ಢಾಕಾ: ಕೊನೆಯ ಓವರ್ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಆತಿಥೇಯ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ 3-0ಯಲ್ಲಿ (Pakistan vs Bangladesh) ಟಿ20 ಸರಣಿಯನ್ನು (T20I series) ಕ್ಲೀನ್ ಸ್ವೀಪ್ ಸಾಧಿಸಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ (Sher Bangla National Stadium, Dhaka) ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಇಂದಿನ ಪಂದ್ಯದಲ್ಲೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲ ಎರಡು ಪಂದ್ಯಗಳಂತೆ ಇಂದಿನ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 124 ರನ್ಗಳ ಸಾಧಾರಣ ಮೊತ್ತ ದಾಖಲಿಸಿತು.
ಮೊಹಮ್ಮದ್ ನಯೀಮ್ 50 ಎಸೆತಗಳಲ್ಲಿ 47 ರನ್, ಶಮೀಮ್ ಹೊಸೇನ್ 22 ಮತ್ತು ಅಫೀಫ್ ಹೊಸೇನ್ 20 ರನ್ಗಳಿಸಿದ್ದರು.
ಪಾಕಿಸ್ತಾನದ ಪರ ಮೊಹಮ್ಮದ್ ವಾಸೀಮ್ ಜೂನಿಯರ್ 15ಕ್ಕೆ2, ಉಸ್ಮಾನ್ ಖಾದಿರ್ 35ಕ್ಕೆ 2, ಹ್ಯಾರೀಸ್ ರವೂಫ್ 32ಕ್ಕೆ 1 ಹಾಗೂ ಶಹ್ನಾವಾಜ್ ದಹನಿ 24ಕ್ಕೆ1 ವಿಕೆಟ್ ಪಡೆದರು.
125 ರನ್ಗಳ ಗುರಿಯನ್ನು ಪಾಕಿಸ್ತಾನ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು. ಕೊನೆಯ ಎಸೆತದಲ್ಲಿ ಅಗತ್ಯವಿದ್ದ ಒಂದು ರನ್ಅನ್ನು ಮೊಹಮ್ಮದ್ ನವಾಜ್ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.
ಮೊಹ್ಮಮದ್ ರಿಜ್ವಾನ್ 43 ಎಸೆತಗಳಲ್ಲಿ 40, ಹೈದರ್ ಅಲಿ 38 ಎಸೆತಗಳಲ್ಲಿ 45, ಬಾಬರ್ ಅಜಮ್ 19 ರನ್ಗಳಿಸಿದರು.
ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಹೊರಬಿದ್ದಿದ್ದ ಪಾಕಿಸ್ತಾನ ತಂಡ ಇದೀಗ ಸತತ 3ನೇ ಟಿ20 ಗೆಲ್ಲುವ ಮೂಲಕ ಟಿ20 ಕ್ರಿಕೆಟ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ.
ಇದನ್ನೂ ಓದಿ:Syed Mushtaq Ali : ಫೈನಲ್ 'ಓವರ್'ನಲ್ಲಿ ಎಡವಿದ ಕರ್ನಾಟಕ : ತಮಿಳುನಾಡು 3ನೇ ಬಾರಿ ಚಾಂಪಿಯನ್