ETV Bharat / sports

ಅಮ್ಮನ ಮಡಿಲಲ್ಲಿ ಕುಳಿತು ಸಿಎಸ್‌ಕೆ ಗೆಲುವಿಗೆ ಪ್ರಾರ್ಥಿಸಿದ ಧೋನಿ ಮಗಳು ಝೀವಾ - ಐಪಿಎಲ್ 2021

ದುಬೈ ಕ್ರೀಡಾಂಗಣದ ಗ್ಯಾಲರಿಯಲ್ಲಿ ಅಮ್ಮ ಸಾಕ್ಷಿ ಧೋನಿ ಮಡಿಲ ಮೇಲೆ ಕುಳಿತು ಐಪಿಎಲ್​ ಪಂದ್ಯ ವೀಕ್ಷಿಸುತ್ತಿದ್ದ ಝೀವಾ ಧೋನಿ, ಸಿಎಸ್​ಕೆ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಫೋಟೋ ಸಖತ್​ ವೈರಲ್​ ಆಗಿದೆ.

ಝೀವಾ ಧೋನಿ
ಝೀವಾ ಧೋನಿ
author img

By

Published : Oct 5, 2021, 12:43 PM IST

ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿದ್ದು, ಈ ವೇಳೆ ಮ್ಯಾಚ್​ ವೀಕ್ಷಿಸುತ್ತಿದ್ದ ಧೋನಿ ಮಗಳು ಝೀವಾ ಧೋನಿ ಸಿಎಸ್​ಕೆ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಈ ಫೋಟೋದಲ್ಲಿ, ದುಬೈ ಕ್ರೀಡಾಂಗಣದ ಗ್ಯಾಲರಿಯಲ್ಲಿ ಅಮ್ಮ ಸಾಕ್ಷಿ ಧೋನಿಯ ಮಡಿಲ ಮೇಲೆ ಕುಳಿತಿರುವ 6 ವರ್ಷದ ಝೀವಾ, ತನ್ನ ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ಜೋಡಿಸಿ, ತಲೆ ಬಾಗಿಸಿ ಪ್ರಾರ್ಥಿಸಿಕೊಳ್ಳುತ್ತಿದ್ದಾಳೆ. ಈ ಪೋಟೋವನ್ನು ಟ್ವಿಟರ್​ ಖಾತೆಗಳಲ್ಲಿ ಹಂಚಿಕೊಂಡಿರುವ ಕೆಲವರು ತಂದೆ ಧೋನಿ ಗೆಲುವುಗಾಗಿ, ಸಿಎಸ್​ಕೆ ಗೆಲುವುಗಾಗಿ ಝೀವಾ ಬೇಡಿಕೊಳ್ಳುತ್ತಿದ್ದಾಳೆ. ಇದಕ್ಕಿಂತ ಮುದ್ದಾಗಿರುವುದು ಇನ್ನೇನಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಯುಡು ಅರ್ಧಶತಕದ ಹೊರತಾಗಿಯೂ ಸಿಎಸ್​ಕೆಯನ್ನು 136ರನ್​ಗಳಿಗೆ ನಿಯಂತ್ರಿಸಿದ ಡೆಲ್ಲಿ

ಕ್ಯೂಟ್​ ಪಿಕ್​ ಆನ್ ಇಂಟರ್​ನೆಟ್​ ಟುಡೇ ಎಂದು ಕೆಲವರು, ಝೀವಾಗೋಸ್ಕರನಾದ್ರೂ ಸಿಎಸ್​ಕೆ ಗೆಲ್ಲಬೇಕೆಂದು ಇನ್ನು ಕೆಲವರು ಹೇಳಿದ್ದಾರೆ. ಆದರೂ ನಿನ್ನೆಯ ಪಂದ್ಯದಲ್ಲಿ ಗೆಲುವು ಸಿಎಸ್​ಕೆದಾಗಿರಲಿಲ್ಲ. 19.4 ಓವರ್​ಗಳಲ್ಲೇ ಸಿಎಸ್​ಕೆ ನೀಡಿದ 136 ರನ್​ಗಳ ಸಾಧಾರಣ ಗುರಿ ತಲುಪುವಲ್ಲಿ ಡಿಸಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ಕಟ್ಟಿಹಾಕಿದ ಡೆಲ್ಲಿ... ಪಟ್ಟಿಯಲ್ಲಿ ನಂ.1!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.