ETV Bharat / sports

ಶ್ರೀಲಂಕಾ-ಭಾರತ ಸರಣಿಗೆ ಹಿನ್ನಡೆ : ಬಯೋಬಬಲ್​ನಲ್ಲಿದ್ದ ಲಂಕಾ ಆಟಗಾರನಿಗೂ ಕೊರೊನಾ - ಶ್ರೀಲಂಕಾ vs ಭಾರತ ಏಕದಿನ ಸರಣಿ

ವರದಿಯ ಪ್ರಕಾರ ವೀರಕ್ಕೋಡಿ 15 ಹಿರಿಯ ಸದಸ್ಯರ ತಂಡದ ಜೊತೆ ತರಬೇತಿ ನಡೆಸಿದ್ದರು. ಅವರ ಜೊತೆ ಭಾನುಕ ರಾಜಪಕ್ಷ ಸೇರಿದಂತೆ ಇತರೆ ಕೆಲವು ಕ್ರಿಕೆಟಿಗರನ್ನು ಭಾರತದ ಸರಣಿಗೂ ಮುನ್ನ ಅಭ್ಯಾಸ ಪಂದ್ಯವನ್ನಾಡಲು ಶುಕ್ರವಾರ ದಂಬುಲಾಗೆ ಕರೆಯಿಸಿಕೊಳ್ಳಲಾಗಿತ್ತು..

ಶ್ರೀಲಂಕಾ ಕ್ರಿಕೆಟಿಗನಿಗೆ ಕೊರೊನಾ
ಶ್ರೀಲಂಕಾ ಕ್ರಿಕೆಟಿಗನಿಗೆ ಕೊರೊನಾ
author img

By

Published : Jul 10, 2021, 4:59 PM IST

ಕೊಲಂಬೊ : ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿಗೆ ಕೋವಿಡ್​-19 ಭಾರಿ ಹಿನ್ನಡೆಯನ್ನುಂಟು ಮಾಡುತ್ತಿದೆ. ಈಗಾಗಲೇ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಿದ್ದ ತಂಡದಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡು ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿದೆ. ಆದರೆ, ಈ ಪ್ರವಾಸದ ಭಾಗವಾಗಿಲ್ಲದೆ ಬಯೋಬಬಲ್​ನಲ್ಲಿ ತರಬೇತಿ ನಡೆಸುತ್ತಿದ್ದ ಆಟಗಾರನಿಗೂ ಕೊರೊನಾ ಸೋಂಕು ತಗುಲಿದೆ.

ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್​ ಮತ್ತು ಅಂಕಿ-ಅಂಶ ತಜ್ಞ ನಿರೋಶನ್ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದ ನಂತರ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಪಡೆದಿದ್ದರು. ಹಾಗಾಗಿ, ಅವರ ಜೊತೆಯಲ್ಲಿದ್ದ ಎಲ್ಲಾ ಆಟಗಾರರನ್ನು ಒಂದು ವಾರ ಕ್ವಾರಂಟೈನ್ ಮಾಡಲಾಗಿತ್ತು.

ಇತ್ತ ಭಾರತದ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ 15 ಸದಸ್ಯರ ಬೇರೆ ತಂಡವನ್ನು ಆಯ್ಕೆ ಮಾಡಿ ಬಯೋಬಬಲ್​ನಲ್ಲಿರಿಸಿತ್ತು. ಆದರೆ, ಬಯೋಬಬಲ್​ನಲ್ಲಿದ್ದ ಸಂದುನ್ ವೀರಕ್ಕೋಡಿ ಎಂಬ ಬ್ಯಾಟ್ಸ್​ಮನ್​ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಶ್ರೀಲಂಕಾದ Newswire.lk ವರದಿ ಮಾಡಿದೆ.

ವರದಿಯ ಪ್ರಕಾರ ವೀರಕ್ಕೋಡಿ 15 ಹಿರಿಯ ಸದಸ್ಯರ ತಂಡದ ಜೊತೆ ತರಬೇತಿ ನಡೆಸಿದ್ದರು. ಅವರ ಜೊತೆ ಭಾನುಕ ರಾಜಪಕ್ಷ ಸೇರಿದಂತೆ ಇತರೆ ಕೆಲವು ಕ್ರಿಕೆಟಿಗರನ್ನು ಭಾರತದ ಸರಣಿಗೂ ಮುನ್ನ ಅಭ್ಯಾಸ ಪಂದ್ಯವನ್ನಾಡಲು ಶುಕ್ರವಾರ ದಂಬುಲಾಗೆ ಕರೆಯಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಇದೀಗ ವೀರಕ್ಕೋಡಿಗೆ ಸೋಂಕು ತಗುಲಿರುವುದರಿಂದ ಹೋಟೆಲ್​ನಲ್ಲಿದ್ದ ಅಸೆಲಾ ಗುಣರತ್ನೆ, ಎಂಜೆಲೋ ಪೆರೆರಾ ಮತ್ತು ಭಾನುಕಾ ರಾಜಪಕ್ಷೆ ಸೇರಿ ಎಲ್ಲಾ ಆಟಗಾರರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಇದನ್ನು ಓದಿ:India vs Sri Lanka: ಜುಲೈ 13ರ ಬದಲು 18ರಿಂದ ODI ಸರಣಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.