳಿಸಿಕೊಂಡಿತ್ತು. ಈ ಸಲ ಅವರು ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಈ ತಂಡದ ಕ್ಯಾಪ್ಟನ್ ಆಗಿ ರಿಷಭ್ ಪಂತ್ ಇದ್ದಾರೆ.

ಇದನ್ನೂ ಓದಿ: ವಿಂಡೀಸ್‌ ವಿರುದ್ಧ ಬೆನ್‌ ಸ್ಟೋಕ್ಸ್‌ ಸ್ಫೋಟಕ ಶತಕ ; 507 ರನ್‌ ಗಳಿಸಿ ಡಿಕ್ಲೇರ್‌ ಘೋಷಣೆ

ಗುಜರಾತ್​ ಟೈಟನ್ಸ್​ ತಂಡ ಮುನ್ನಡೆಸುತ್ತಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಯೋ ಯೋ ಟೆಸ್ಟ್​ ಪಾಸ್​ ಮಾಡಿದ್ದು, ಐಪಿಎಲ್​ನಲ್ಲಿ ಮಿಂಚಲು ಸಜ್ಜುಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.