ಬೆಂಗಳೂರು: ಟೀಂ ಇಂಡಿಯಾ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಗೂ ಇದೀಗ ಕೊರೊನಾ ದೃಢಗೊಂಡಿದೆ. ಹೀಗಾಗಿ ಐಪಿಎಲ್ನಲ್ಲಿ ಭಾಗಿಯಾಗಿದ್ದ ಮತ್ತೋರ್ವ ಪ್ಲೇಯರ್ಸ್ಗೆ ಸೋಂಕು ಖಚಿತಗೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತಾ ತಂಡದಲ್ಲಿ ಈಗಾಗಲೇ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಹಾಗೂ ಟೀಮ್ ಸೀಫರ್ಟ್ಗೆ ಕೊರೊನಾ ದೃಢಗೊಂಡಿದ್ದು, ಅದರ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ಲೇಯರ್ಗೆ ಸೋಂಕು ದೃಢಪಟ್ಟಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಮೊಟಕುಗೊಳ್ಳುತ್ತಿದ್ದಂತೆ ಪ್ರಸಿದ್ಧ್ ಕೃಷ್ಣ ಬಯೋ ಬಬಲ್ನಿಂದ ಬೆಂಗಳೂರಿಗೆ ಆಗಮಿಸಿದ್ದು, ಇಲ್ಲಿ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ಇರುವುದು ಖಚಿತಗೊಂಡಿದೆ.
ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲಿ ಕನ್ನಡಿಗನ ಮಿಂಚು: ಭಾರತೀಯ ಬೌಲರ್ಗಳ ಪೈಕಿ ಪ್ರಸಿದ್ಧ್ ಕೃಷ್ಣ ದಾಖಲೆ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಅದರಲ್ಲಿ ಪ್ರಸಿದ್ಧ್ ಕೃಷ್ಣ ಸ್ಟ್ಯಾಂಡ್ ಬೈ ಪ್ಲೇಯರ್ ಆಗಿ ಅವಕಾಶ ಪಡೆದುಕೊಂಡಿದ್ದಾರೆ.
25 ವರ್ಷದ ಪ್ರಸಿದ್ಧ್ ಕೃಷ್ಣ ಈಗಾಗಲೇ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಿಂದ ಆರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೆಕೆಆರ್ ತಂಡದ ಪರ ಪ್ರಸಿದ್ಧ್ ಕೃಷ್ಣ 7 ಪಂದ್ಯಗಳನ್ನಾಡಿದ್ದು, 8 ವಿಕೆಟ್ ಪಡೆದುಕೊಂಡಿದ್ದರು. ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಅವರು ಗುಣಮುಖರಾಗುವ ಸಾಧ್ಯತೆ ಇದೆ.