ಕರಾಚಿ (ಪಾಕಿಸ್ತಾನ): ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮುಗಿದಿಲ್ಲ. ವಿಶ್ವ ಕಪ್ ಪಂದ್ಯಗಳಿಗೆ ವರ್ಷಕ್ಕೂ ಮೊದಲೇ ವೇಳಾಪಟ್ಟಿ ಬಿಡುಗಡೆ ಮಾಡಬೇಕಿದೆ. ಆದರೂ ಐಸಿಸಿ ಕ್ರೀಡಾಂಗಣ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಅಕ್ಟೋಬರ್ 5 ರಿಂದ ಪಂದ್ಯಗಳು ಆರಂಭವಾಗುತ್ತವೆ ಎಂದು ವರದಿಯಾಗಿದೆ. ಆದರೆ, ವೇಳಾಪಟ್ಟಿಗಾಗಿ ಇನ್ನೂ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಶ್ವಕಪ್ನ ತನ್ನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಯೋಜಿಸುವಂತೆ ಬೇಡಿಕೆ ಇಟ್ಟಿದೆ ಎಂದು ವರದಿಗಳು ಬಂದಿವೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ ಪ್ರತಿಕ್ರಿಯೆ ನೀಡಿದ್ದಾರೆ. ಐಸಿಸಿ ಪುರುಷರ ವಿಶ್ವಕಪ್ 2023ರ ಸಮಯದಲ್ಲಿ ಪಾಕಿಸ್ತಾನವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವ ಕಲ್ಪನೆಯನ್ನು ಯಾವುದೇ ಹಂತದಲ್ಲೂ ಯಾವುದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿಲ್ಲ ಎಂದು ಖಚಿತಪಡಿಸಿದ್ದಾರೆ.
-
PCB clarifies factual position on Asia and World Cups
— PCB Media (@TheRealPCBMedia) March 31, 2023 " class="align-text-top noRightClick twitterSection" data="
Read more⤵️https://t.co/AcFQb2xPOi
">PCB clarifies factual position on Asia and World Cups
— PCB Media (@TheRealPCBMedia) March 31, 2023
Read more⤵️https://t.co/AcFQb2xPOiPCB clarifies factual position on Asia and World Cups
— PCB Media (@TheRealPCBMedia) March 31, 2023
Read more⤵️https://t.co/AcFQb2xPOi
ಭಾರತವು ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕ್ರಿಕೆಟ್ ವಿಶ್ವಕಪ್ನ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನವು 2023 ರ ಏಷ್ಯಾ ಕಪ್ನ್ನು ಆಯೋಜಿಸಲಿದೆ. ಕೆಲವು ಮಾಧ್ಯಮ ವರದಿಗಳು ಹೈಬ್ರಿಡ್ ಮಾದರಿಯ ಪಂದ್ಯಕ್ಕೆ ಪಾಕಿಸ್ತಾನ ಮನವಿ ಮಾಡಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಐಸಿಸಿ ಪ್ರತಿಕ್ರಿಯೆ ನೀಡಿ, ಈ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ತಿಳಿಸಿದೆ.
ಏಷ್ಯಾ ಕಪ್‌ನ ಉಸ್ತುವಾರಿ ವಹಿಸಿರುವ ಏಷ್ಯಾ ಕ್ರಿಕೆಟ್ ಮಂಡಳಿಯು ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಸಲಹೆಯನ್ನು ಸ್ವೀಕರಿಸಿದೆ ಎಂದು ಸೇಥಿ ಶುಕ್ರವಾರ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಐಸಿಸಿ ಈ ವಿಚಾರವಾಗಿ ಯಾವುದೇ ಪ್ರಸ್ತಾಪ ಮಂಡನೆ ಆಗಿಲ್ಲ ಎಂದು ತಿಳಿಸಿದೆ.
ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಸೇಥಿ ಅವರು ಐಸಿಸಿ ತಿಳಿಸಿದ ವಿಚಾರವನ್ನು ಕೋಟ್ ಮಾಡಿ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅವರು," ಯಾವುದೇ ಹಂತದಲ್ಲಿ ನಾವು ಐಸಿಸಿಗೆ ತಟಸ್ಥ ಸ್ಥಳದ ಬಗ್ಗೆ ಉಲ್ಲೇಖವನ್ನು ನೀಡಿಲ್ಲ. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕುರಿತು ಯಾವುದೇ ಪ್ರಸ್ತಾಪ ಎತ್ತಿಲ್ಲ. ಈ ವಿಷಯವನ್ನು ಇದುವರೆಗೆ ಯಾವುದೇ ಐಸಿಸಿ ವೇದಿಕೆಯಲ್ಲಿ ಪ್ರಸ್ತಾಪಿಸಲಾಗಿಲ್ಲ ಮತ್ತು ಚರ್ಚಿಸಲಾಗಿಲ್ಲ" ಎಂದಿದ್ದಾರೆ.
ಪಾಕಿಸ್ತಾನವು ತಮ್ಮ ಆಟಗಳನ್ನು ತಟಸ್ಥ ಸ್ಥಳಕ್ಕೆ ಬದಲಾಯಿಸುವ ಚರ್ಚೆಯನ್ನು ಮಾಡಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಸಮೀಪವಿರುವ ಕಾರಣದಿಂದ ಸ್ಥಳವಾಗಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ಪಾಕಿಸ್ತಾನ ತಂಡವು ತನ್ನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಪಂದ್ಯಗಳನ್ನು ಭಾರತದ ಬದಲಿಗೆ ಬಾಂಗ್ಲಾದೇಶದಲ್ಲಿ ಆಡಬಹುದು ಎಂದು ಈ ಮೊದಲು ಮಾಧ್ಯಮದಲ್ಲಿ ವರದಿಯಾಗಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
ಇದನ್ನೂ ಓದಿ: IPL 2023: ಶಿಖರ್ ಧವನ್ - ರಾಜಪಕ್ಸೆ ಭರ್ಜರಿ ಜೊತೆಯಾಟ... ಕೆಕೆಆರ್ಗೆ ಸ್ಪರ್ಧಾತ್ಮಕ ಗುರಿ