ಕೋಲ್ಕತ್ತಾ: ನಾಯಕ ರೋಹಿತ್ ಶರ್ಮಾ(captain Rohit Sharma) ನ್ಯೂಜಿಲ್ಯಾಂಡ್ ವಿರುದ್ಧ ಕ್ಲೀನ್ ಸ್ವೀಪ್(clean sweep against New Zealand) ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ತಮ್ಮ ಆಕ್ರಮಣಕಾರಿ ವಿಧಾನದಲ್ಲೇ ಮುಂದುವರಿಯುವ ಆಲೋಚನೆಯಲ್ಲಿದ್ದಾರೆ. ಆದರೂ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯ್ದಿರುವ ಕೆಲವು ಯುವ ಕ್ರಿಕೆಟಿಗರಿಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
ಹಲವಾರು ಖಾಸಗಿ ಲೀಗ್‌ಗಳಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ದ್ವಿಪಕ್ಷೀಯ ಟಿ20 ಸರಣಿಗಳು(T20I series) ತಮ್ಮ ಚಾರ್ಮ್ ಕಳೆದುಕೊಳ್ಳುತ್ತಿವೆ. ಆದರೂ ವಿಶ್ವಕಪ್ನಲ್ಲಿ ದಾರುಣ ಸೋಲು ಕಂಡಿದ್ದ ಭಾರತ ತಂಡಕ್ಕೆ ಈ ಸರಣಿ ಗೆಲುವು ಗಾಯಕ್ಕೆ ಮುಲಾಮು ಹಚ್ಚಿದಂತಾಗುತ್ತದೆ.
ನ್ಯೂಜಿಲ್ಯಾಂಡ್ ಪಾಲಿಗೆ ಈ ಸರಣಿ ಅತ್ಯಂತ ಕಠಿಣದ್ದಾಗಿದೆ. ಏಕೆಂದರೆ ಅವರು 2 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ 7 ಪಂದ್ಯಗಳನ್ನಾಡಿದಂತಾಗಿದೆ. ಇದರಿಂದ ಕೆಲವು ಆಟಗಾರರು ಅನಿವಾರ್ಯವಾಗಿ ವಿಶ್ರಾಂತಿ ಪಡೆದುಕೊಂಡಿದ್ದು, ಭಾರತದೆದುರು ಕೆಲವು ಸ್ಟಾರ್ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಕಾರಣದಿಂದ ಈಗಾಗಲೇ 2-0ಯಲ್ಲಿ ಸರಣಿ ಕಳೆದುಕೊಂಡಿರುವ ಕಿವೀಸ್ ಪಡೆ ನಾಳೆ ನಡೆಯುವ ಪಂದ್ಯದಲ್ಲೂ ಸ್ಟಾರ್ ಆಟಗಾರರ ಅಲಭ್ಯತೆ ಖಂಡಿತ ಕಾಡಲಿದೆ.
ಜೈಪುರ ಮತ್ತು ರಾಂಚಿಯಲ್ಲಿ ಯಶಸ್ವಿ ಚೇಸಿಂಗ್ ಮಾಡಿರುವ ರೋಹಿತ್ ಬಳಗ ಕೊನೆಯ ಪಂದ್ಯವನ್ನು ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ(Eden gardens) ನಡೆಯಲಿರುವುದರಿಂದ ಟೀಮ್ ಇಂಡಿಯಾಗೆ(Team India) ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಲು ಉತ್ತಮ ಅವಕಾಶ ದೊರೆತಿದೆ. ಅಲ್ಲದೆ ಬೆಂಚ್ ಕಾಯ್ದಿರುವ ಕೆಲವು ಆಟಗಾರರಿಗೂ ಅವಕಾಶ ನೀಡಬಹುದಾಗಿದೆ.
ಈ ಸರಣಿ ಇದೇ ಮೊದಲ ಬಾರಿಗೆ ಕೋಚ್ ಆಗಿರುವ ರಾಹುಲ್ ದ್ರಾವಿಡ್ಗೂ ಕೂಡ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದ್ದು, ಮುಂಬರುವ ಟೆಸ್ಟ್ ಸರಣಿಗೆ ಉತ್ತಮ ತಯಾರಿ ಆಗಲಿದೆ. ರೋಹಿತ್-ದ್ರಾವಿಡ್ ಜೋಡಿ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿರುವುದರಿಂದ ಕೊನೆಯ ಪಂದ್ಯದಲ್ಲಿ ಕೆಲವೊಂದು ಪರೀಕ್ಷೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ:ಪದಾರ್ಪಣೆ ಪಂದ್ಯದಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ಹರ್ಪಲ್.. ಎಬಿಡಿ ಬಗ್ಗೆ ಹೇಳಿದ್ದು ಹೀಗೆ
ಆಲ್ರೌಂಡರ್ ವಿಭಾಗಕ್ಕೆಂದು ಆಯ್ಕೆ ಮಾಡಿರುವ ವೆಂಕಟೇಶ್ ಅಯ್ಯರ್ಗೆ ಭಾನುವಾರ ಪಂದ್ಯದಲ್ಲಿ 6ನೇ ಬೌಲರ್ ಆಗಿ ಬಳಸಬಹುದಾಗಿದೆ. ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಪಡೆದಿರುವ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ಕೊಟ್ಟು, ರಾಹುಲ್ ಅಥವಾ ಸ್ವತಃ ರೋಹಿತ್ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮುಂಬರುವ ಟೆಸ್ಟ್ ಸರಣಿಯಲ್ಲಿ ರಾಹುಲ್ ಆಡಲಿರುವುದರಿಂದ ವಿಶ್ರಾಂತಿ ನೀಡುವುದು ಒಳ್ಳೆಯ ಯೋಜನೆ ಕೂಡ ಆಗಲಿದೆ. ಇನ್ನು ಆವೇಶ್ ಖಾನ್ರನ್ನು ದೀಪಕ್ ಚಾಹರ್ ಅಥವಾ ಭುವನೇಶ್ವರ್ ಬದಲಿಗೆ, ಯುಜ್ವೇಂದ್ರ ಚಹಾಲ್ರನ್ನು ಅಕ್ಷರ್ ಪಟೇಲ್ ಅಥವಾ ಅಶ್ವಿನ್ ಬದಲಿಗೆ ಕಣಕ್ಕಿಳಿಸುವ ಸಾಧ್ಯತೆ ಕೂಡ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದಲೂ ವಿಶ್ರಾಂತಿ ತೆಗೆದುಕೊಳ್ಳದ ರಿಷಭ್ ಪಂತ್ ಬದಲು ಇಶಾನ್ ಕಿಶನ್ ಮೂರನೇ ಪಂದ್ಯದಲ್ಲಿ ಆಡಿದರೆ ಅಚ್ಚರಿಯಿಲ್ಲ.
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ , ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೀ), ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್ ಯುಜ್ವೇಂದ್ರ ಚಹಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್.
ನ್ಯೂಜಿಲೆಂಡ್: ಟಿಮ್ ಸೌಥಿ (ನಾಯಕ), ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನೆ, ಡೆರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್(ವಿಕೀ) ಮತ್ತು ಇಶ್ ಸೋಧಿ.