ETV Bharat / sports

ಕೊಹ್ಲಿ, ವಿಲಿಯಮ್ಸ​ರಂತೆ ರಿಷಭ್ ಪಂತ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲರು: ರಿಕಿ ಪಾಂಟಿಂಗ್ - ಡೆಲ್ಲಿ ಕ್ಯಾಪಿಟಲ್ಸ ತಂಡದ ನಾಯಕ

ಶ್ರೇಯಸ್ ಅಯ್ಯರ್ ಗಾಯದ ಕಾರಣ ಐಪಿಎಲ್​ನಿಂದ ಹೊರ ಬಿದ್ದ ಮೇಲೆ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದರು. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದರು.

ರಿಕಿ ಪಾಂಟಿಂಗ್- ರಿಷಭ್ ಪಂತ್
ರಿಕಿ ಪಾಂಟಿಂಗ್- ರಿಷಭ್ ಪಂತ್
author img

By

Published : Apr 14, 2021, 5:01 PM IST

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕೋಚ್​ ರಿಕಿ ಪಾಂಟಿಂಗ್ ಯುವ ಆಟಗಾರ ರಿಷಭ್ ಪಂತ್​ ಅವರನ್ನು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಕಿವೀಸ್ ನಾಯಕ ವಿಲಿಯಮ್ಸನ್​ಗೆ ಹೋಲಿಕೆ ಮಾಡಿದ್ದು, ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಕೊನೆಯ ತನಕ ಇದ್ದರೆ ತಂಡವನ್ನು ಗೆಲುವಿನ ದಡ ದಾಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ಗಾಯದ ಕಾರಣ ಐಪಿಎಲ್​ನಿಂದ ಹೊರ ಬಿದ್ದ ಮೇಲೆ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದರು. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದರು.

" ರಿಷಭ್ ಪಂತ್​ ಕೀಪಿಂಗ್ ಕುರಿತು ಯಾವಾಗಲೂ ಪ್ರಶ್ನೆಯಿರುತ್ತಿತ್ತು. ಆದರೆ ಕೀಪಿಂಗ್​ನಲ್ಲಿ ಅವರ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆದರೆ, ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಅವರು ಟರ್ನಿಂಗ್ ಪಿಚ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಾನು ಅಂದುಕೊಂಡಿದ್ದಕ್ಕಿಂತ ಅತ್ಯುತ್ತಮವಾಗಿ ಕೀಪಿಂಗ್ ಮಾಡಿದ್ದಾರೆ. ಅವರು ತಮ್ಮ ವಿಕೆಟ್​ ಕೀಪಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳುವುದು ಮುಂದುವರಿಸಿದರೆ, ಮುಂದಿನ 10ರಿಂದ 12 ವರ್ಷಗಳ ಕಾಲ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆಗಲಿದ್ದಾರೆ. ಅವರು ತಂಡದಲ್ಲಿರುವುದು ಅದ್ಭುತ ಮತ್ತು ಅವರು ಸದಾ ಸ್ಪರ್ಧೆಯಲ್ಲಿರಲು ಇಷ್ಟಪಡುತ್ತಾರೆ" ಎಂದು cricket.com.au.ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ರಿಷಭ್ ಪಂತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್​ನಲ್ಲಿ ನಡೆದಿದ್ದ 4ನೇ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದರು.

ಕಳೆದ ವರ್ಷ ಅವರ ಪ್ರದರ್ಶನ ನಮಗೆ ನಿರಾಸೆ ತಂದಿತ್ತು. ಲಾಕ್​ಡೌನ್​ ವೇಳೆ ಹೆಚ್ಚಿನ ತೂಕವನ್ನು ಹೊಂದಿದ್ದರು. ಅದರ ಮಧ್ಯದಲ್ಲಿ ಮಂಡಿರಜ್ಜುಗೆ ಒಳಗಾಗಿದ್ದರು. ಮತ್ತೆ ತಂಡಕ್ಕೆ ಸೇರಿದ ನಂತರವೂ ನಿರೀಕ್ಷಿಸಿದಷ್ಟು ಪ್ರದರ್ಶನ ಕಂಡು ಬರಲಿಲ್ಲ. ಈಗ ಅವರು ಸಂಪೂರ್ಣ ಫಿಟ್ ಅಗಿರುವುದನ್ನು ನೋಡಬಹುದು ಮತ್ತು ಈಗಾಗಲೇ ಹಲವು ಪಂದ್ಯಗಳನ್ನು ಭಾರತಕ್ಕಾಗಿ ಗೆಲ್ಲಿಸಿಕೊಡುತ್ತಿದ್ದಾರೆ. ಡೆಲ್ಲಿ ತಂಡಕ್ಕೂ ಅವರ ಆಟ ಉಪಯುಕ್ತವಾಗಿದೆ.

ಈ ಐಪಿಎಲ್​ನ ನಮ್ಮ ಬಹುದೊಡ್ಡ ಟ್ರಿಕ್​ ಅಂದರೆ ಅವರ ಬ್ಯಾಟಿಂಗ್ ಕ್ರಮಾಂಕ, ನಾವು ಅವರನ್ನು ಆದಷ್ಟು ಬೇಗ ಕರೆತರಲು ಬಯಸಿದ್ದೇವೆ. ಪಂತ್ ಖಂಡಿತ ವಿರಾಟ್ ಕೊಹ್ಲಿ ಅಥವಾ ಕೇನ್ ವಿಲಿಯಮ್ಸನ್ ಅವರಂತಹ ಆಟಗಾರ. ಅವರು ಕೊನೆಯವರೆಗೂ ಇದ್ದರೆ, ನೀವು ಹೆಚ್ಚಿನ ಪಂದ್ಯಗಳನ್ನು ಗೆಲ್ಲಲಿದ್ದೀರಿ " ಎಂದು ಆಸೀಸ್ ಮಾಜಿ ನಾಯಕ ಹೇಳಿದ್ದಾರೆ.

ಇದನ್ನು ಓದಿ: ಕ್ವಾರಂಟೈನ್​ಲ್ಲಿದ್ದಾಗಲೇ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಎನ್ರಿಚ್​ ನೋಕಿಯಾಗೆ ಕೊರೊನಾ ಧೃಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.