ETV Bharat / sports

RCB vs SRH: ಮೊದಲೆರಡು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ವಿರಾಟ್​ ಬಳಗಕ್ಕೆ ಸಿಗುತ್ತಾ ಯಶಸ್ಸು? - ಎಬಿಡಿ

ಪ್ರಸ್ತುತ ಆರ್​ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಮತ್ತ್ತು 4 ಸೋಲು ಕಂಡಿದ್ದು, 16 ಅಂಕಗಳನ್ನು ಹೊಂದಿದೆ. ಉಳಿದ ಪಂದ್ಯಗಳನ್ನು ಗೆದ್ದು ಅಗ್ರ ಎರಡಲ್ಲಿ ಮುಗಿಸುವ ಆಲೋಚನೆಯಲ್ಲಿದೆ. 13 ಪಂದ್ಯಗಳಿಂದ 18 ಅಂಕಗಳನ್ನು ಹೊಂದಿರುವ ಸಿಎಸ್​ಕೆ 2ನೇ ಸ್ಥಾನದಲ್ಲಿದೆ. ಆದರೆ, ರನ್​ರೇಟ್​ನಲ್ಲಿ ಎಲ್ಲ ತಂಡಗಳಿಗಿಂತ ಉತ್ತಮವಾಗಿರುವುದರಿಂದ ಮೊದಲೆರಡು ಸ್ಥಾನ ಉಳಿಸಿಕೊಳ್ಳುವ ಅವಕಾಶ ಹೆಚ್ಚಿದೆ.

Sunrisers Hyderabad vs Royal Challengers Bangalore
ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಸನ್​ರೈಸರ್ಸ್​ ಬೆಂಗಳೂರು
author img

By

Published : Oct 6, 2021, 3:12 PM IST

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಈಗಾಗಲೇ ಪ್ಲೇ ಆಫ್​ ಪ್ರವೇಶಿಸಿದೆ. ಪ್ರಸ್ತುತ 3ನೇ ಸ್ಥಾನದಲ್ಲಿರುವ ವಿರಾಟ್​ ಬಳಗ ಬುಧವಾರ ನಡೆಯಲಿರುವ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಅಗ್ರ ಎರಡು ತಂಡಗಳಲ್ಲಿ ಒಂದಾಗಲು ಬಯಸುತ್ತಿದೆ.

ಪ್ರಸ್ತುತ ಆರ್​ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಮತ್ತ್ತು 4 ಸೋಲು ಕಂಡಿದ್ದು, 16 ಅಂಕಗಳನ್ನು ಹೊಂದಿದೆ. ಉಳಿದ ಪಂದ್ಯಗಳನ್ನು ಗೆದ್ದು ಅಗ್ರ ಎರಡಲ್ಲಿ ಮುಗಿಸುವ ಆಲೋಚನೆಯಲ್ಲಿದೆ. 13 ಪಂದ್ಯಗಳಿಂದ 18 ಅಂಕಗಳನ್ನು ಹೊಂದಿರುವ ಸಿಎಸ್​ಕೆ 2ನೇ ಸ್ಥಾನದಲ್ಲಿದೆ. ಆದರೆ, ರನ್​ರೇಟ್​ನಲ್ಲಿ ಎಲ್ಲ ತಂಡಗಳಿಗಿಂತ ಉತ್ತಮವಾಗಿರುವುದರಿಂದ ಮೊದಲೆರಡು ಸ್ಥಾನ ಉಳಿಸಿಕೊಳ್ಳುವ ಅವಕಾಶ ಹೆಚ್ಚಿದೆ.

ಇಂದು ಬುಧವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಬಳಗ ಸೋತು ಸುಣ್ಣವಾಗಿರುವ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯುತ್ತಿದೆ. ಮ್ಯಾಕ್ಸ್​ವೆಲ್, ಪಡಿಕ್ಕಲ್, ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಚಹಾಲ್​, ಸಿರಾಜ್​ ಮತ್ತು ಹರ್ಷಲ್ ಪಟೇಲ್​ ಅತ್ಯುತ್ತಮ ಪ್ರದರ್ಶನ ತೋರಿ ಸತತ 3 ಪಂದ್ಯಗಳಲ್ಲಿ ಗೆಲ್ಲಲು ಆರ್​ಸಿಬಿಗೆ ನೆರವಾಗಿದ್ದಾರೆ. ಹಾಗಾಗಿ ಇಂದಿನ ಪಂದ್ಯಗಳಲ್ಲಿ ಆರ್​ಸಿಬಿ ಹೆಚ್ಚಿನ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇನ್ನು ಈಗಾಗಲೇ ಲೀಗ್​ನಿಂದ ಹೊರಬಿದ್ದಿರುವ ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆದ್ದರೂ - ಸೋತರೂ ಕೊನೆಯ ಸ್ಥಾನದಿಂದ ಮೇಲೇರಲು ಸಹಾ ನೆರವಾಗುವುದಿಲ್ಲ. ಹಾಗಾಗಿ ಫ್ರಾಂಚೈಸಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ನೀಡಿ ಅವರ ಪ್ರತಿಭೆ ಅನಾವರಣ ಮಾಡುವ ಉದ್ದೇಶವನ್ನು ಮಾತ್ರ ಹೊಂದಿದೆ.

ಮುಖಾಮುಖಿ

ಎರಡೂ ತಂಡಗಳೂ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಹೈದರಾಬಾದ್​ ತಂಡ 10ರಲ್ಲಿ, ಆರ್​ಸಿಬಿ 8ರಲ್ಲಿ ಜಯ ಸಾಧಿಸಿದೆ.

ಹೈದರಾಬಾದ್​ ಸಂಭಾವ್ಯ ತಂಡ: ಜೇಸನ್ ರಾಯ್, ಡಬ್ಲ್ಯೂ ಸಾಹಾ (ವಿಕೀ), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ/ಸಿದ್ಧಾರ್ಥ್​ ಕೌಲ್, ಉಮ್ರಾನ್ ಮಲಿಕ್

ಆರ್​ಸಿಬಿ​ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಸಿರಾಜ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.