ETV Bharat / sports

ಒಂದೇ ತಂಡದ ವಿರುದ್ಧ ಹೆಚ್ಚು ರನ್​; ವಾರ್ನರ್​ - ರೋಹಿತ್ ಹಿಂದಿಕ್ಕಿದ ಶಿಖರ್ ಧವನ್ ​ - ಇಂಡಿಯನ್ ಪ್ರೀಮಿಯರ್ ಲೀಗ್

ಐಪಿಎಲ್​ನಲ್ಲಿ ತಮ್ಮ 200ನೇ ಪಂದ್ಯವನ್ನಾಡುತ್ತಿರುವ ಶಿಖರ್ ಧವನ್​ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 1000 ರನ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Shikhar Dhawan becomes first man to complete 1,000 runs against Chennai Super Kings
ಶಿಖರ್ ಧವನ್ vs ಚೆನ್ನೈ ಸೂಪರ್ ಕಿಂಗ್ಸ್
author img

By

Published : Apr 25, 2022, 10:06 PM IST

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್​ ಶಿಖರ್ ಧವನ್​ ಸೋಮವಾರ ವಾಂಖೆಡೆಯಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್​ನಲ್ಲಿ ತಮ್ಮ 200ನೇ ಪಂದ್ಯವನ್ನಾಡುತ್ತಿರುವ ಶಿಖರ್ ಧವನ್​ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 1000 ರನ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್​ನಲ್ಲಿ ಕೇವಲ ಇಬ್ಬರು ಬ್ಯಾಟರ್​​ಗಳು ಮಾತ್ರ ಒಂದೇ ತಂಡದ ವಿರುದ್ಧ 1000 ರನ್​ ಸಿಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 1018 ರನ್​ ಮತ್ತು ಡೇವಿಡ್ ವಾರ್ನರ್​ ಪಂಜಾಬ್ ಕಿಂಗ್ಸ್ ವಿರುದ್ಧ 1005 ರನ್​ಗಳಿಸಿದ್ದಾರೆ. ಇದೀಗ ಧವನ್​ ​ ಸಿಎಸ್​ಕೆ ವಿರುದ್ಧ 1029 ರನ್​ಗಳಿಸುವ ಮೂಲಕ ಲೀಗ್​ನಲ್ಲಿ ಒಂದೇ ತಂಡದ ವಿರುದ್ಧ ಗರಿಷ್ಠ ರನ್​ ದಾಖಲಿಸಿದ ಬ್ಯಾಟರ್​ ಎಂಬ ವಿಶೇಷ ದಾಖಲೆಗೆ ಪಾತ್ರರಾದರು.

ಈ ಮೂವರು ಬ್ಯಾಟರ್​ಗಳನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟರ್​ ಒಂದೇ ತಂಡದ ವಿರುದ್ಧ 1000 ರನ್​ಗಳಿಸಿಲ್ಲ. ಆದರೆ, ವಾರ್ನರ್​ ಕೆಕೆಆರ್ ವಿರುದ್ಧ 976, ವಿರಾಟ್​ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 949, ಮತ್ತು ಡೆಲ್ಲಿ ವಿರುದ್ಧ 925 ರನ್​ ಹಾಗೂ ರೋಹಿತ್ ಶರ್ಮಾ ಡೆಲ್ಲಿ ವಿರುದ್ಧ 910ರನ್​ಗಳಿಸಿ 1000 ರನ್​ಗಳ ಹೊಸ್ತಿಲಲ್ಲಿದ್ದಾರೆ.

59 ಎಸೆತಗಳಲ್ಲಿ ಅಜೇಯ 88 ರನ್​ಗಳಿಸಿದ ಶಿಖರ್ ಧವನ್​ ಇದೇ ಇನ್ನಿಂಗ್ಸ್​ ಐಪಿಎಲ್​ನಲ್ಲಿ 6000 ರನ್​ ಪೂರೈಸಿದರು. ವಿರಾಟ್​ ಕೊಹ್ಲಿ ಮಾತ್ರ ಈ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜೊತೆಗೆ ಟಿ-20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ಗಳ ಗಡಿ ದಾಟಿದ್ದಾರೆ.

ಇದನ್ನೂ ಓದಿ:ತಮಗಿಂತ 28 ವರ್ಷದ ಕಿರಿಯಳೊಂದಿಗೆ 2ನೇ ವಿವಾಹವಾಗಲಿದ್ದಾರೆ 66 ವರ್ಷದ ಮಾಜಿ ಕ್ರಿಕೆಟಿಗ ಅರುಣ್​ ಲಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.