ವಾರಣಾಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಇಂದು (ಶನಿವಾರ) ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, 'ಮಹಾದೇವ' ನಗರದ ಈ ಕ್ರೀಡಾಂಗಣವನ್ನು ಶಿವ ಥೀಮ್ನಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಇದನ್ನು 'ಮಹಾದೇವ'ನಿಗೆ ಸಮರ್ಪಿಸಲಾಗುವುದು ಎಂದರು.
ಕಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದಿಂದ ಇಲ್ಲಿನ ಕ್ರೀಡಾಪಟುಗಳಿಗೆ ಪ್ರಯೋಜನವಾಗಲಿದೆ. ಈ ಕ್ರೀಡಾಂಗಣವು ಪೂರ್ವಾಂಚಲ್ ಪ್ರದೇಶಕ್ಕೆ ಮುಕುಟವಾಗಲಿದೆ. ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಿದಾಗ ಯುವ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗೇ ಸ್ಥಳೀಯ ಆರ್ಥಿಕತೆಗೆ ಉತ್ತೇಜನವಾಗುತ್ತದೆ ಎಂದರು. ಅಲ್ಲದೇ ಇದೇ ವೇಳೆ ಇಂದಿನಿಂದ ಚೀನಾದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಆಟಗಾರರಿಗೆ ಪ್ರಧಾನಮಂತ್ರಿ ಶುಭ ಕೋರಿದ್ದಾರೆ.
-
इस स्टेडियम के पूरा होने पर 30,000 से ज्यादा लोग यहां बैठकर मैच देख पाएंगे।
— BJP (@BJP4India) September 23, 2023 " class="align-text-top noRightClick twitterSection" data="
जबसे इस स्टेडियम की तस्वीरें बाहर आई है, उन्हें देखकर हर काशीवासी गदगद हो गया है।
- पीएम @narendramodi pic.twitter.com/1CgMbuO0Hl
">इस स्टेडियम के पूरा होने पर 30,000 से ज्यादा लोग यहां बैठकर मैच देख पाएंगे।
— BJP (@BJP4India) September 23, 2023
जबसे इस स्टेडियम की तस्वीरें बाहर आई है, उन्हें देखकर हर काशीवासी गदगद हो गया है।
- पीएम @narendramodi pic.twitter.com/1CgMbuO0Hlइस स्टेडियम के पूरा होने पर 30,000 से ज्यादा लोग यहां बैठकर मैच देख पाएंगे।
— BJP (@BJP4India) September 23, 2023
जबसे इस स्टेडियम की तस्वीरें बाहर आई है, उन्हें देखकर हर काशीवासी गदगद हो गया है।
- पीएम @narendramodi pic.twitter.com/1CgMbuO0Hl
ಇದೇ ಸಂದರ್ಭದಲ್ಲಿ ಮಾತನಾಡಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ಇದಾಗಿದ್ದು, ಇದರಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಕ್ರಿಕೆಟ್ ಪ್ರೇಮಿಗಳಿಗೆ ಈ ಕ್ರೀಡಾಂಗಣ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಕಪಿಲ್ ದೇವ್, ಕರ್ಸನ್ ಘಾವ್ರಿ, ದಿಲೀಪ್ ವೆಂಗ್‌ಸರ್ಕರ್, ಮದನ್ ಲಾಲ್ ಗುಂಡಪ್ಪ ವಿಶ್ವನಾಥ್, ಗೋಪಾಲ್ ಶರ್ಮಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದ್ದರು.
-
#WATCH | PM Modi lays the foundation stone of an international cricket stadium in Uttar Pradesh's Varanasi pic.twitter.com/5sAh2wZ5eA
— ANI (@ANI) September 23, 2023 " class="align-text-top noRightClick twitterSection" data="
">#WATCH | PM Modi lays the foundation stone of an international cricket stadium in Uttar Pradesh's Varanasi pic.twitter.com/5sAh2wZ5eA
— ANI (@ANI) September 23, 2023#WATCH | PM Modi lays the foundation stone of an international cricket stadium in Uttar Pradesh's Varanasi pic.twitter.com/5sAh2wZ5eA
— ANI (@ANI) September 23, 2023
ವಾರಣಾಸಿಯ ಗಂಜಾರಿ, ರಜತಲಾಬ್‌ನಲ್ಲಿ ನಿರ್ಮಿಸಲಾಗುವ ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಸ್ಟೇಡಿಯಂಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅದರ ನಿರ್ಮಾಣಕ್ಕೆ 330 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ.
-
#WATCH | Uttar Pradesh: Former Indian cricketers Sachin Tendulkar Sunil Gavaskar and Kapil Dev, BCCI Secretary Jay Shah, Rajeev Shukla, BCCI Vice-President, offered prayers at Kashi Vishwanath temple in Varanasi
— ANI (@ANI) September 23, 2023 " class="align-text-top noRightClick twitterSection" data="
(Video source - PRO Vishwanath Temple) pic.twitter.com/pWc1qWmOqR
">#WATCH | Uttar Pradesh: Former Indian cricketers Sachin Tendulkar Sunil Gavaskar and Kapil Dev, BCCI Secretary Jay Shah, Rajeev Shukla, BCCI Vice-President, offered prayers at Kashi Vishwanath temple in Varanasi
— ANI (@ANI) September 23, 2023
(Video source - PRO Vishwanath Temple) pic.twitter.com/pWc1qWmOqR#WATCH | Uttar Pradesh: Former Indian cricketers Sachin Tendulkar Sunil Gavaskar and Kapil Dev, BCCI Secretary Jay Shah, Rajeev Shukla, BCCI Vice-President, offered prayers at Kashi Vishwanath temple in Varanasi
— ANI (@ANI) September 23, 2023
(Video source - PRO Vishwanath Temple) pic.twitter.com/pWc1qWmOqR
ಈ ಕ್ರೀಡಾಂಗಣದ ವಾಸ್ತುಶಿಲ್ಪದ ಸ್ಫೂರ್ತಿವನ್ನು ಭಗವಾನ್ ಶಿವನಿಂದ ತೆಗೆದುಕೊಳ್ಳಲಾಗಿದೆ, ಇದರಲ್ಲಿ ಅರ್ಧಚಂದ್ರಾಕಾರದ ಛಾವಣಿ, ತ್ರಿಶೂಲ ಆಕಾರದ ಫ್ಲಡ್-ಲೈಟ್ಗಳು, ಘಾಟ್ ಮೆಟ್ಟಿಲುಗಳ ಆಧಾರದ ಮೇಲೆ ಆಸನ ವ್ಯವಸ್ಥೆ, ಬಿಲ್ವಿಪತ್ರ ಆಕಾರದ ಲೋಹದ ಹಾಳೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕ್ರೀಡಾಂಗಣವು 30 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರಲಿದೆ.
ಮಹಾದೇವನ ದರ್ಶನ ಪಡೆದ ಬಿಸಿಸಿಐ: ಕ್ರೀಡಾಂಗಣದ ಶಂಕುಸ್ಥಾನೆಗೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಆಟಗಾರರ ಸಮೂಹದ ಜೊತೆಗೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶಿರವೇ ಇಲ್ಲದ ಭಾರತದ ನಕ್ಷೆ ಪ್ರಕಟಿಸಿ ಕ್ಷಮೆ ಕೋರಿದ MotoGP