ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಆಡುವುದಿಲ್ಲವೆಂದು ಟ್ವೀಟ್ ಮಾಡಿದ್ದಾರೆ. ಮುಂದಿನ 12 ತಿಂಗಳು ಅಂತಾರಾಷ್ಟ್ರೀಯ ವೇಳಾಪಟ್ಟಿಯು ಹೆಚ್ಚು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ಕೂಡಿದ್ದು, ಆಶಸ್ ಸರಣಿ ಮತ್ತು ವಿಶ್ವಕಪ್‌ಗೆ ಮುಂಚಿತವಾಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಕೆಕೆಆರ್ ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗೆ ಧನ್ಯವಾದ ಹೇಳುವ ಮೂಲಕ ಟ್ವೀಟ್ ಮಾಡಿದ್ದಾರೆ. ಮತ್ತು ಆದಷ್ಟು ಬೇಗ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಮುಂದಿನ ವರ್ಷ ಜೂನ್‌ನಲ್ಲಿ ಪ್ರಾರಂಭವಾಗುವ ಆಶಸ್ ಸರಣಿಯಲ್ಲಿ ಕಮ್ಮಿನ್ಸ್ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಂಡ ಜಯಗಳಿಸಲು ಉತ್ತಮ ಅವಕಾಶವಿದೆ. ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದ್ದು, ಇದರ ಜವಾಬ್ದಾರಿ ಹೆಚ್ಚಾಗಿರುವ ಹಿನ್ನೆಲೆ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧಾರವನ್ನು ಕೈಗೊಂಡಿದ್ದಾರೆ.
-
I’ve made the difficult decision to miss next years IPL. The international schedule is packed with Tests and ODI’s for the next 12 months, so will take some rest ahead of an Ashes series and World Cup. pic.twitter.com/Iu0dF73zOW
— Pat Cummins (@patcummins30) November 14, 2022 " class="align-text-top noRightClick twitterSection" data="
">I’ve made the difficult decision to miss next years IPL. The international schedule is packed with Tests and ODI’s for the next 12 months, so will take some rest ahead of an Ashes series and World Cup. pic.twitter.com/Iu0dF73zOW
— Pat Cummins (@patcummins30) November 14, 2022I’ve made the difficult decision to miss next years IPL. The international schedule is packed with Tests and ODI’s for the next 12 months, so will take some rest ahead of an Ashes series and World Cup. pic.twitter.com/Iu0dF73zOW
— Pat Cummins (@patcummins30) November 14, 2022
ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಕಮ್ಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 7.25 ಕೋಟಿ ರೂಗೆ ಖರೀದಿಸಿತು. ಆ ವರ್ಷ ಆಡಿದ ಐದು ಪಂದ್ಯಗಳಿಂದ ಏಳು ವಿಕೆಟ್‌ಗಳನ್ನು ಕೆಡವಿ, ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ತೋರಿಸಿದ್ದರು. ಆದರೇ ಈ ವರ್ಷ ಐಪಿಎಲ್ ನಲ್ಲಿ ಕಾಣಿಸಿಕೊಳ್ಳದಿರುವುದು ಕ್ರಿಕೆಟ್ ಆಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಉಳಿದ IPL ಪಂದ್ಯಗಳಲ್ಲಿ ನಾನು ಆಡುವುದು ಡೌಟ್: ಪ್ಯಾಟ್ ಕಮ್ಮಿನ್ಸ್