ETV Bharat / sports

ಕೆಎಲ್​ ರಾಹುಲ್​ ಅಬ್ಬರ.. ಆರ್​ಸಿಬಿ ಗೆಲುವಿಗೆ 180 ರನ್​ ಟಾರ್ಗೆಟ್​ ನೀಡಿದ ಪಂಜಾಬ್​

author img

By

Published : Apr 30, 2021, 9:31 PM IST

ಪಂಜಾಬ್​ ಕ್ಯಾಪ್ಟನ್​ ರಾಹುಲ್ ಅಜೇಯ 91ರನ್​ ಹಾಗೂ ಗೇಲ್​ 46 ರನ್​ಗಳ ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್​ ಬೃಹತ್​ ರನ್​ ದಾಖಲಿಸಿದ್ದು, ಆರ್​ಸಿಬಿ ಗೆಲುವಿಗೆ ಸ್ಪರ್ಧಾತ್ಮಕ ಟಾರ್ಗೆಟ್​ ನೀಡಿದೆ.

PBKS vs RCB
PBKS vs RCB

ಅಹಮದಾಬಾದ್​: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ತಂಡ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 179ರನ್​ಗಳಿಕೆ ಮಾಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಪಂಜಾಬ್​ ಜೋಡಿ ಆರಂಭದಲ್ಲೇ ಆಘಾತ ಅನುಭವಿಸಿತು. ಕನ್ನಡಿಗ ಮಯಾಂಕ್​ ಸ್ಥಾನಕ್ಕೆ ಅವಕಾಶ ಪಡೆದ ಪ್ರಭ್ಸಿಮ್ರಾನ್ ಸಿಂಗ್​ ಕೇವಲ 7 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.

ಗೇಲ್​-ರಾಹುಲ್​ ಅಬ್ಬರ

ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಕ್ಯಾಪ್ಟನ್​ ರಾಹುಲ್​ ಸೇರಿಕೊಂಡ ಗೇಲ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು. ವಿಶೇಷವಾಗಿ ಕೈಲ್​ ಜೆಮಿಸನ್​ ಎಸೆದ ಓವರ್​ನಲ್ಲಿ ಐದು ಬೌಂಡರಿ ಸಿಡಿಸಿದರು. 24 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿ ಸೇರಿದಂತೆ 46ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.

ಇವರ ವಿಕೆಟ್​ ಬಿಳುತ್ತಿದ್ದಂತೆ ಬಂದ ಬ್ಯಾಟ್ಸಮನ್​ಗಳಾದ ಪೂರನ್​(0), ಹೂಡಾ(5), ಶಾರುಖ್​ ಖಾನ್​(0) ನಿರಾಸೆ ಮೂಡಿಸಿದರು.

ಏಕಾಂಗಿಯಾಗಿ ಅಬ್ಬರಿಸಿದ ಕ್ಯಾಪ್ಟನ್​

ವಿಕೆಟ್​ ಬಿಳುತ್ತಿದ್ದರೂ ಮೈದಾನದಲ್ಲಿ ಕಚ್ಚಿ ನಿಂತ ಕ್ಯಾಪ್ಟನ್​ ಕೆಎಲ್​ ರಾಹುಲ್​​ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರು. ತಾವು ಎದುರಿಸಿದ 57 ಎಸೆತಗಳಲ್ಲಿ 5 ಸಿಕ್ಸರ್​, 7 ಬೌಂಡರಿ ಸೇರಿದಂತೆ ಅಜೇಯ 91ರನ್​ಗಳಿಕೆ ಮಾಡಿದರು. ಇವರಿಗೆ ಹರ್​ಪ್ರೀತ್​ ಬ್ರಾರ್ ಉತ್ತಮ ಸಾಥ್ ನೀಡಿದರು. ತಾವು ಎದುರಿಸಿದ 17 ಎಸೆತಗಳಲ್ಲಿ 2 ಸಿಕ್ಸರ್​​ 1 ಬೌಂಡರಿ ಸೇರಿ 25 ರನ್​ಗಳಿಕೆ ಮಾಡಿದರು.

ಆರ್​ಸಿಬಿ ಪರ ಕೈಲ್​ ಜೆಮಿಸನ್ ಎರಡು ವಿಕೆಟ್​, ಚಹಲ್​, ಅಹ್ಮದ್​ ಹಾಗೂ ಸ್ಯಾಮ್ಸ್ ತಲಾ 1 ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.