ದುಬೈ: ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅತ್ಯುತ್ತಮ ಫಾರ್ಮ್ನಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಶೋಯಬ್ ಮಲಿಕ್ಗೆ ಜ್ವರ ಕಾಣಿಸಿಕೊಂಡಿದ್ದು ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಿಸಿದೆ.
ಎರಡನೇ ಸೆಮಿಫೈನಲ್ ಪಂದ್ಯ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿದೆ. ವರದಿಗಳ ಪ್ರಕಾರ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ರಿಜ್ವಾನ್ ಹಾಗೂ ಕಳೆದ ಪಂದ್ಯದಲ್ಲಿ ಮಿಂಚಿದ್ದ ಅನುಭವಿ ಶೋಯಬ್ ಮಲಿಕ್ ಬುಧವಾರ ತಂಡ ಮಾಡುವ ಸಂದರ್ಭದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರಿಬ್ಬರಿಗೆ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಪಿಸಿಬಿ ಮಾಧ್ಯಮ ವ್ಯವಸ್ಥಾಪಕ ಇಬ್ಬರು ಆಟಗಾರರಿಗೆ ಜ್ವರ ಇರುವುದನ್ನ ಖಾತ್ರಿ ಪಡಿಸಿದ್ದಾರೆ.
ಸಮಾಧಾನಕರ ವಿಷಯವೆಂದರೆ ಇಬ್ಬರಿಗೂ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ಬಂದಿದ್ದು, ನಾಳಿನ ಪಂದ್ಯಕ್ಕೂ ಮುನ್ನ ಫಿಟ್ನೆಸ್ ನೋಡಿ ಅವರಿಬ್ಬರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಪಿಸಿಬಿ ಮೀಡಿಯಾ ಮ್ಯಾನೇಜರ್ ತಿಳಿಸಿದ್ದಾರೆಂದು ವರದಿಗಳಿದು ಬಂದಿದೆ.
ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್ನಲ್ಲಿ ಟಿ20 ಕ್ರಿಕೆಟ್ನಲ್ಲಿ 1650 ರನ್ಗಳಿಸಿದ್ದಾರೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ 5 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಿತ 214 ರನ್ಗಳಿಸಿದ್ದಾರೆ. ಮಲಿಕ್ 3 ಇನ್ನಿಂಗ್ಸ್ಗಳಿಂದ 99 ರನ್ಗಳಿಸಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು.
ಇದನ್ನೂ ಓದಿ:T20I world cup: ಇಂಗ್ಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕಿವೀಸ್
ಯಶಸ್ಸಿನ ಶಿಖರದಲ್ಲಿ ಕಿವೀಸ್: ಸತತ 3 ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿದ ವಿಲಿಯಮ್ಸನ್ ಪಡೆ